* ಸ್ಕಾಟ್ಲೆಂಡ್ ಕ್ರಿಕೆಟ್ ತಂಡವನ್ನು ಸೋಲಿಸಿದ ಟೀಂ ಇಂಡಿಯಾ
* 2 ಗೆಲುವು ಹಾಗೂ 2 ಸೋಲಿನೊಂದಿಗೆ 4 ಅಂಕದಲ್ಲಿ ಟೀಂ ಇಂಡಿಯಾ
* ಗೆಲುವಿನ ಬಳಿಕ ಹೃದಯವನ್ನೂ ಗೆದ್ದ ಟೀಂ ಇಂಡಿಯಾ ಆಟಗಾರರು
ದುಬೈ(ನ.06): T20 ವಿಶ್ವಕಪ್ 2021 (T20 World Cup) ರಲ್ಲಿ, ಭಾರತೀಯ ಕ್ರಿಕೆಟ್ ತಂಡವು (Team India) ಸ್ಕಾಟ್ಲೆಂಡ್ (Scotnad) ಕ್ರಿಕೆಟ್ ತಂಡವನ್ನು ಸೋಲಿಸಿ ಸೆಮಿಫೈನಲ್ ರೇಸ್‌ನಲ್ಲಿ ತನ್ನನ್ನು ಉಳಿಸಿಕೊಂಡಿದೆ. ಈ ಗೆಲುವಿನ ನಂತರ ಇದೀಗ ಟೀಂ ಇಂಡಿಯಾ ನಾಲ್ಕು ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಸೋಲಿನೊಂದಿಗೆ 4 ಅಂಕ ಹೊಂದಿದೆ. ಗೆಲುವಿನ ನಂತರ, ತಂಡದ ರನ್ ರೇಟ್ (+1.619) ಗುಂಪು 2 ರಲ್ಲಿ ಅತ್ಯುತ್ತಮವಾಗಿದೆ ಮತ್ತು ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ. ಈ ಗುಂಪಿನಿಂದ ಪಾಕಿಸ್ತಾನ (Pakistan) ತಂಡ ಈಗಾಗಲೇ ಸೆಮಿಫೈನಲ್ (Semifinal) ತಲುಪಿದೆ. ಸೆಮಿಫೈನಲ್‌ನ ಎರಡನೇ ತಂಡಕ್ಕಾಗಿ ಭಾರತ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಕದನ ಮುಂದುವರೆದಿದೆ.
ಪಂದ್ಯದ ಬಳಿಕವೂ ಹೃದಯ ಗೆದ್ದ ಟೀಂ ಇಂಡಿಯಾ
undefined
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ನಂತರ, ಭಾರತೀಯ ನಾಯಕ ವಿರಾಟ್ ಕೊಹ್ಲಿ (Virat Kohli), ಆರಂಭಿಕ ರೋಹಿತ್ ಶರ್ಮಾ (Rohit Sharma), ರವಿಚಂದ್ರನ್ ಅಶ್ವಿನ್, ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗೂ ಇನ್ನಿತರ ಆಟಗಾರರು ಸ್ಕಾಟ್ಲೆಂಡ್ ತಂಡದ ಆಟಗಾರರನ್ನು ಭೇಟಿ ಮಾಡಲು ಅವರ ಡ್ರೆಸ್ಸಿಂಗ್ ಕೋಣೆಗೆ ತಲುಪಿದರು. ಸ್ಕಾಟ್ಲೆಂಡ್ ಆಟಗಾರರು ಏಕಾಏಕಿ ಬಂದ ಟೀಂ ಇಂಡಿಯಾ ಆಟಗಾರರನ್ನು ಕಂಡು ಬಹಳಷ್ಟು ಸಂತೋಷಪಟ್ಟರು.
Huge respect to and co. for taking the time 🤜🤛 pic.twitter.com/kdFygnQcqj
— Cricket Scotland (@CricketScotland)ಇಲ್ಲಿ ವಿರಾಟ್ ಕೊಹ್ಲಿ, ಆರಂಭಿಕ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ಬೌಲರ್ ಜಸ್ಪ್ರೀತ್ ಬೂಮ್ರಾ ಹಾಗೂ ಇನ್ನಿತರ ಆಟಗಾರರು ಸ್ಕಾಟ್ಲೆಂಡ್ ತಂಡದ ಆಟಗಾರರು ಸ್ಕಾಟ್ಲೆಂಡ್ ಆಟಗಾರರೊಂದಿಗೆ ದೀರ್ಘಕಾಲ ಮಾತನಾಡಿದ್ದಾರೆ ಮತ್ತು ಕೆಲವು ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಸ್ಕಾಟ್ಲೆಂಡ್‌ನ ಆಟಗಾರರು ಕೂಡ ಇವರ ಸಲಹೆಗಳನ್ನು ಕುತೂಹಲದಿಂದ ಕೇಳುತ್ತಿರುವುದು ಕಂಡುಬಂದಿದೆ. ಈ ವಿಶೇಷ ಕ್ಷಣವನ್ನು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.
