ಲಂಕಾದಲ್ಲಿ ಅಭ್ಯಾಸ ಆರಂಭಿಸಿದ ಧವನ್‌ ಪಡೆ

By Suvarna News  |  First Published Jul 3, 2021, 9:17 AM IST

* ಲಂಕಾ ನೆಲದಲ್ಲಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

* ಲಂಕಾದಲ್ಲಿ ಟೀಂ ಇಂಡಿಯಾ ಮುನ್ನಡೆಸಲಿರುವ ಶಿಖರ್ ಧವನ್

* ಲಂಕಾ ಪ್ರವಾಸದಲ್ಲಿ ಸೀಮಿತ ಓವರ್‌ಗಳ ಸರಣಿ ಆಡಲಿರುವ ಟೀಂ ಇಂಡಿಯಾ


ಕೊಲಂಬೊ(ಜು.03): ಏಕದಿನ ಹಾಗೂ ಟಿ20 ಸರಣಿಯನ್ನು ಆಡಲು ಶ್ರೀಲಂಕಾಕ್ಕೆ ತೆರಳಲಿರುವ ಭಾರತ ತಂಡ ಶುಕ್ರವಾರದಿಂದ ಅಭ್ಯಾಸ ಆರಂಭಿಸಿತು. ಶಿಖರ್‌ ಧವನ್‌ ನೇತೃತ್ವದ ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ನಿರ್ದೇಶಕ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿದ್ದಾರೆ. 

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕಿದು ಕೊನೆಯ ಅಂತಾರಾಷ್ಟ್ರೀಯ ಸೀಮಿತ ಓವರ್‌ ಸರಣಿ ಇದಾಗಿದ್ದು, ಐಪಿಎಲ್‌ ತಾರೆಗಳು ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಈ ಸರಣಿಯನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಲಂಕಾ ವಿರುದ್ಧ ಭಾರತ 3 ಏಕದಿನ, 3 ಟಿ20 ಪಂದ್ಯಗಳನ್ನು ಆಡಲಿದೆ. 

📸📸 Snapshots from 's first training session in Sri Lanka 💪💪 pic.twitter.com/hzBx8DNye2

— BCCI (@BCCI)

Latest Videos

ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದರೆ, ಮತ್ತೊಂದೆಡೆ ಧವನ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಲಂಕಾಗೆ ಬಂದಿಳಿದು ಹೋಟೆಲ್‌ ಕ್ವಾರಂಟೈನ್‌ ಪೂರೈಸಿದೆ. ಜು.13ರಿಂದ ಏಕದಿನ ಸರಣಿ ಅರಂಭಗೊಳ್ಳಲಿದೆ. 3 ಪಂದ್ಯಗಳ ಏಕದಿನ ಸರಣಿಯ ಬಳಿಕ ಧವನ್‌ ಪಡೆ ಕೊನೆಯಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. 

ಲಂಕಾಗೆ ಬಂದಿಳಿದ ಟೀಂ ಇಂಡಿಯಾಗೆ ಕಠಿಣ ಕ್ವಾರಂಟೈನ್‌

ಶ್ರೀಲಂಕಾ ಪ್ರವಾಸಕ್ಕೆ ಮೂವರು ಕರ್ನಾಟಕದ ಆಟಗಾರರು ಆಯ್ಕೆಯಾಗಿದ್ದು, ಯುವ ಪ್ರತಿಭಾನ್ವಿತ ಆಟಗಾರ ದೇವದತ್ ಪಡಿಕ್ಕಲ್ ಹಾಗೂ ಅನುಭವಿ ಸ್ಪಿನ್ನರ್ ಕೃಷ್ಣಪ್ಪ ಗೌತಮ್‌ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಕನಸು ಕಾಣುತ್ತಿದ್ದಾರೆ. ಇನ್ನು ಮನೀಶ್ ಪಾಂಡೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ. 

 

click me!