ಗೌತಮ್ ಗಂಭೀರ್ ಸುದ್ದಿಗೋಷ್ಠಿ ಮಾಡಬಾರದು, ಅವರ ಹೇಳಿಕೆಗಳು ಸರಿಯಿಲ್ಲ: ಸಂಜಯ್ ಮಂಜ್ರೇಕರ್

By Naveen Kodase  |  First Published Nov 12, 2024, 11:20 AM IST

ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಕಿಡಿಕಾರಿದ್ದಾರೆ. 


ನವದೆಹಲಿ: ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಬಗ್ಗೆ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಆಕ್ರೋಶ ವ್ಯಕ್ತಪಡಿಸಿದ್ದು, ಗಂಭೀರ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಬೇಕು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಸೋಮವಾರ ಗಂಭೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಲ ಗಂಟೆಗಳ ಬಳಿಕ ಸಂಜಯ್ ಈ ಟ್ವೀಟ್ ಮಾಡಿದ್ದಾರೆ. 'ಗೌತಮ್ ಗಂಭೀರ್ ಪಾಲ್ಗೊಂಡ ಸುದ್ದಿಗೋಷ್ಠಿಯನ್ನು ಈಗಷ್ಟೇ ಗಮನಿಸಿದೆ. ಗಂಭೀರ್‌ರನ್ನು ಈ ರೀತಿ ಸುದ್ದಿಗೋಷ್ಠಿಯಿಂದ ಬಿಸಿಸಿಐ ದೂರ ಇಡಬೇಕು. ಅವರು ತೆರೆಮರೆಯಲ್ಲಿ ಕೆಲಸ ಮಾಡಲಿ. ಸುದ್ದಿಗೋಷ್ಠಿಯಲ್ಲಿ ಅವರ ಹೇಳಿಕೆಗಳು ಹಾಗೂ ಆಯ್ಕೆ ಮಾಡುವ ಪದಗಳು ಅಷ್ಟು ಸರಿಯಿಲ್ಲ. ರೋಹಿತ್ ಶರ್ಮಾ ಮತ್ತು ಅಜಿತ್ ಅಗರ್ಕರ್ (ಆಯ್ಕೆ ಸಮಿತಿ ಮುಖ್ಯಸ್ಥ) ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಉತ್ತಮ' ಎಂದು ಸಂಜಯ್ ತಿಳಿಸಿದ್ದಾರೆ.

Tap to resize

Latest Videos

undefined

ಮೊಹಮ್ಮದ್ ಶಮಿ ಇಲ್ವಲ್ಲ, ಭಾರತ 1-3 ಅಂತರದಲ್ಲಿ ಟೆಸ್ಟ್ ಸರಣಿ ಸೋಲುತ್ತದೆ: ರಿಕಿ ಪಾಂಟಿಂಗ್ ಭವಿಷ್ಯ

ರೋಹಿತ್ ಶರ್ಮಾ ಗೈರಾದ್ರೆ ಕೆ ಎಲ್ ರಾಹುಲ್ ಆರಂಭಿಕ: ಗೌತಮ್ ಗಂಭೀರ್ ಸುಳಿವು

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ರೋಹಿತ್‌ ಶರ್ಮಾ ಗೈರಾದರೆ ಕೆ.ಎಲ್.ರಾಹುಲ್ ಆರಂಭಿಕನಾಗಿ ಆಡಬಹುದು ಎಂದು ಮುಖ್ಯ ಕೋಚ್‌ ಗೌತಮ್ ಗಂಭೀರ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ರೋಹಿತ್ ಶರ್ಮಾ ಮೊದಲ ಟೆಸ್ಟ್ ಆಡುತ್ತಾರೊ, ಇಲ್ಲವೊ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಸರಣಿ ಆರಂಭಕ್ಕೂ ಮುನ್ನವೇ ಸ್ಪಷ್ಟನೆ ಸಿಗಲಿದೆ. ಒಂದು ವೇಳೆ ರೋಹಿತ್‌ ಗೈರಾದರೆ ಉಪನಾಯಕ ನಾಗಿರುವ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ' ಎಂದಿದ್ದಾರೆ. 

ಇನ್ನು, ಆರಂಭಿಕ ಆಟಗಾರನ ಸ್ಥಾನದ ಬಗ್ಗೆ ತುಂಬಾ ಆಯ್ಕೆಗಳಿವೆ. ಅಭಿಮನ್ಯು ಈಶ್ವರನ್, ರಾಹುಲ್ ಇದ್ದಾರೆ. ರಾಹುಲ್‌ಗೆ ಆರಂಭಿಕ, 3ನೇ ಕ್ರಮಾಂಕ ಮತ್ತು 6ನೇ ಕ್ರಮಾಂಕದಲ್ಲೂ ಆಡಬಲ್ಲ ಸಾಮರ್ಥ್ಯವಿದೆ. ಅವರು ವಿಕೆಟ್ ಕೀಪಿಂಗ್ ಕೂಡಾ ಮಾಡಬಲ್ಲರು. ಇಂತಹ ಆಟಗಾರರು ಬೇರೆ ದೇಶದ ತಂಡದಲ್ಲಿ ಇದ್ದಾರೆಯೇ?. ರೋಹಿತ್ ಗೈರಾದರೆ ರಾಹುಲ್ ಆರಂಭಿಕನಾಗಿ ಆಡಬೇಕಾಗ ಬಹುದು' ಎಂದಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ!

ರೋಹಿತ್ ವೈಯಕ್ತಿಕ ಕಾರಣ ಗಳಿಂದಾಗಿ ಮೊದಲ ಟೆಸ್ಟ್‌ಗೆ ಗೈರಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರು 2ನೇ ಟೆಸ್ಟ್‌ಗೂ ಮುನ್ನ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್  ಟೆಸ್ಟ್‌ ಸರಣಿಗೆ ಭಾರತ ತಂಡ:

ರೋಹಿತ್‌ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌, ಧೃವ್‌ ಜುರೆಲ್‌, ಆರ್.ಅಶ್ವಿನ್‌, ರವೀಂದ್ರ ಜಡೇಜಾ, ಮೊಹಮದ್‌ ಸಿರಾಜ್‌, ಆಕಾಶ್‌ದೀಪ್‌, ಪ್ರಸಿದ್ಧ್‌ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌.

click me!