T20 world Cup 2021: ಸ್ಕಾಟ್ಲೆಂಡ್‌ಗೂ ಶಾಕ್‌ ನೀಡುತ್ತಾ ನಮೀಬಿಯಾ?

By Suvarna NewsFirst Published Oct 27, 2021, 7:27 AM IST
Highlights

*ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ನಮೀಬಿಯಾ
*ಅರ್ಹತಾ ಸುತ್ತಿನಲ್ಲಿ ಮಿಂಚಿದ್ದ ತಂಡ ಸ್ಕಾಟ್ಲೆಂಡ್‌ಗೂ ಶಾಕ್‌ ನೀಡುತ್ತಾ?
*ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಿಣುಕಾಡಿದ್ದ ಸ್ಕಾಟ್ಲೆಂಡ್‌

ಅಬು ಧಾಬಿ (ಅ. 27): ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ನಮೀಬಿಯಾ (Namibia), ಅರ್ಹತಾ ಸುತ್ತಿನಲ್ಲಿ ತೋರಿದ ಪ್ರದರ್ಶನವನ್ನು ಪ್ರಧಾನ ಸುತ್ತಿನಲ್ಲೂ ಮುಂದುವರಿಸಲು ಕಾತರಿಸುತ್ತಿದೆ. ಬುಧವಾರ ಸ್ಕಾಟ್ಲೆಂಡ್‌ (Scotland) ವಿರುದ್ಧ ಸೆಣಸಲಿರುವ ನಮೀಬಿಯಾ, ಮೊದಲ ಗೆಲುವನ್ನು ನಿರೀಕ್ಷಿಸುತ್ತಿದೆ. ಮತ್ತೊಂದೆಡೆ ಅರ್ಹತಾ ಸುತ್ತಿನಲ್ಲಿ ಅಬ್ಬರಿಸಿ, ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಿಣುಕಾಡಿದ್ದ ಸ್ಕಾಟ್ಲೆಂಡ್‌, ಕ್ರಿಕೆಟ್‌ ಶಿಶುಗಳ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಹಿಂದೂಗಳ ನಡುವೆ ರಿಜ್ವಾನ್ ನಮಾಜ್‌ನಿಂದ ಹೆಚ್ಚು ತೃಪ್ತಿ; ವಕಾರ್ ಹೇಳಿಕೆಗೆ ಹರ್ಷಾ ಬೋಗ್ಲೆ ತಿರುಗೇಟು!

ಆಫ್ಘನ್‌ ವಿರುದ್ಧದ ಸೋಲು ಸ್ಕಾಟ್ಲೆಂಡ್‌ನ ನೆಟ್‌ ರನ್‌ರೇಟ್‌ ಪಾತಾಳಕ್ಕೆ ಕುಸಿಯುವಂತೆ ಮಾಡಿದ್ದು, ಮತ್ತೊಂದು ಸೋಲು ತಂಡವನ್ನು ಸೆಮಿಫೈನಲ್‌ ರೇಸ್‌ನಿಂದ ಹೊರಹಾಕಲಿದೆ. ಪ್ರತಿಭಾವಂತ ಆಟಗಾರರನ್ನು ಹೊಂದಿರುವ ನಮೀಬಿಯಾಗೆ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್‌ ಡೇವಿಡ್‌ ವೀಸಾ ಅವರ ಬಲವೂ ಇದ್ದು, ಈ ಸೆಣಸಾಟ ಕುತೂಹಲ ಹೆಚ್ಚಿಸಿದೆ. 

ಇಂದು ಇಂಗ್ಲೆಂಡ್‌-ಬಾಂಗ್ಲಾದೇಶ ಮೊದಲ ಮುಖಾಮುಖಿ!

ಇಂಗ್ಲೆಂಡ್‌ (England) ಹಾಗೂ ಬಾಂಗ್ಲಾದೇಶ (Bangladesh) ಎರಡೂ ಅನುಭವಿ ತಂಡಗಳು. ಕಳೆದ ಒಂದೂವರೆ ದಶಕದಿಂದ ಟಿ20 ಮಾದರಿಯಲ್ಲಿ ಆಡುತ್ತಿವೆ. ಇಂಗ್ಲೆಂಡ್‌ ಈಗಾಗಲೇ 138 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದೆ. ಬಾಂಗ್ಲಾ 116 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಇಷ್ಟಾದರೂ ಇಂಗ್ಲೆಂಡ್‌ ಹಾಗೂ ಬಾಂಗ್ಲಾದೇಶ ಇದುವರೆಗೂ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿಲ್ಲ. ಉಭಯ ತಂಡಗಳ ನಡುವೆ ಮೊದಲ ಪಂದ್ಯ ಬುಧವಾರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ನಡೆಯಲಿದೆ.

ಇಂದು ಇಂಗ್ಲೆಂಡ್‌-ಬಾಂಗ್ಲಾದೇಶ ಮೊದಲ ಮುಖಾಮುಖಿ!

ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ ವಿರುದ್ಧ ಭರ್ಜರಿಯಾಗಿ ಗೆದ್ದಿರುವ ಇಂಗ್ಲೆಂಡ್‌ ಈ ಪಂದ್ಯದಲ್ಲೂ ಗೆದ್ದು ಬಾಂಗ್ಲಾದೇಶ ವಿರುದ್ಧ ಜಯದ ಖಾತೆ ತೆರೆಯಲು ಎದುರು ನೋಡುತ್ತಿದೆ, ಅಲ್ಲದೆ ಗೆದ್ದರೆ ಸೆಮಿಫೈನಲ್‌ನತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ.

ಪಂದ್ಯ ಬಹಿಷ್ಕರಿಸಿದ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಪಾಕ್!

T20 World Cup ಟೂರ್ನಿಯಲ್ಲಿ ಪಾಕಿಸ್ತಾನದ ಗೆಲುವಿನ ಓಟ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿ, ಈ ಮೂಲಕ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಗೆಲುವು ಸಾಧಿಸಿದ ಹೆಗ್ಗಳಿಕೆಗ ಪಾಕಿಸ್ತಾನ ಪಾತ್ರವಾಗಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಪಾಕಿಸ್ತಾನ ಗೆಲುವಿನ ನಗೆ ಬೀರಿದೆ. ಪಾಕಿಸ್ತಾನ ಪ್ರವಾಸದಲ್ಲಿ ದಿಢೀರ್ ಟೂರ್ನಿ ಬಹಿಷ್ಕರಿಸಿ ತವರಿಗೆ ವಾಪಾಸ್ಸಾದ ನ್ಯೂಜಿಲೆಂಡ್ ವಿರುದ್ಧ ಬಾಬರ್ ಸೈನ್ಯ ಸೇಡು ತೀರಿಸಿಕೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿನ್ನೆ (ಅ. 26) ನೆಡದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ 5 ವಿಕೆಟ್ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಗೆಲುವಿನ ಓಟ ಮುಂದುವರಿಸಿದೆ

click me!