
ಕೊಲೊಂಬೊ (ಆ.08) ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಗೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಅಭಿಮಾನಿಗಳು ಆರ್‌ಸಿಬಿ...ಆರ್‌ಸಿಬಿ ಘೋಷಣೆ ಕೂಗಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಅಭಿಮಾನಿಗಳು ಆರ್‌ಸಿಬಿ ಪರ ಘೋಷಣೆ ಕೂಗಲು ಕಾರಣವಿದೆ. ಅಭ್ಯಾಸ ಪಂದ್ಯದಲ್ಲಿ ಆರ್‌ಸಿಬಿ ಸ್ಫೋಟಕ ಬ್ಯಾಟ್ಸಮನ್ ದೇವದತ್ತ ಪಡಿಕ್ಕಲ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಪಡಿಕ್ಕಲ್ ಸೆಂಚುರಿ ಸಿಡಿಸುತ್ತಿದ್ದಂತೆ ಅಭಿಮಾನಿಗಳು ಆರ್‌ಸಿಬಿ ಪರ ಘೋಷಣೆ ಕೂಗಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ದೇವದತ್ ಪಡಿಕ್ಕಲ್‌ಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಅಭ್ಯಾಸ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ದಿಟ್ಟ ಹೋರಾಟ ನೀಡಿದ್ದಾರೆ. ಈ ಮೂಲಕ 142 ರನ್ ಸಿಡಿಸಿದ್ದಾರೆ. ಪಡಿಕ್ಕಲ್ ಶತಕ ಸಿಡಿಸಿ ಸಂಭ್ರಮಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಆರ್‌ಸಿಬಿ ಘೋಷಣೆ ಕೂಗಿದ್ದಾರೆ.
ಆರ್‌ಸಿಬಿ ಪರ ಸ್ಫೋಟಕ ಇನ್ನಿಂಗ್ಸ್ ಮೂಲಕ ಅಭಿಮಾನಿಗಳ ರಂಜಿಸುತ್ತಿದ್ದ ದೇವದತ್ ಪಡಿಕ್ಕಲ್ ಇದೀಗ ಶ್ರೀಲಂಕಾ ವಿರುದ್ದ ಅಭ್ಯಾಸ ಪಂದ್ಯದಲ್ಲೂ ಅಬ್ಬರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಆರ್‌ಸಿಬಿ, ಆರ್‌ಸಿಬಿ ಎಂದು ಘೋಷಣೆ ಕೂಗಿದ್ದಾರೆ. ಇಷ್ಟೇ ಅಲ್ಲ ವಿಶ್ವದೆಲ್ಲೆಡೆ ಅತೀ ಹೆಚ್ಚು ಅಭಿಮಾನಿಗಳು ಹೊಂದಿರುವ ತಂಡ ಆರ್‌ಸಿಬಿ.ವಿದೇಶದಲ್ಲೇ ಭಾರಿ ಸಂಖ್ಯೆಯಲ್ಲಿ ಆರ್‌ಸಿಬಿ ಫಾಲೋವರ್ಸ್ ಇದ್ದಾರೆ. ಹಲವು ಸೆಲೆಬ್ರೆಟಿಗಳು, ಫುಟ್ಬಾಲ್ ದಿಗ್ಗಜರು ಸೇರಿದಂತೆ ದಿಗ್ಗಜರು ಆರ್‌ಸಿಬಿ ಅಭಿಮಾನಿಗಳಾಗಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ದಿಟ್ಟ ಹೋರಾಟ ನೀಡಿದೆ. ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ನಿರಾಸೆ ಮೂಡಿಸಿದರೆ, ಕೆಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಹೋರಾಟ ಟೀಂ ಇಂಡಿಯಾ ನೆರವಾಯಿತು. ರಾಹುಲ್ 40 ರನ್ ಸಿಡಿಸಿದ್ದರೆ, ಪಡಿಕ್ಕಲ್ 142 ರನ್ ಸಿಡಿಸಿದರು. ರವೀಂದ್ರ ಜಡೇಜಾ 63 ರನ್ ಕಾಣಿಕೆ ನೀಡಿದರು. ರಿಷಬ್ ಪಂತ್ ಹಾಗೂ ಧ್ರುವ್ ಜುರೆಲ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಮುನಾವರ್ ಸುಥರ್ 41 ರನ್ ಸಿಡಿಸಿದರು. ಇನ್ನು ಸರಂಶ್ ಜೈನ್ ಹಾಗೂ ಗರ್ನೂರ್ ಬ್ರಾರ್ ಹೋರಾಟ ಉತ್ತಮವಾಗಿತ್ತು. ಸರಂಶ್ 22 ಹಾಗೂ ಬ್ರಾರ್ ಅಜೇಯ 36 ರನ್ ಸಿಡಿಸಿದರು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 357 ರನ್ ಸಿಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.