ದಾದಾಗೆ BCCI ಅಧ್ಯಕ್ಷ ಗಾದಿ: ಗಂಗೂಲಿ ಮುಂದಿ​ರುವ ಸವಾ​ಲು​ಗಳೇ​ನು?

By Web Desk  |  First Published Oct 15, 2019, 4:20 PM IST

ಬಿಸಿಸಿಐ ನೂತನ ಅಧ್ಯಕ್ಷರಾಗಲಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಿರುವ ಸವಾಲುಗಳೇನು..? ಟೀಂ ಇಂಡಿಯಾ ನಾಯಕನಂತೆ, ಬಿಸಿಸಿಐ ಅಧ್ಯಕ್ಷನಾಗಿಯೂ ಯಶಸ್ವಿಯಾಗುತ್ತಾರಾ ದಾದಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ... 


ನವದೆಹಲಿ[ಅ.15]: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಅಧ್ಯಕ್ಷ ಹುದ್ದೆಗೇರಲು ರೆಡಿಯಾಗಿದ್ದಾರೆ. ಆದರೆ ಈ ಹುದ್ದೆ ಹೂವಿನ ಹಾಸಿಗೆಯೇನಲ್ಲ.

ಗಂಗೂಲಿ ಕೇವಲ 9 ತಿಂಗ​ಳು​ಗಳ ಕಾಲ ಬಿಸಿ​ಸಿಐ ಅಧ್ಯಕ್ಷರಾಗಿ ಇರ​ಲಿ​ದ್ದು, ಅವರ ಮುಂದೆ ಹಲವು ಸವಾ​ಲು​ಗ​ಳಿವೆ. ಮೊದ​ಲಿಗೆ ಬಿಸಿ​ಸಿಐ ಘನತೆ ಹೆಚ್ಚಿ​ಸುವ ಕೆಲಸವನ್ನು ಅವರು ಮಾಡ​ಬೇ​ಕಿದೆ. ಫಿಕ್ಸಿಂಗ್‌, ಬೆಟ್ಟಿಂಗ್‌, ಡೋಪಿಂಗ್‌, ವಯೋ​ಮಿತಿ ಮೋಸ ಪ್ರಕ​ರ​ಣ​ಗ​ಳಿಗೆ ಕಡಿ​ವಾಣ ಹಾಕಲು ಯೋಜನೆಗಳನ್ನು ರೂಪಿ​ಸ​ಬೇ​ಕಿದೆ. ಸ್ವಹಿ​ತಾ​ಸಕ್ತಿ ಸಮಸ್ಯೆ ಜೋರಾ​ಗಿದ್ದು, ಇದಕ್ಕೆ ಸೂಕ್ತ ಪರಿ​ಹಾರ ಕಂಡು​ಕೊ​ಳ್ಳ​ಬೇ​ಕಿದೆ.

Tap to resize

Latest Videos

undefined

BCCI ಅಧ್ಯಕ್ಷ ಹುದ್ದೆ: ದಾದಾಗೆ ಸಾಥ್ ಕೊಟ್ಟ ಹಳೆ ಹುಲಿಗಳು

ಐಸಿಸಿ ಶಾಕ್‌! 

ಗಂಗೂಲಿ ಅಧ್ಯಕ್ಷರಾಗು​ತ್ತಿ​ದ್ದಂತೆ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಜತೆ ಗುದ್ದಾ​ಡ​ಬೇ​ಕಿದೆ. ಐಸಿಸಿ ಹಾಗೂ ಬಿಸಿ​ಸಿಐ ನಡುವೆ ಹಣ​ಕಾಸು ಹಂಚಿಕೆ ವಿಚಾರವಾಗಿ ಸಮರ ಆರಂಭ​ಗೊ​ಳ್ಳುವ ಸಾಧ್ಯತೆ ದಟ್ಟ​ವಾ​ಗಿದೆ. ಪ್ರತಿ ವರ್ಷ ಟಿ20 ವಿಶ್ವ​ಕಪ್‌ ಹಾಗೂ 3 ವರ್ಷ​ಕ್ಕೊಮ್ಮೆ ಏಕ​ದಿನ ವಿಶ್ವ​ಕಪ್‌ ನಡೆ​ಸಲು ಐಸಿಸಿ ಪ್ರಸ್ತಾಪವಿರಿ​ಸಿದೆ. ಆ ಮೂಲಕ ಪ್ರಸಾರ ಹಕ್ಕು ಹಣದಲ್ಲಿ ಸಿಂಹ​ಪಾಲು ಪಡೆ​ಯಲು ಐಸಿ​ಸಿ ಮುಂದಾ​ಗಿದೆ. ಇದಕ್ಕೆ ಬಿಸಿ​ಸಿಐ ವಿರೋಧ ವ್ಯಕ್ತ​ಪ​ಡಿ​ಸಿದೆ. ಗಂಗೂಲಿ ಹಾಗೂ ಅವರ ತಂಡ ಬಿಸಿ​ಸಿಐಗೆ ನಷ್ಟ​ವಾ​ಗ​ದಂತೆ ನೋಡಿ​ಕೊ​ಳ್ಳ​ಬೇ​ಕಿದೆ.

ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ, ಬ್ರಿಜೇಶ್‌ ಪಟೇಲ್‌ಗೆ ಐಪಿಎಲ್ ಹೊಣೆ?

ಬಿಸಿ​ಸಿಐನಲ್ಲೂ ಗಂಗೂ​ಲಿಗೆ ಸಿಗುತ್ತಾ ಯಶ​ಸ್ಸು?

ಸೌರವ್‌ ಗಂಗೂಲಿ ಭಾರತ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ನಾಯಕರ ಪೈಕಿ ಒಬ್ಬರು. ಸಾರ್ವ​ಕಾ​ಲಿಕ ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್‌ಗಳ ಪೈಕಿ ಪ್ರಮು​ಖರು. ಭಾರತ ಪರ 113 ಟೆಸ್ಟ್‌, 311 ಏಕ​ದಿನ ಪಂದ್ಯ​ಗ​ಳ​ನ್ನಾ​ಡಿ​ರುವ ಗಂಗೂಲಿ 18000ಕ್ಕೂ ಹೆಚ್ಚು ಅಂತಾ​ರಾ​ಷ್ಟ್ರೀಯ ರನ್‌ ಕಲೆಹಾಕಿ​ದ್ದಾರೆ. 2000ರಿಂದ 2005ರ ವರೆಗೂ ಭಾರತ ತಂಡದ ನಾಯ​ಕ​ರಾ​ಗಿದ್ದ ಗಂಗೂಲಿ, ತಂಡ​ದಲ್ಲಿ ಹಲವು ಬದ​ಲಾ​ವಣೆಗಳನ್ನು ತಂದಿ​ದ್ದರು. ಅವರ ನಾಯ​ಕತ್ವದಲ್ಲಿ ತಂಡ 2003ರ ಏಕ​ದಿನ ವಿಶ್ವ​ಕಪ್‌ ಫೈನಲ್‌ಗೇರಿತ್ತು. ಒಬ್ಬ ಕ್ರಿಕೆ​ಟಿಗನಾಗಿ ಅಪಾರ ಯಶಸ್ಸು ಗಳಿ​ಸಿದ್ದ ಗಂಗೂಲಿ, ಬಿಸಿ​ಸಿಐ ಅಧ್ಯಕ್ಷರಾಗಿಯೂ ಯಶಸ್ಸು ಸಾಧಿ​ಸುತ್ತಾರಾ ಎನ್ನುವ ಕುತೂ​ಹ​ಲ​ವಿದೆ.
 

click me!