ಆಫ್ಘನ್‌ ವಿರುದ್ದ ಕಿವೀಸ್ ಸೋಲದಿದ್ದರೆ..? ಜಡೇಜಾ ಉತ್ತರಕ್ಕೆ ಪತ್ರಕರ್ತ ಕಕ್ಕಾಬಿಕ್ಕಿ!

Suvarna News   | Asianet News
Published : Nov 06, 2021, 03:13 PM ISTUpdated : Nov 06, 2021, 03:45 PM IST
ಆಫ್ಘನ್‌ ವಿರುದ್ದ ಕಿವೀಸ್ ಸೋಲದಿದ್ದರೆ..? ಜಡೇಜಾ ಉತ್ತರಕ್ಕೆ ಪತ್ರಕರ್ತ ಕಕ್ಕಾಬಿಕ್ಕಿ!

ಸಾರಾಂಶ

*ಸ್ಕಾಟ್ಲೆಂಡ ವಿರುದ್ಧ ಗೆದ್ದು ಉತ್ತಮ ರನ್‌ರೇಟ್ ಪಡೆದ ಭಾರತ *ಭಾರತಕ್ಕೆ ನಿರ್ಣಾಯಕವಾಗಲಿರುವ ಅಫ್ಘಾನಿಸ್ತಾನ ನ್ಯೂಜಿಲೆಂಡ್‌ ಪಂದ್ಯ *ಆಫ್ಘನ್‌ ವಿರುದ್ದ ಕಿವೀಸ್ ಸೋಲದಿದ್ದರೆ...?

ದುಬೈ (ನ.6) : ಸ್ಕಾಟ್ಲೆಂಡ್‌ (Scotland) ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸುವ ಮೂಲಕ ತನ್ನ ನೆಟ್‌ರನ್‌ರೇಟ್ (Net Run Rate) ಉತ್ತಮಪಡಿಸಿಕೊಂಡಿದೆ. ಟೀಂ ಇಂಡಿಯಾ (Team India) ಸ್ಕಾಟ್‌ಲೆಂಡ್ ವಿರುದ್ಧ ಭರ್ಜರಿ 8 ವಿಕೆಟ್ ಗೆಲುವು ದಾಖಲಿಸಿ  ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇಷ್ಟೇ ಅಲ್ಲ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ (New Zealand) ತಂಡಕ್ಕಿಂತ ಉತ್ತಮ ನೆಟ್‌ರನ್ ರೇಟ್ ಸಂಪಾದಿಸಿದೆ. ಕೇವಲ ಉತ್ತಮ ನೆಟ್‌ರನ್ ರೇಟ್ ಮೂಲಕ ಸೆಮೆಫೈನಲ್‌ ತಲುಪಬೇಕಿರುವ ಭಾರತ ಮುಂದಿನ ಪಂದ್ಯಗಳಲ್ಲಿ ಕೂಡ ಉತ್ತಮ ನೆಟರನ್‌ ರೆಟ್‌ ಕಾಯ್ದುಕೊಳ್ಳಬೇಕಿದೆ. ನ್ಯೂಜಿಲೆಂಡ್-ಅಫ್ಘಾನಿಸ್ತಾನ ಪಂದ್ಯದಲ್ಲಿ ಅಫ್ಘಾನಿಸ್ತಾನ ಜಯ ಸಾಧಿಸಿದರೆ ಮಾತ್ರ ಭಾರತಕ್ಕೆ ಸೆಮಿಸ್‌ (Semi Final) ಬಾಗಿಲು ತೆರೆದುಕೊಳ್ಳುವ ಸಾಧ್ಯತೆ ಇದೆ.

ಬ್ಯಾಗ್ ಪ್ಯಾಕ್ ಕರ್ಕೆ ಘರ್ ಜಾಯೇಂಗೆ!

ಶುಕ್ರವಾರ ಭಾರತ-ಸ್ಕಾಟ್ಲೆಂಡ್‌ ಪಂದ್ಯದ ನಂತರ ಮಾತನಾಡಿದ ಮ್ಯಾನ್‌ ಆಫ್‌ ದಿ ಮ್ಯಾಚ್‌ ರವೀಂದ್ರ ಜಡೇಜಾ (Ravindra Jadeja)  ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. ಒಂದು ವೇಳೆ ನ್ಯೂಜಿಲೆಂಡ್-ಅಫ್ಘಾನಿಸ್ತಾನ (Afghanisftan vs New zealand) ಪಂದ್ಯದ ಫಲಿತಾಂಶ ಭಾರತದ ಪರವಾಗಿ ಬರದಿದ್ದರೆ ಏನಾಗುತ್ತದೆ ಎಂದು ರವೀಂದ್ರ ಜಡೇಜಾ ಅವರನ್ನು ಪತ್ರಕರ್ತ (Journalist) ಕೇಳಿದಾಗ ವಿನಯದಿಂದ ಉತ್ತರಿಸಿದ ಆಲ್ ರೌಂಡರ್ ಜಡೇಜಾ "ತೋ ಫಿರ್... ಬ್ಯಾಗ್ ಪ್ಯಾಕ್ ಕರ್ಕೆ ಘರ್ ಜಾಯೇಂಗೆ, ಔರ್ ಕ್ಯಾ? (ನಾವು ನಮ್ಮ ಬ್ಯಾಗ ಪ್ಯಾಕ್ ಮಾಡಿ ಮನೆಗೆ ಹೋಗುತ್ತೇವೆ, ಇನ್ನೇನು?) ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ ಅಫ್ಘಾನಿಸ್ತಾನಕ್ಕೆ ಸೋತರೆ ನಮಗೆ ಸೆಮಿಸ್‌ ತಲುಪಲು ಇನ್ನೂ ಅವಕಾಶಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ನ್ಯೂಜಿಲೆಂಡ್ ಅಫ್ಘಾನಿಸ್ತಾನಕ್ಕೆ ಸೋಲದಿದ್ದರೆ ಏನು ಮಾಡುತ್ತಿರಿಎ ಎಂಬ ಪ್ರಶ್ನೆಗೆ ಜಡೇಜಾ ಹೀಗೆ ಉತ್ತರಿಸಿದ್ದಾರೆ.

