Asianet Suvarna News Asianet Suvarna News

ಆರ್‌ಸಿಬಿ ಪರ ಆಡಲು ಕೆಕೆಆರ್ ತಂಡದ ಈ ಮ್ಯಾಚ್ ಫಿನಿಶರ್‌ಗೆ ಆಸೆಯಂತೆ..! ಬೆಂಗಳೂರಿಗೆ ಬರ್ತಾರಾ ಈ ಹಾರ್ಡ್‌ ಹಿಟ್ಟರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಲು ಎಲ್ಲಾ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದೀಗ ಕೆಕೆಆರ್ ಮ್ಯಾಚ್ ಫಿನಿಶರ್ ಕೂಡಾ ಆರ್‌ಸಿಬಿ ತಂಡದಲ್ಲಿ ಆಡಲು ಒಲವು ತೋರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2025 Rinku Singh names RCB team he would want to represent if KKR do not retain him kvn
Author
First Published Aug 20, 2024, 11:28 AM IST | Last Updated Aug 20, 2024, 11:28 AM IST

ಬೆಂಗಳೂರು:  2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೂ ಸಾಕಷ್ಟು ಸಮಯವಿದೆ. ಹೀಗಿರುವಾಗಲೇ ಬಿಸಿಸಿಐ ಹಾಗೂ ಎಲ್ಲಾ ಫ್ರಾಂಚೈಸಿಗಳು ಮುಂಬರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಯಾವ ಫ್ರಾಂಚೈಸಿಯು ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ. ಯಾವ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಲಿದೆ ಎನ್ನುವ ಚರ್ಚೆಯೂ ಜೋರಾಗಿದೆ. ಹೀಗಿರುವಾಗಲೇ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿರುವ ರಿಂಕು ಸಿಂಗ್, ಆರ್‌ಸಿಬಿ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ತಮ್ಮನ್ನು ರೀಟೈನ್ ಮಾಡಿಕೊಳ್ಳದೇ ಹೋದರೇ ತಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಲು ಬಯಸುವುದಾಗಿ ತಿಳಿಸಿದ್ದಾರೆ.

ಸ್ಪೋರ್ಟ್ಸ್‌ ತಕ್‌ ಜತೆಗಿನ ಸಂದರ್ಶನದ ವೇಳೆಯಲ್ಲಿ ರಿಂಕು ಮನಬಿಚ್ಚಿ ಮಾತನಾಡಿದ್ದಾರೆ. ರಿಂಕು ಸಿಂಗ್ 2018ರಿಂದಲೂ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಆಟಗಾರರಾಗಿದ್ದಾರೆ. ಆದರೆ ರಿಂಕು ಆರಂಭದಲ್ಲೇ ವೈಪಲ್ಯ ಅನುಭವಿಸಿದ್ದರಿಂದ, ಫ್ರಾಂಚೈಸಿಯು ಅವರ ಮೇಲೆ ನಂಬಿಕೆ ಕಳೆದುಕೊಂಡಿತು. ಪರಿಣಾಮ ರಿಂಕು ಕೆಲ ವರ್ಷ ಬೆಂಚ್‌ಗಷ್ಟೇ ಸೀಮಿತವಾದರು. ಆದರೆ 2022ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್‌ ಎದುರು ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ರಿಂಕು ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮಿದರು. ಇದಾದ ಮೇಲೆ ರಿಂಕು ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

6 ವರ್ಷ ಜೂನಿಯರ್ ಮೇಲೆ ಲವ್, ಕದ್ದುಮುಚ್ಚಿ ನಂಬರ್ ಪಡೆದು ಮಾಡ್ರಿದ್ರು ಕಾಲ್‌! ಕ್ರಿಕೆಟಿಗನ ರೊಮ್ಯಾಂಟಿಕ್ ಲವ್‌ ಸ್ಟೋರಿ

ಇನ್ನು 2023ರ ಐಪಿಎಲ್ ಟೂರ್ನಿಯ ವೇಳೆ ಗುಜರಾತ್ ಟೈಟಾನ್ಸ್‌ ಎದುರು ಕೋಲ್ಕತಾ ನೈಟ್ ರೈಡರ್ಸ್ ತಂಡವು ಗೆಲ್ಲಲು ಕೊನೆಯ 5 ಎಸೆತಗಳಲ್ಲಿ 28 ರನ್‌ ಗಳಿಸುವ ಅಗತ್ಯವಿತ್ತು. ಈ ಸಂದರ್ಭದಲ್ಲಿ ರಿಂಕು ಸಿಂಗ್, ಯಶ್ ದಯಾಳ್ ಎದುರು ಸತತ 5 ಸಿಕ್ಸರ್ ಸಿಡಿಸಿ ಸೋಲಿನ ದವಡೆಯಲ್ಲಿದ್ದ ಕೆಕೆಆರ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.

ಐಪಿಎಲ್‌ನಲ್ಲಿ ರಿಂಕು ಅದ್ಭುತ ಪ್ರದರ್ಶನ ತೋರಿದ್ದರಿಂದಾಗಿ, ಐರ್ಲೆಂಡ್ ಎದುರಿನ ಸರಣಿಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಟೀಂ ಇಂಡಿಯಾ ಪರವೂ ಟಿ20 ಕ್ರಿಕೆಟ್‌ನಲ್ಲಿ ಮ್ಯಚ್ ಫಿನಿಶರ್ ಆಗಿ ರಿಂಕು ಅದ್ಭುತ ಇನಿಂಗ್ಸ್‌ ಆಡಿದ್ದಾರೆ.

ಇದೀಗ್ ಸ್ಪೋರ್ಟ್ಸ್ ತಕ್ ಸಂದರ್ಶನದ ವೇಳೆ, ಸಂದರ್ಶಕಿ, ಒಂದು ವೇಳೆ ಕೆಕೆಆರ್ ತಂಡವು ನಿಮ್ಮನ್ನು ರೀಟೈನ್ ಮಾಡಿಕೊಂಡಿಲ್ಲವೆಂದರೆ ಯಾವ ತಂಡದಲ್ಲಿ ಆಡಲು ಬಯಸುತ್ತೀರಾ ಎಂದು ಕೇಳುತ್ತಾರೆ? ಆಗ ರಿಂಕು ಸಿಂಗ್ ಮರು ಆಲೋಚನೆ ಇಲ್ಲದೇ ಆರ್‌ಸಿಬಿ ಎನ್ನುತ್ತಾರೆ.

ಲಖನೌ ಸೂಪರ್ ಜೈಂಟ್ಸ್‌ ತಂಡಕ್ಕೆ ಟೀಂ ಇಂಡಿಯಾ ಮಾಜಿ ವೇಗಿ ಮೆಂಟರ್‌?

ರಿಂಕು ಸಿಂಗ್ ಇದುವರೆಗೂ 45 ಐಪಿಎಲ್ ಪಂದ್ಯಗಳನ್ನಾಡಿ 30.79ರ ಬ್ಯಾಟಿಂಗ್ ಸರಾಸರಿಯಲ್ಲಿ 4 ಅರ್ಧಶತಕ ಸಹಿತ 893 ರನ್ ಬಾರಿಸಿದ್ದಾರೆ. ಇನ್ನು ರಿಂಕು ಸಿಂಗ್ ಟೀಂ ಇಂಡಿಯಾ ಪರವೂ ಎರಡು ಅರ್ಧಶತಕ ಸಿಡಿಸಿದ್ದಾರೆ.

Latest Videos
Follow Us:
Download App:
  • android
  • ios