ಐಪಿಎಲ್ ಮಾದರಿಯಲ್ಲಿ ಮತ್ತೊಂದು ಕ್ರಿಕೆಟ್ ಲೀಗ್.. 450ಕ್ಕೂ ಹೆಚ್ಚು ಆಟಗಾರರ ಭವಿಷ್ಯ ಇವತ್ತೇ ನಿರ್ಧಾರ!

Published : Aug 09, 2026, 11:08 AM IST
Sher e Punjab T20 League

ಸಾರಾಂಶ

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯಶಸ್ಸಿನ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳು ತಮ್ಮದೇ ಆದ ಪ್ರಾದೇಶಿಕ ಕ್ರಿಕೆಟ್ ಲೀಗ್‌ಗಳನ್ನು ಆರಂಭಿಸುತ್ತಿವೆ. ಇದೀಗ ಆ ಸಾಲಿಗೆ ಪಂಜಾಬ್ ಕೂಡ ಸೇರ್ಪಡೆಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯಶಸ್ಸಿನ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳು ತಮ್ಮದೇ ಆದ ಪ್ರಾದೇಶಿಕ ಕ್ರಿಕೆಟ್ ಲೀಗ್‌ಗಳನ್ನು ಆರಂಭಿಸುತ್ತಿವೆ. ಇದೀಗ ಆ ಸಾಲಿಗೆ ಪಂಜಾಬ್ ಕೂಡ ಸೇರ್ಪಡೆಯಾಗಿದೆ. ಶೇರ್-ಎ-ಪಂಜಾಬ್ ಟಿ20 ಲೀಗ್ (Sher-e-Punjab T20 League) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಆಗಸ್ಟ್ 9) ಆಟಗಾರರ ಬೃಹತ್ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಇಂದು ಆಟಗಾರರ ಹರಾಜು

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (PCA) ಸ್ಟೇಡಿಯಂನಲ್ಲಿ ಈ ಲೀಗ್‌ನ ಹರಾಜು ಪ್ರಕ್ರಿಯೆ ನಡೆಯಲಿದ್ದು ಪಂಜಾಬ್‌ನ ಒಟ್ಟು 450ಕ್ಕೂ ಹೆಚ್ಚು ಪ್ರತಿಭಾವಂತ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಅನ್ಮೋಲ್‌ಪ್ರೀತ್ ಸಿಂಗ್, ಮಯಾಂಕ್ ಮಾರ್ಕಂಡೆ, ನಮನ್ ಧೀರ್ ಸೇರಿದಂತೆ ಹಲವು ಪ್ರಮುಖ ಆಟಗಾರರ ಮೇಲೆ ಫ್ರಾಂಚೈಸಿಗಳು ಬಿಡ್ ಮಾಡಲಿವೆ.

ಆರು ಫ್ರಾಂಚೈಸಿಗಳು

ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇತ್ತೀಚೆಗಷ್ಟೇ ಈ ಲೀಗ್ ಅನ್ನು ಅನಾವರಣಗೊಳಿಸಿದ್ದು, ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ವಿವಿಧ ತಂಡಗಳ ಆಕರ್ಷಣೆಯಾಗಲಿದ್ದಾರೆ.

  • ಶುಭಮನ್ ಗಿಲ್: ಫಾಜಿಲ್ಕಾ ಫಾಲ್ಕನ್ಸ್
  • ಅರ್ಶ್‌ದೀಪ್ ಸಿಂಗ್: ಲೂಧಿಯಾನ ಲಯನ್ಸ್
  • ಅಭಿಷೇಕ್ ಶರ್ಮಾ: ಅಮೃತಸರ ಸುರ್ಮಾಸ್
  • ಪ್ರಭ್‌ಸಿಮ್ರನ್ ಸಿಂಗ್: ಜಲಂಧರ್ ವಾರಿಯರ್ಸ್
  • ರಮಣ್‌ದೀಪ್ ಸಿಂಗ್: ಮೊಹಾಲಿ ಕಿಂಗ್ಸ್
  • ಗುರ್ನೂರ್ ಬ್ರಾರ್: ಬಟಿಂಡಾ ರಾಯಲ್ಸ್

ಪಂದ್ಯಾವಳಿಯ ವೇಳಾಪಟ್ಟಿ

ಆಗಸ್ಟ್ 30 ರಿಂದ ಸೆಪ್ಟೆಂಬರ್ 13 ರವರೆಗೆ ಮೊಹಾಲಿಯ ಪಿಸಿಎ ಕ್ರೀಡಾಂಗಣದಲ್ಲಿ ಲೀಗ್ ನಡೆಯಲಿದೆ. ಪ್ರತಿ ತಂಡವು ಎಂಟು ಲೀಗ್ ಪಂದ್ಯಗಳನ್ನು ಆಡಲಿದ್ದು, ರೌಂಡ್-ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಲೀಗ್ ಕುರಿತು ಮಾತನಾಡಿದ ಸಿಎಂ ಭಗವಂತ್ ಮಾನ್, ಪಂಜಾಬ್ ಯಾವಾಗಲೂ ದೇಶಕ್ಕೆ ಉತ್ತಮ ಕ್ರಿಕೆಟಿಗರನ್ನು ನೀಡಿದೆ. ರಾಜ್ಯದ ಯುವಕರನ್ನು ಮಾದಕ ವ್ಯಸನದಿಂದ ದೂರವಿಡಲು ಮತ್ತು ಕ್ರೀಡೆಯಲ್ಲಿ ಸಕ್ರಿಯಗೊಳಿಸಲು ಈ ಲೀಗ್ ಒಂದು ದೊಡ್ಡ ಅಸ್ತ್ರವಾಗಲಿದೆ. ಪ್ರಸ್ತುತ ಐಪಿಎಲ್‌ನಲ್ಲಿ ಪಂಜಾಬ್‌ನ 21 ಆಟಗಾರರು ಆಡುತ್ತಿದ್ದಾರೆ, ಈ ಹೊಸ ಲೀಗ್‌ನಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಲಿವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಪಂಜಾಬ್‌ನ ಈ 'ಸ್ವಂತ ಐಪಿಎಲ್' ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಇಂದಿನ ಹರಾಜಿನಲ್ಲಿ ಯಾವ ಆಟಗಾರರು ಕೋಟಿ ವೀರರಾಗಲಿದ್ದಾರೆ ಎಂಬ ಕಾತರ ಶುರುವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

WTC ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತದ ಸ್ಥಾನ ಏನು..? ಇಲ್ಲಿದೆ ಲೇಟೆಸ್ಟ್ ಅಪ್ಡೇಟ್
Cricket: 8 ವರ್ಷಗಳ ಪ್ರೀತಿ, ತನಗಿಂತ 7 ವರ್ಷ ಕಿರಿಯ ಕ್ರಿಕೆಟರ್ ಜೊತೆ ಮದುವೆ! ಯಾರು ಗೊತ್ತಾ ಈ ಖ್ಯಾತ ನಟಿ?