ಕ್ಯಾಮರಾ ಕಾಣ್ತಿದ್ದಂತೆ ಟೆನ್ಷನ್ ನಲ್ಲಿ ಕೊಹ್ಲಿ! ವಿಲನ್ ಆದ ಅನುಷ್ಕಾ

By Roopa Hegde  |  First Published Nov 11, 2024, 3:29 PM IST

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾರ ಮುದ್ದಾದ ಮಕ್ಕಳು ಇನ್ನೂ ಕ್ಯಾಮರಾ ಕಣ್ಣಿಗೆ ಬಿದ್ದಿಲ್ಲ. ಪಾಪರಾಜಿಗಳಿಗೆ ಫೋಟೋ ಕ್ಲಿಕ್ಕಿಸೋ ಆತುರವಾದ್ರೆ ಕೊಹ್ಲಿಗೆ ಇದ್ರಿಂದ ತಪ್ಪಿಸಿಕೊಳ್ಳೋ ಟೆನ್ಷನ್. ಮುಂಬೈ ವಿಮಾನ ನಿಲ್ದಾಣದ ವಿಡಿಯೋ ವೈರಲ್. 
 


ಮುಂಬೈ ವಿಮಾನ ನಿಲ್ದಾಣ (Mumbai Airport)ದಲ್ಲಿ ಟೀಂ ಇಂಡಿಯಾ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ (Team India legend Virat Kohli) ವರ್ತನೆ ಟ್ರೋಲ್ ಆಗಿದೆ. ಶನಿವಾರ ಸಂಜೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತಲುಪಿದ್ದಾರೆ. ಇದಕ್ಕೂ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಪಾಪರಾಜಿ (Paparazzi)ಗಳ ಕಣ್ಣಿಗೆ ಬಿದ್ದಿದ್ದಾರೆ. ಫ್ಯಾನ್ಸ್ ಜೊತೆ ಫೋಟೋಕ್ಕೆ ಫೋಸ್ ನೀಡಿದ್ರೂ, ಕೊಹ್ಲಿ ಮುಖ ಊದಿಕೊಂಡಿತ್ತು. ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (ollywood actress Anushka Sharma) ಹಾಗೂ ಮಕ್ಕಳ ಫೋಟೋ ತೆಗೆಯದಂತೆ ಕೊಹ್ಲಿ ಪದೇ ಪದೇ ಪಾಪರಾಚಿಗಳಿಗೆ ಎಚ್ಚರಿಕೆ ನೀಡ್ತಾನೇ ಇದ್ರು. 

ಇನ್ಸ್ಟಾಗ್ರಾಮ್ ನಲ್ಲಿ ಕೊಹ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವಿರಾಟ್, ಕ್ಯಾಮರಾ ಮ್ಯಾನ್ ಗಳ ಬಳಿ ಬರ್ತಿದ್ದಂತೆ, ಅನುಷ್ಕಾ ಹಾಗೂ ಮಕ್ಕಳ ಫೋಟೋ ತೆಗೆಯದಂತೆ ತಾಕೀತು ಮಾಡ್ತಾರೆ. ನಂತ್ರ ಅಭಿಮಾನಿಗಳಿಗೆ ಫೋಸ್ ನೀಡ್ತಾರೆ.  ಈಗ ಅನುಷ್ಕಾ ತಮ್ಮ ಮಕ್ಕಳ ಜೊತೆ ಬರ್ತಾರೆ. ಹತ್ತು ಬಾರಿ ರಿಕ್ವೆಸ್ಟ್ ಮಾಡ್ತಿದ್ದೇನೆ. ದಯವಿಟ್ಟು ಅವರ ಫೋಟೋ ಕ್ಲಿಕ್ ಮಾಡ್ಬೇಡಿ. ಇಲ್ಲಿಂದಲೇ ಹೊರಡಿ ಅಂತ ಕೊಹ್ಲಿ ಹೇಳೋದನ್ನು ಕೇಳ್ಬಹುದು.

