
ಲಾಹೋರ್: ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ ನಾಯಕತ್ವ ಕಳೆದುಕೊಂಡಿದ್ದ ಬಾಬ ಆಜಂ, ಇದೀಗ ಟಿ20 ವಿಶ್ವಕಪ್‌ಗೆ ಕೇವಲ 2 ತಿಂಗಳು ಬಾಕಿ ಇರುವಾಗ ಮತ್ತೊಮ್ಮೆ ಸೀಮಿತ ಓವರ್ ತಂಡಗಳ ನಾಯಕರಾಗಿ ನೇಮಕಗೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 1-4ರಲ್ಲಿ ಸರಣಿ ಸೋತ ಹಿನ್ನೆಲೆಯಲ್ಲಿ ಶಾಹೀನ್ ಅಫ್ರಿದಿಯನ್ನು ಟಿ20 ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಎಡಗೈ ವೇಗಿ ಕೇವಲ ಒಂದು ಸರಣಿ ಸೋಲಿನ ನಂತರ ನಾಯಕತ್ವ ಕಳೆದುಕೊಂಡಿದ್ದಾರೆ.
ಭಾರತ-ಪಾಕ್ ಸರಣಿ ಆತಿಥ್ಯಕ್ಕೆ ಆಸೀಸ್ ಆಸಕ್ತಿ
ಮೆಲ್ಬರ್ನ್: ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯನ್ನು ತನ್ನ ನೆಲದಲ್ಲಿ ಆಯೋಜಿಸುವ ಪ್ರಸ್ತಾಪವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಇರಿಸಿದೆ. ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಒಪ್ಪಿದರೆ , ಸರಣಿ ಆಯೋಜಿಸಲು ಸಿದ್ಧವಿರುವುದಾಗಿ ಹೇಳಿದೆ.
ಮಯಾಂಕ್ ಬೆಂಕಿಯುಗುಳುವ ಚೆಂಡಿನ ಬಗ್ಗೆ ಸ್ಟೀವ್ ಸ್ಮಿತ್‌ಗೆ ವಾರ್ನಿಂಗ್ ಕೊಟ್ಟ ಸ್ಟುವರ್ಟ್ ಬ್ರಾಡ್..!
ಈ ವರ್ಷಾಂತ್ಯದಲ್ಲಿ ಪಾಕಿಸ್ತಾನ ಹಾಗೂ ಭಾರತ ಎರಡೂ ತಂಡಗಳು ಹೆಚ್ಚೂ ಕಡಿಮೆ ಒಂದೇ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಇರಲಿವೆ. ನವೆಂಬರ್‌ನಲ್ಲಿ ಪಾಕಿಸ್ತಾನ ತಲಾ 3 ಏಕದಿನ, ಟಿ20 ಪಂದ್ಯಗಳ ಸರಣಿ ಆಡಲಿದ್ದು, ಸರಣಿ ಮುಗಿದ ನಾಲ್ಕೇ ದಿನಕ್ಕೆ ಭಾರತ-ಆಸೀಸ್ ಟೆಸ್ಟ್ ಸರಣಿ ಶುರುವಾಗಲಿದೆ. ಇದೇ ಸಮಯದಲ್ಲಿ ಭಾರತ-ಪಾಕ್ ಸರಣಿ ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಸ್ತಾಪಿಸಿದೆ.
ಕರ್ನಾಟಕದ ಚೊಚ್ಚಲ ರಣಜಿ ಗೆಲುವಿಗೆ 50 ವರ್ಷ: ದಿಗ್ಗಜರಿಗೆ ಸನ್ಮಾನ
ಬೆಂಗಳೂರು: ಕರ್ನಾಟಕ ಚೊಚ್ಚಲ ರಣಜಿ ಟ್ರೋಫಿ ಗೆದ್ದು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಟೆನಿಸ್ ಸಂಸ್ಥೆ(ಕೆಎಸ್‌ಎಲ್‌ಟಿಎ) ಯಿಂದ 1973-74ರ ಟ್ರೋಫಿ ವಿಜೇತ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.
ಕೆಎಸ್‌ಎಲ್‌ಟಿಎ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಣಜಿ ವಿಜೇತ ತಂಡದ ಸದಸ್ಯರಾಗಿದ್ದ ಬ್ರಿಜೇಶ್ ಪಟೇಲ್, ಜಿ.ಆರ್.ವಿಶ್ವನಾಥ್, ಸಯ್ಯದ್ ಕೀರ್ಮಾನಿ, ಸುಧಾಕರ್ ರಾವ್, ಸಂಜಯ್ ದೇಸಾಯಿ, ರಘುನಾಥ್ ಸೇರಿದಂತೆ 9 ಆಟಗಾರರಿಗೆ ಸನ್ಮಾನ ಮಾಡಲಾಯಿತು. ಜೊತೆಗೆ ಅಗಲಿದ ಕ್ರಿಕೆಟಿಗರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
IPL 2024 ಧೋನಿ ಖದರ್ ನಡುವೆ ಸಿಎಸ್‌ಕೆಗೆ ಮೊದಲ ಸೋಲುಣಿಸಿ ಮೊದಲ ಗೆಲುವು ಕಂಡ ಡೆಲ್ಲಿ!
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ‘1974ರ ರಣಜಿ ಟ್ರೋಫಿ ಗೆಲುವು ರಾಜ್ಯದ ಕ್ರಿಕೆಟ್‌ನ ಬಾಗಿಲನ್ನು ತೆರೆಯುವಂತೆ ಮಾಡಿತು. ಬಲಿಷ್ಠ ಮುಂಬೈ ತಂಡವನ್ನು ಸೋಲಿಸಲು ಸಾಧ್ಯವಿದೆ ಎಂಬುದನ್ನು ಇತರ ರಾಜ್ಯಗಳಿಗೆ ತೋರಿಸಿಕೊಟ್ಟಿದ್ದೇ ಕರ್ನಾಟಕ. ಅಂದಿನ ಗೆಲುವು ರಾಜ್ಯದ ಕ್ರಿಕೆಟ್‌ನ ದಿಕ್ಕನ್ನು ಬದಲಿಸಿತು’ ಎಂದರು.
ಅನಿಲ್ ಕುಂಬ್ಳೆ, ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ, ವಿನಯ್‌ಕುಮಾರ್ ವಿಡಿಯೋ ಸಂದೇಶ ರವಾನಿಸಿದರು. ಸಮಾರಂಭದಲ್ಲಿ ಎನ್‌ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್, ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ರಾಜ್ಯ ಕ್ರಿಕೆಟ್ ಹಾಗೂ ಟೆನಿಸ್ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.