ಒಂದು ಓವರ್‌ನಲ್ಲಿ 39 ರನ್: ಇಂಟರ್‌ನ್ಯಾಷನಲ್ ಕ್ರಿಕೆಟ್‌ನಲ್ಲಿ 17 ವರ್ಷದ ಯುವರಾಜ್ ಸಿಂಗ್ ರೆಕಾರ್ಡ್‌ ನುಚ್ಚುನೂರು..!

By Naveen Kodase  |  First Published Aug 20, 2024, 12:24 PM IST

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ದಾಖಲೆ ನುಚ್ಚುನೂರಾಗಿದೆ. ಸಮೋವಾ ದೇಶದ ಬ್ಯಾಟರ್ ಒಂದೇ ಓವರ್‌ನಲ್ಲಿ ಬರೋಬ್ಬರಿ 39 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.


ಬೆಂಗಳೂರು: ಒಂದು ಓವರ್‌ನಲ್ಲಿ ಬ್ಯಾಟರ್ ಎಲ್ಲಾ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರೆ ಹೆಚ್ಚೆಂದರೆ 36 ರನ್ ಬಾರಿಸಬಹುದು. ಆದರೆ ಇದೀಗ ಸಮೋವ ದೇಶದ ವಿಕೆಟ್ ಕೀಪರ್ ಬ್ಯಾಟರ್ ಡೌರಿಸ್ ವಿಸ್ಸಾರ್ ಇದೀಗ ಒಂದೇ ಓವರ್‌ನಲ್ಲಿ ಬರೋಬ್ಬರಿ 39 ರನ್ ಸಿಡಿಸುವ ಮೂಲಕ 17 ವರ್ಷಗಳ ಕಾಲ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಐಸಿಸಿ ಪುರುಷರ ಟಿ20 ವಿಶ್ವಕಪ್ ಸಬ್‌ರೀಜಿನಲ್ ಈಸ್ಟ್‌ ಏಷ್ಯಾ ಫೆಸಿಫಿಕ್ ಕ್ವಾಲಿಫೈಯರ್  ಎ ಟೂರ್ನಿಯಲ್ಲಿ ವನೌಟು ಎದುರಿನ ಪಂದ್ಯದಲ್ಲಿ ಡೌರಿಸ್ ವಿಸ್ಸಾರ್ ಒಂದೇ ಓವರ್‌ನಲ್ಲಿ ಬರೋಬ್ಬರಿ 39 ರನ್ ಸಿಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಈ ಹಿಂದೆ ಯಾರೂ ಮಾಡದ ದಾಖಲೆ ನಿರ್ಮಿಸಿದ್ದಾರೆ.

Tap to resize

Latest Videos

undefined

ಆರ್‌ಸಿಬಿ ಪರ ಆಡಲು ಕೆಕೆಆರ್ ತಂಡದ ಈ ಮ್ಯಾಚ್ ಫಿನಿಶರ್‌ಗೆ ಆಸೆಯಂತೆ..! ಬೆಂಗಳೂರಿಗೆ ಬರ್ತಾರಾ ಈ ಹಾರ್ಡ್‌ ಹಿಟ್ಟರ್

ಹೀಗಿತ್ತು ನೋಡಿ ವಿಡಿಯೋ:

🚨WORLD RECORD CREATED IN MEN’S T20 LEVEL 1 OVER 39 RUNS

Darius Visser scored 39 runs in match between Samoa Vs Vanuatu
(🎥 - ICC) pic.twitter.com/sXiyrlxjtE

— SportsOnX (@SportzOnX)

ಏಪಿಯಾದ ಗಾರ್ಡನ್ ಓವಲ್ ನಂ.2 ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೌರಿಸ್ ವಿಸ್ಸಾರ್ 15ನೇ ಓವರ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿ ಮಿಂಚಿದರು. ವನೌಟು ದೇಶದ ವೇಗಿ ನಲಿನ್ ನಿಪಿಕೋ ಎದುರು ಸಿಕ್ಸರ್‌ಗಳ ಸುರಿಮಳೆಯನ್ನೇ ಸುರಿದರು. ಇದರ ಜತೆಗೆ ವೇಗಿ ನಲಿನ್ ನಿಪಿಕೋ ಮೂರು ನೋಬಾಲ್ ಕೂಡಾ ಎಸೆದು ದುಬಾರಿಯಾದರು. ಈ ಮೂಲಕ ಡೌರಿಸ್ ವಿಸ್ಸಾರ್ ಒಂದೇ ಓವರ್‌ನಲ್ಲಿ 39 ರನ್ ಕಲೆಹಾಕುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೊದಲು 2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಎದುರು 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಇನ್ನು ಇದಾದ ಬಳಿಕ 2021ರಲ್ಲಿ ಕೀರನ್ ಪೊಲ್ಲಾರ್ಡ್, 2024ರಲ್ಲಿ ನಿಕೋಲಸ್ ಪೂರನ್ ಹಾಗೂ 2024ರಲ್ಲಿ ನೇಪಾಳದ ದಿಪೇಂದ್ರ ಸಿಂಗ್ ಐರೆ ಕೂಡಾ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಹಿತ 36 ರನ್ ಸಿಡಿಸಿದ್ದರು.

ನಮ್ಮಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಸ್ಟೇಡಿಯಂ ಇಲ್ಲವೆಂದ ಪಿಸಿಬಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಿಂದ ಶಿಫ್ಟ್‌?

ಡೌರಿಸ್ ವಿಸ್ಸಾರ್ ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದ್ದರು. ಇನ್ನು ನಾಲ್ಕನೇ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಇನ್ನು ಐದನೇ ಎಸೆತವನ್ನು ನಿಪಿಕೋ ಡಾಟ್ ಬಾಲ್ ಎಸೆದರು. ಇನ್ನು ನಿಪಿಕೋ ಎಸೆದ ಮೂರನೇ ನೋಬಾಲ್‌ನಲ್ಲಿ ಡೌರಿಸ್ ವಿಸ್ಸಾರ್ ಮತ್ತೊಂದು ಸಿಕ್ಸರ್ ಸಿಡಿಸಿದರು. ಈ ಸಿಕ್ಸರ್‌ನೊಂದಿಗೆ ಸಮೋವಾ ದೇಶದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಡೌರಿಸ್ ವಿಸ್ಸಾರ್ ಕೇವಲ 62 ಎಸೆತಗಳನ್ನು ಎದುರಿಸಿ 14 ಸಿಕ್ಸರ್ ಸಹಿತ ವಿಸ್ಪೋಟಕ 132 ರನ್ ಸಿಡಿಸಿದರು. ಡೌರಿಸ್ ವಿಸ್ಸಾರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಸಮೋವಾ ದೇಶವು ಕ್ವಾಲಿಫೈಯರ್ ಎ ವಿಭಾಗದಲ್ಲಿ ಸತತ ಎರಡು ಗೆಲುವು ದಾಖಲಿಸಿದೆ. ಈ ಮೂಲಕ 2026ರ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

click me!