Tap to resize

Latest Videos

undefined

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಹ್ಲಿ ಫ್ಯಾನ್ಸ್ ಗೆ ಕೊಹ್ಲಿ ವರ್ತನೆ ಇಷ್ಟವಾಗಿಲ್ಲ. ಕೊಹ್ಲಿಗೆ ತುಂಬಾ ಆಟಿಟ್ಯೂಡ್‌. ಮುಖ ನೋಡಿದ್ರೆ ಗೊತ್ತಾಗ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ನನಗೆ 11 ವರ್ಷವಿರುವಾಗಿನಿಂದ್ಲೂ ನಾನು ಕೊಹ್ಲಿ ನೋಡ್ತಿದ್ದೇನೆ. ಕೊಹ್ಲಿ ಈಗ ತುಂಬ ಬದಲಾಗಿದ್ದಾರೆ. ಅವರನ್ನು ಬದಲಿಸಲಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಕಮೆಂಟ್ ಗೆ ಬಳಕೆದಾರರು ರಿಪ್ಲೈ ಮಾಡಿದ್ದು, ಕೊಹ್ಲಿ ಈ ಬದಲಾವಣೆಗೆ ಅನುಷ್ಕಾ ಕಾರಣ ಎಂದಿದ್ದಾರೆ. ಅನುಷ್ಕಾರಿಗೆ ಆಟಿಟ್ಯೂಡ್‌ ಹೆಚ್ಚಿದೆ. ಅದನ್ನೇ ಕೊಹ್ಲಿಗೆ ಕಲಿಸಿದ್ದಾರೆಂದು ಕೆಲವರು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು, ಭಾರತ ಕಷ್ಟವಾಗ್ತಿದೆ ಅಂದ್ರೆ ಬರ್ಲೇಬೇಡಿ. ಅನುಷ್ಕಾ ಹಾಗೂ ಮಕ್ಕಳನ್ನು ಕ್ಯಾಮರಾದಿಂದ ಹೇಗೆ ದೂರ ಇಡ್ಬೇಕು ಎನ್ನುವ ಚಿಂತೆಯಲ್ಲೇ ಕೊಹ್ಲಿ ಒತ್ತಡ ಹೆಚ್ಚಾಗುತ್ತದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮಕ್ಕಳ ಮುಖ ತೋರಿಸೋದ್ರಲ್ಲಿ ಏನಿದೆ? ಅಷ್ಟೆಲ್ಲ ಇದ್ರೆ ಅನುಷ್ಕಾ ಮನೆಯಲ್ಲೇ ಕುಳಿತು ಕೆಲಸ ಮಾಡ್ಲಿ, ಅಲ್ಲಿ ಇಲ್ಲಿ ಮಕ್ಕಳ ಜೊತೆ ಸುತ್ತಾಡೋದೇಕೆ, ನಿನ್ನೆ ಸಿದ್ಧವಾಗಿ ಬಂದು ಫೋಟೋಕ್ಕೆ ಫೋಸ್ ನೀಡಿದ್ದರು. ಇಂದು ಏನಾಯ್ತು? ಇವರ ಡ್ರಾಮಾ ಹೆಚ್ಚಾಗ್ತಿದೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಸೆಲೆಬ್ರಿಟಿಗಳು ಅವರ ಮಕ್ಕಳ ಫೋಟೋವನ್ನು ಫ್ಯಾನ್ಸ್ ಗೆ ತೋರಿಸಬೇಕು ಎಂದು ಮತ್ತೆ ಕೆಲವರು ಹೇಳಿದ್ದಾರೆ.

ಕೊಹ್ಲಿ ಪರ ಬ್ಯಾಟ್ ಬೀಸಿದವರ ಸಂಖ್ಯೆ ಕೂಡ ಹೆಚ್ಚಿದೆ. ಅದು ಅವರಿಷ್ಟ. ಪಾಪರಾಜಿಗಳು ಅವರನ್ನು ಹಿಂಬಾಲಿಸಬಾರದು. ಕೊಹ್ಲಿಗೆ ಆಟಿಟ್ಯೂಡ್ ಇದೆ ಅಂತಾಗಿದ್ರೆ ಮೊನ್ನೆ ಆಂಟಿ ಕೈ ಹಿಡಿದು ಎಳೆದಾಗ ಯಾಕೆ ಗಲಾಟೆ ಮಾಡಲಿಲ್ಲ. ಫೋಟೋಕ್ಕೆ ಫೋಸ್ ನೀಡಿ ಹೋದ್ರಲ್ವ? ಕೊಹ್ಲಿ ಇರೋದೇ ಹೀಗೆ. ಅವರ ಸ್ವಭಾವವನ್ನು ಬದಲಿಸಲು ಸಾಧ್ಯವಿಲ್ಲ ಅಂತ ಅಭಿಮಾನಿಗಳು ವಾದಿಸಿದ್ದಾರೆ.

ಸದ್ಯ ಕೊಹ್ಲಿ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರು ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪುವ ಮೊದಲೇ ಪತ್ನಿ ಅನುಷ್ಕಾ ಹಾಗೂ ಮಕ್ಕಳ ಜೊತೆ ಪರ್ಥ್ ನಲ್ಲಿಳಿದಿದ್ದಾರೆ. ಅನೇಕ ದಿನಗಳಿಂದ ಕೆಟ್ಟ ಫಾರ್ಮ್ ನಲ್ಲಿರುವ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡ್ಲಿ ಎಂಬುದು ಫ್ಯಾನ್ಸ್ ಆಶಯ. ನವೆಂಬರ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿರುವ ಕೊಹ್ಲಿ, ಈ ಹಿಂದೆ ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ 8 ಶತಕ ಬಾರಿಸಿದ್ದಾರೆ. 

 
 
 
 
 
 
 
 
 
 
 
 
 
 
 

A post shared by ETimes (@etimes)

click me!