Outstanding experience for the group to pick the brains of some of the best to grace the field 👇
Who would you want to ask one question to?
🎥
pic.twitter.com/RDE4oh1vIx
ಸ್ಕಾಟ್ಲೆಂಡ್‌ನ್ನು ಆಟಿಕೆಯಾಗಿಸಿದ ಟೀಂ ಇಂಡಿಯಾ
ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ಸ್ಕಾಟ್ಲೆಂಡ್ ತಂಡ 17.4 ಓವರ್‌ಗಳಲ್ಲಿ 85 ರನ್ ಗಳಿಸಿ ಆಲೌಟ್ ಆಯಿತು. ಭಾರತ ತಂಡವು ಕೇವಲ 39 ಎಸೆತಗಳಲ್ಲಿ 81 ಎಸೆತಗಳು ಬಾಕಿ ಇರುವಂತೆಯೇ 89 ರನ್ ಗಳಿಸುವ ಮೂಲಕ ಗುರಿಯನ್ನು ಸುಲಭವಾಗಿ ತಲುಪಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಎಲ್ಲ ವಿಭಾಗಗಳಲ್ಲೂ ಅಗ್ರಸ್ಥಾನದಲ್ಲಿದೆ. ಬೌಲಿಂಗ್‌ನಲ್ಲಿ ಶಮಿ ಮತ್ತು ಜಡೇಜಾ 3-3 ವಿಕೆಟ್ ಪಡೆದರು, ಬ್ಯಾಟಿಂಗ್‌ನಲ್ಲಿ ರೋಹಿತ್ (30 ರನ್ (16 ಎಸೆತ) ಮತ್ತು ರಾಹುಲ್ (50 ರನ್ (19 ಎಸೆತ)) ದಾಖಲೆಯ ಗೆಲುವಿನಲ್ಲಿ ತಮ್ಮ ಸಂಪೂರ್ಣ ಕೊಡುಗೆ ನೀಡಿದರು. ಇದು ಟಿ20ಯಲ್ಲಿ ಅತಿ ಹೆಚ್ಚು ಎಸೆತಗಳು ಬಾಕಿ ಇರುವಾಗ ಭಾರತದ ಅತಿ ದೊಡ್ಡ ಗೆಲುವಾಗಿದೆ.
ಏಕದಿನ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ಗುಡ್‌ಬೈ?
ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ವಿರಾಟ್ ಕೊಹ್ಲಿ, ಏಕದಿನ ತಂಡದ ನಾಯಕತ್ವವನ್ನೂ ಬಿಡಲಿದ್ದು ರೋಹಿತ್ ಶರ್ಮಾ ಟಿ20 ಹಾಗೂ ಏಕದಿನ ತಂಡಗಳ ನಾಯಕರಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ತಾವು ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಆದರೆ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯುವುದಾಗಿ ತಿಳಿಸಿದ್ದರು.
ದೀಗ ನೂತನ ಕೋಚ್ ರಾಹುಲ್ ದ್ರಾವಿಡ್ ಸೀಮಿತ ಓವರ್ ತಂಡಗಳಿಗೆ ಒಬ್ಬನೇ ನಾಯಕ ಇರಬೇಕೆಂದು ಉದ್ದೇಶಿಸಿದ್ದು, ಅವರ ಸಲಹೆ ಮೇರೆಗೆ ಬಿಸಿಸಿಐ ಕೊಹ್ಲಿಯನ್ನು ಏಕದಿನ ನಾಯಕತ್ವ ತ್ಯಜಿಸುವಂತೆ ಸೂಚಿಸಲಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಇತ್ತೀಚೆಗೆ ಕೋಚ್ ಹುದ್ದೆಗೆ ನಡೆದ ಸಂದರ್ಶನದ ವೇಳೆ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ದ್ರಾವಿಡ್‌ರನ್ನು ಸೀಮಿತ ಓವರ್ ನಾಯಕತ್ವದ ಬಗ್ಗೆ ಪ್ರಶ್ನಿಸಿದಾಗ ಅವರು ಏಕದಿನ, ಟಿ20 ಎರಡೂ ತಂಡಗಳಿಗೆ ಒಬ್ಬರೇ ನಾಯಕರಿದ್ದರೆ ಸೂಕ್ತ. ರೋಹಿತ್ ಉತ್ತಮ ಆಯ್ಕೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಒಂದೇ ಒಂದು ಮಹತ್ವದ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2019ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಕಪ್ ಗೆಲ್ಲಲು ವಿಫಲವಾಗಿತ್ತು. 2023ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲೇ ಜರುಗಲಿದ್ದು, ಮುಂಬರುವ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಸೀಮಿತ ಓವರ್‌ಗಳ ತಂಡದ ನಾಯಕತ್ವವನ್ನು ಒಬ್ಬರಿಗೆ ನೀಡಲು ಬಿಸಿಸಿಐ ಒಲವು ತೋರಿದೆ ಎನ್ನಲಾಗಿದೆ.