ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಿಚ್‌ಗೆ ನಮಸ್ಕರಿಸಿದ ಕೆಎಲ್ ರಾಹುಲ್, ಟೆಸ್ಟ್ ಕ್ರಿಕೆಟ್‌ಗೆ ವಿದಾಯ?

By Chethan Kumar  |  First Published Oct 21, 2024, 7:10 PM IST

ಪುಣೆ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಕೈಬಿಡುವ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಕೆಎಲ್ ರಾಹುಲ್ ಬೆಂಗಳೂರು ಪಂದ್ಯದ ಬಳಿಕ ಪಿಚ್ ಮುಟ್ಟಿ ನಮಸ್ಕರಿಸಿದ ನಡೆ ವಿದಾಯದ ಸಜ್ಜಾಗಿದ್ದಾರ ಅನ್ನೋ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ.


ಬೆಂಗಳೂರು(ಅ.21) ನ್ಯೂಜಿಲೆಂಡ್ ವಿರುದ್ದದ ಬೆಂಗಳೂರು ಟೆಸ್ಟ್ ಪಂದ್ಯದ ಸೋಲಿನ ಬಳಿಕ ಕೆಎಲ್ ರಾಹುಲ್ ಹೋಮ್ ಗ್ರೌಂಡ್ ಪಿಚ್ ಮುಟ್ಟಿ ನಮಸ್ಕರಿಸಿದ್ದು ಗೊತ್ತೆ ಇದೆ. ಆದರೆ ಈ ನಡೆ ಹಿಂದೆ ವಿದಾಯದ ಸಂದೇಶ ರವಾನಿಸಿದ್ರಾ? ಅನ್ನೋ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ. ಪುಣೆ ಟೆಸ್ಟ್ ಪಂದ್ಯದಿಂದ ರಾಹುಲ್ ಕೈಬಿಡುವ ಮಾತುಗಳು ಕೇಳಿಬರುತ್ತಿದೆ. ಈ ಸೂಚನೆ ಮೊದಲೇ ಸಿಕ್ಕಿದ್ದ ಕಾರಣ ಬೆಂಗಳೂರು ಟೆಸ್ಟ್ ಪಂದ್ಯದ ಸೋಲಿನ ಬಳಿಕ ಕೆಎಲ್ ರಾಹುಲ್ ಹೋಮ್ ಗ್ರೌಂಡ್ ಪಿಚ್‌ ಮುಟ್ಟಿ ನಮಸ್ಕರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತದ ಹೀನಾಯ ಸೋಲು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 46 ರನ್‌ಗೆ ಆಲೌಟ್ ಆಗಿತ್ತು. ಕೆಎಲ್ ರಾಹುಲ್ ಡಕೌಟ್ ಆಗಿದ್ದರು. ಇನ್ನು 2ನೇ ಇನ್ನಿಂಗ್ಸ್‌ನಲ್ಲಿ ಭಾರತ 462 ರನ್ ಸಿಡಿಸಿತ್ತು. ಆದರೆ ಕೆಎಲ್ ರಾಹುಲ್ ಕೇವಲ 12 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದರು. ನ್ಯೂಜಿಲೆಂಡ್ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿ ಇತಿಹಾಸ ಬರೆದಿತ್ತು. ಸೋಲಿನ ಬಳಿಕ ಕೆಎಲ್ ರಾಹುಲ್ ಚಿನ್ನಸ್ವಾಮಿ ಪಿಚ್ ಮುಟ್ಟಿ ನಮಸ್ಕರಿಸಿದ ವಿಡಿಯೋ ಭಾರಿ ವೈರಲ್ ಆಗಿತ್ತು. 

Latest Videos

undefined

ಆ ಮೂರು ಗಂಟೆಗಳು ನಮ್ಮ ಸಾಮರ್ಥ್ಯವನ್ನು ನಿರ್ಧರಿಸಲ್ಲ: ರೋಹಿತ್ ಶರ್ಮಾ

ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ಪಿಚ್ ಮುಟ್ಟಿ ನಮಸ್ಕರಿಸಿದ್ದಾರೆ. ಹೀಗೆ ಕೆಎಲ್ ರಾಹುಲ್ ಕೂಡ ಪಿಚ್ ಮುಟ್ಟಿ ನಮಸ್ಕರಿಸಿದ್ದಾರೆ ಅನ್ನೋ ಮಾತುಗಳು ಹರಿದಾಡಿತ್ತು. ಆದರೆ ಯಾವಾಗ ಪುಣೆ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಕೈಬಿಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ನಮಸ್ಕರಿಸಿದ ಈ ನಡೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯದ ಸೂಚನೆ ನೀಡಿದ್ರಾ ಅನ್ನೋ ಅನುಮಾನಕ್ಕೆ ಕಾರಣಾಗಿದೆ.

ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇದು ರಾಹುಲ್ ಕೊನೆಯ ಟೆಸ್ಟ್ ಪಂದ್ಯವೇ ಅನ್ನೋ ಪ್ರಶ್ನೆಯನ್ನು ಹಲವು ಅಭಿಮಾನಿಗಳು ಎತ್ತಿದ್ದಾರೆ. ಕಾರಣ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 200ನೇ ಟೆಸ್ಟ್ ಪಂದ್ಯದ ಬಳಿಕ ವಿದಾಯ ಹೇಳಿದ್ದರು. ಈ ವೇಳೆ ಸಚಿನ್ ಪಿಚ್ ಮುಟ್ಟಿ ನಮಸ್ಕರಿಸಿದ್ದರು. 

ಕ್ಲಾಸ್ ಬ್ಯಾಟ್ಸ್‌ಮನ್ ಇತ್ತೀಚೆಗೆ ಅನುಭವಿಸಿದ ವೈಫಲ್ಯ ಅಭಿಮಾನಿಗಳ ನಿದ್ದೆಗೆಡಿಸಿದೆ. ಇದರ ಬೆನ್ನಲ್ಲೇ ರಾಹುಲ್ ನಡೆ ಆತಂಕಕ್ಕೂ ಕಾರಣಾಗಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸೋಲು ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗದಲ್ಲಿ ಕೆಲ ಬದಲಾವಣೆಗೆ ಕಾರಣವಾಗಲಿದೆ. ಪುಣೆ ಟೆಸ್ಟ್ ಪಂದ್ಯಕ್ಕೆ ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗುತ್ತಿದೆ ಅನ್ನೋ ಮಾತುಗಳ ನಡುವೆ ವಿದಾಯದ ಮಾತುಗಳು ಕೇಳಿಬರುತ್ತಿದೆ.

ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ಶುರುವಾಯ್ತು WTC ಫೈನಲ್ ಹೊಸ ಲೆಕ್ಕಾಚಾರ! ಭಾರತ ಇನ್ನೆಷ್ಟು ಪಂದ್ಯ ಗೆಲ್ಬೇಕು?
 

click me!