
ಅಬು ಧಾಬಿ (ಅ. 27 ): ಇಂಗ್ಲೆಂಡ್ (England) ಹಾಗೂ ಬಾಂಗ್ಲಾದೇಶ (Bangladesh) ಎರಡೂ ಅನುಭವಿ ತಂಡಗಳು. ಕಳೆದ ಒಂದೂವರೆ ದಶಕದಿಂದ ಟಿ20 ಮಾದರಿಯಲ್ಲಿ ಆಡುತ್ತಿವೆ. ಇಂಗ್ಲೆಂಡ್ ಈಗಾಗಲೇ 138 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದೆ. ಬಾಂಗ್ಲಾ 116 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಇಷ್ಟಾದರೂ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಇದುವರೆಗೂ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿಲ್ಲ. ಉಭಯ ತಂಡಗಳ ನಡುವೆ ಮೊದಲ ಪಂದ್ಯ ಬುಧವಾರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup) ನಡೆಯಲಿದೆ.
ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ ಭರ್ಜರಿಯಾಗಿ ಗೆದ್ದಿರುವ ಇಂಗ್ಲೆಂಡ್ ಈ ಪಂದ್ಯದಲ್ಲೂ ಗೆದ್ದು ಬಾಂಗ್ಲಾದೇಶ ವಿರುದ್ಧ ಜಯದ ಖಾತೆ ತೆರೆಯಲು ಎದುರು ನೋಡುತ್ತಿದೆ, ಅಲ್ಲದೆ ಗೆದ್ದರೆ ಸೆಮಿಫೈನಲ್‌ನತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ.
ಪಂದ್ಯ ಬಹಿಷ್ಕರಿಸಿದ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಪಾಕ್!
ಇನ್ನು ಬಾಂಗ್ಲಾದೇಶಕ್ಕಿದು ನಿರ್ಣಾಯಕ ಪಂದ್ಯ. ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ ಶರಣಾಗಿದ್ದ ಬಾಂಗ್ಲಾ, ಈ ಪಂದ್ಯದಲ್ಲಿ ಸೋತರೆ ಸೆಮಿಫೈನಲ್ ಹಾದಿ ಕಠಿಣಗೊಳ್ಳಲಿದೆ. ಇಂಗ್ಲೆಂಡ್‌ನ ಬೌಲರ್‌ಗಳು ವಿಂಡೀಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕೇವಲ 55 ರನ್‌ಗೆ ಕಟ್ಟಿಹಾಕಿದ್ದರು. ಅಬುಧಾಬಿಯ ಪಿಚ್ ವೇಗಿಗಳಿಗೆ ನೆರವು ನೀಡುವ ನಿರೀಕ್ಷೆ ಇದ್ದು, ಇಂಗ್ಲೆಂಡ್ ಮತ್ತೊಂದು ಭರ್ಜರಿ ಬೌಲಿಂಗ್ ಪ್ರದರ್ಶನ ತೋರಲು ಕಾಯುತ್ತಿದೆ. ಒತ್ತಡದ ಸಂದರ್ಭಗಳಲ್ಲಿ ದಿಢೀರ್ ಕುಸಿಯುವ ಬಾಂಗ್ಲಾ, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ, ನಾಯಕ ಮಹಮದುಲ್ಲಾ, ಮುಸ್ತಾಫಿಜುರ್ ರಹಮಾನ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ.
ಮೊಹಮ್ಮದ್ ಶಮಿ ಬೆಂಬಲಿಸಿ ಮಹತ್ವದ ಸಂದೇಶ ಸಾರಿದ ಪಾಕ್ ಕ್ರಿಕೆಟಿಗ ರಿಜ್ವಾನ್!
ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದರೂ, ಬಾಂಗ್ಲಾದೇಶಕ್ಕೆ ಸ್ಥಳೀಯ ವಾತಾವರಣದ ಬಗ್ಗೆ ಹೆಚ್ಚು ಮಾಹಿತಿ ಇದೆ. ಅಲ್ಲದೇ ಇಲ್ಲಿ ಆಡಿದ ಅನುಭವವೂ ಇದೆ. ಮಧ್ಯಾಹ್ನದ ಪಂದ್ಯವಾಗಿರುವ ಕಾರಣ ಸುಡು ಬಿಸಿಲಿನಲ್ಲಿ ಎದುರಾಗುವ ಸವಾಲನ್ನೂ ಇಯಾನ್ ಮೊರ್ಗನ್ ಪಡೆ ನಿಭಾಯಿಸಬೇಕಿದೆ.
ಪಂದ್ಯ ಬಹಿಷ್ಕರಿಸಿದ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಪಾಕ್!
T20 World Cup ಟೂರ್ನಿಯಲ್ಲಿ ಪಾಕಿಸ್ತಾನದ ಗೆಲುವಿನ ಓಟ ಮುಂದುವರಿದಿದೆ. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿ, ಈ ಮೂಲಕ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಗೆಲುವು ಸಾಧಿಸಿದ ಹೆಗ್ಗಳಿಕೆಗ ಪಾಕಿಸ್ತಾನ ಪಾತ್ರವಾಗಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಪಾಕಿಸ್ತಾನ ಗೆಲುವಿನ ನಗೆ ಬೀರಿದೆ. ಪಾಕಿಸ್ತಾನ ಪ್ರವಾಸದಲ್ಲಿ ದಿಢೀರ್ ಟೂರ್ನಿ ಬಹಿಷ್ಕರಿಸಿ ತವರಿಗೆ ವಾಪಾಸ್ಸಾದ ನ್ಯೂಜಿಲೆಂಡ್ ವಿರುದ್ಧ ಬಾಬರ್ ಸೈನ್ಯ ಸೇಡು ತೀರಿಸಿಕೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿನ್ನೆ (ಅ. 26) ನೆಡದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ 5 ವಿಕೆಟ್ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಗೆಲುವಿನ ಓಟ ಮುಂದುವರಿಸಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.