T20 World Cup 2021:ಕೊಹ್ಲಿ ಹುಟ್ಟುಹಬ್ಬಕ್ಕೆ ಭರ್ಜರಿ ಗೆಲುವಿನ ಗಿಫ್ಟ್, 3ನೇ ಸ್ಥಾನಕ್ಕೇರಿದ ಭಾರತ!

ನೆಟರನ್‌ ರೆಟ್‌  ಮೂಲಕ ಭಾರತ ಸೆಮಿಫೈನಲ್‌ ತಲುಪಬೇಕಾದರೆ ಅಫ್ಘಾನಿಸ್ತಾನ ನ್ಯೂಜಿಲೆಂಡ್ ಅನ್ನು ಸೋಲಿಸಬೇಕಿದೆ. ಆಫ್ಘಾನ್‌ಗಳು ಕಿವೀಸ್ ಅನ್ನು ಸೋಲಿಸಿದರೆ, ಸೂಪರ್ 12 ಪಂದ್ಯಗಳ ಗುಂಪು -2 ರಲ್ಲಿ  ಒಟ್ಟು 5 ಪಂದ್ಯಗಳಲ್ಲಿ ತಲಾ 3 ಗೆಲುವುಗಳೊಂದಿಗೆ  ಮೂರು ತಂಡಗಳು ಪಾಯಿಂಟ್ಸ್‌ ಟೇಬನಲ್ಲಿರುತ್ತವೆ (Points Table). ಹಾಗಾಗಿ ಹೆಚ್ಚಿನ NRR ಹೊಂದಿರುವ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. 

ಸ್ಕಾಟ್ಲೆಂಡ್‌ ವಿರುದ್ಧ ಭರ್ಜರಿ ಗೆಲುವು!

ಸ್ಕಾಟ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ತೋರಿದ ಜಡೇಜಾ ಪಂದ್ಯಶ್ರೇಷ್ಠ (Man of the Match) ಪ್ರಶಸ್ತಿಯನ್ನೂ ಪಡೆದರು. ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ದಾಳಿಗೆ ಸ್ಕಾಟ್ಲೆಂಡ್ ತಂಡ ತತ್ತರಿಸಿತು. ಜಸ್ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ಕೂಡ ಉತ್ತಮ ಸಾಥ್ ನೀಡಿದರು. ಇದರ ಪರಿಣಾಣ ಸ್ಕಾಟ್ಲೆಂಡ್ ಅಬ್ಬರಿಸಲು ಸಾಧ್ಯವಾಗಲೇ ಇಲ್ಲ. ಪಂದ್ಯದ ನಂತರ ಮಾತನಾಡಿದ ಜಡೇಜಾ "ಕಳೆದ 2-3 ವರ್ಷಗಳಿಂದ ಭಾರತ ಅತ್ಯುತ್ತಮ ಕ್ರಿಕೆಟ್ (Cricket) ಆಡಿದೆ" ಎಂದು ಹೇಳಿದರು.

T20 World Cup: ಸ್ಕಾಟ್ಲೆಂಡ್ ಎದುರು ಅಬ್ಬರಿಸಿ ಆತಿಯಾ ಶೆಟ್ಟಿ ಜತೆಗಿನ ಪ್ರೀತಿ ಅನಾವರಣ ಮಾಡಿದ ರಾಹುಲ್

ಒಂದೆರಡು ಪಂದ್ಯಗಳು ಅವರ ಪರವಾಗಿ ಹೋಗಲಿಲ್ಲ ಎಂಬ ಕಾರಣಕ್ಕಾಗಿ, ಅವರನ್ನು ಕೆಟ್ಟ ತಂಡ ಎಂದು ಬ್ರಾಂಡ್ (Brand) ಮಾಡಬಾರದು. ಆದ್ದರಿಂದ ನಾವು ಆ ಪಂದ್ಯಗಳ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಈಗ, ನಮ್ಮ ಮುಂದೆ ಅವಕಾಶವಿದೆ, ನಾವು ಅದರಲ್ಲಿ ಉತ್ತಮ ಪ್ರದರ್ಶನ ತೋರಬೇಕು. ನಾವು ಈಗ ಸ್ಕಾಟ್ಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಉತ್ತಮವಾಗಿ ಆಡಿದ್ದೇವೆ. ನಮೀಬಿಯಾ (Namibia) ವಿರುದ್ಧದ  ಪಂದ್ಯದಲ್ಲೂ ಉತ್ತಮ ಪ್ರದರ್ಶನ ಮುಂದುವರೆಸಲು ಪ್ರಯತ್ನಿಸುತ್ತೇವೆ ಎಂದು ಜಡೇಜಾ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!