ಬೆಳಗಾವಿಯಲ್ಲಿ ನಡೆದ ಲೋಕಲ್ ಕ್ರಿಕೆಟ್ ಟೂರ್ನಿಯಲ್ಲಿ ಫೀಲ್ಡರ್ ಒಬ್ಬ ಹಿಡಿದ ಕ್ಯಾಚ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೈರಲ್ ವಿಡಿಯೋದಲ್ಲಿ ಇದ್ದ ಫೀಲ್ಡರ್ ಕಿರಣ್ ಕಿರಣ್ ತಾರಲೇಕರ್ ಎನ್ನುವುದು ಗೊತ್ತಾಗಿದೆ. ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಇವರು ಹಿಡಿದ ಕ್ಯಾಚ್‌ನ ವಿಡಿಯೋವನ್ನು ಸಚಿನ್ ತೆಂಡುಲ್ಕರ್, ಮೈಕೆಲ್ ವಾನ್, ಜಿಮ್ಮಿ ನೀಶಾಮ್ ಮೆಚ್ಚಿಕೊಂಡಿದ್ದರು.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್ ಬೆಳಗಾವಿ
ಬೆಳಗಾವಿ (ಫೆ.12): ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟಗಾರನೊಬ್ಬ ಅತ್ಯದ್ಭುತ ಫೀಲ್ಡಿಂಗ್ ಮಾಡಿ ಅತ್ಯಾಕರ್ಷಕ ಕ್ಯಾಚ್ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಖುದ್ದು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಈ ಆಟಗಾರನ ಫೀಲ್ಡಿಂಗ್‌ಗೆ ಫಿದಾ ಆಗಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್, ನ್ಯೂಜಿಲೆಂಡ್ ತಂಡದ ಆಲ್ರೌಂಡ್ ಆಟಗಾರ ಜಿಮ್ಮಿ ನೀಶಾಮ್ ಸೇರಿದಂತೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಈ ವಿಡಿಯೋವನ್ನು ನೋಡಿ, ಮೆಚ್ಚಿ ಟ್ವೀಟ್ ಮಾಡಿದ್ದಾರೆ.
This is what happens when you bring a guy who also knows how to play football!! ⚽️ 🏏 😂 https://t.co/IaDb5EBUOg
— Sachin Tendulkar (@sachin_rt)ಈ ಕ್ರಿಕೆಟ್ ಟೂರ್ನಿ ನಡೆದಿದ್ದು ಬೇರೆಲ್ಲಿಯೂ ಅಲ್ಲ ಕುಂದಾನಗರಿ ಬೆಳಗಾವಿಯಲ್ಲಿ. ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಖಡಕ್ ಗಲ್ಲಿಯ ಯುವಕರು ಶ್ರೀ ಚಸಕ್ 2022 ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದರು. ನಿನ್ನೆ ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಸಾಯಿರಾಜ್ ಹಾಗೂ ಎಸ್‌ಆರ್ ಎಸ್ ಹಿಂದೂಸ್ತಾನ್ ನಿಪ್ಪಾಣಿ ತಂಡದ ನಡುವೆ ಪಂದ್ಯ ನಡೆದಿತ್ತು. ಈ ಟೂರ್ನಿಯಲ್ಲಿ ಆಟಗಾರನೋರ್ವ ಬೌಂಡರಿ ದಾಟಿದ್ದ ಚೆಂಡನ್ನು ಫುಟ್‌ಬಾಲ್‌ನಂತೆ ಕಾಲಿನಿಂದ ಒದ್ದು ಮತ್ತೋರ್ವ ಆಟಗಾರ ಕ್ಯಾಚ್ ಹಿಡಿಯುವ ಹಾಗೇ ಮಾಡಿ ಔಟ್ ಮಾಡಿದ್ದಾನೆ. ಅತ್ಯಾಕರ್ಷಕ ಫೀಲ್ಡಿಂಗ್ ಮಾಡಿದ ಆಟಗಾರನ ಹೆಸರು ಕಿರಣ್ ತಾರಲೇಕರ್. ಬೆಳಗಾವಿಯ ವಡಗಾವಿ ನಿವಾಸಿ. ಕಿರಣ್ ತಾರಲೇಕರ್ ಬೆಳಗಾವಿ ಜಿಲ್ಲೆ ರಾಯಬಾಗದಲ್ಲಿ M.P.Ed. ವ್ಯಾಸಂಗ ಮಾಡುತ್ತಿದ್ದು ಜೊತೆಗೆ ಮಕ್ಕಳಿಗೆ ಕ್ರಿಕೆಟ್ ತರಬೇತಿ ಸಹ ನೀಡುತ್ತಿದ್ದಾರೆ.
ಇಂಥ ಕ್ಯಾಚ್ ಹಿಡಿಯೋಕೆ ಕ್ರಿಕೆಟ್ ಜೊತೆ ಫುಟ್‌ಬಾಲ್ ಕೂಡ ಗೊತ್ತಿರ್ಬೇಕು ಎಂದು ಸಚಿನ್ ಹೇಳಿದ್ದೇಕೆ?
ಇನ್ನು ಈ ಅತ್ಯದ್ಬುತ ಫೀಲ್ಡಿಂಗ್ ಮತ್ತು ಕ್ಯಾಚ್ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಚಿನ್ ತೆಂಡುಲ್ಕರ್ ಈ ವಿಡಿಯೋವನ್ನು ರೀ ಟ್ವೀಟ್ ಮಾಡಿದ್ದು, ಫುಟ್‌ಬಾಲ್ ಆಟವಾಡುವುದು ಹೇಗೆ ಎಂದು ಗೊತ್ತಿರುವ ಕ್ರಿಕೆಟಿಗನಿಂದ ಮಾತ್ರವೇ ಇಂಥ ಕ್ಯಾಚ್ ಹಿಡಿಯಲು ಸಾಧ್ಯ ಎಂದು ಬರೆದುಕೊಂಡು ಸಂತಸಪಟ್ಟಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ, ಹಿರಿಯ ಆಟಗಾರ ಮೈಕಲ್ ವಾನ್ ಈ ಕ್ಯಾಚ್ ಅನ್ನು 'ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್' ಎಂದು ಟ್ವೀಟ್ ಮಾಡಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಜಿಮ್ಮಿ ನೀಶಾಮ್ ಸಹ ಟ್ಚೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗರ ಮನ ಗೆದ್ದ ಕಿರಣ್ ತಾರಲೇಕರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಶುಭ್‌ಮನ್ ಗಿಲ್ ದ್ವಿಶತಕಕ್ಕೆ ಟ್ರೆಂಡ್ ಆದ್ರು ಸಚಿನ್ ಪುತ್ರಿ ಸಾರಾ ತೆಂಡುಲ್ಕರ್!
ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ದೂರವಾಣಿಯಲ್ಲಿ ಸಂತಸ ಹಂಚಿಕೊಂಡ ಕಿರಣ್ ತಾರಲೇಕರ್ ಕ್ರಿಕೆಟ್ ದೇವರು ನನ್ನ ವಿಡಿಯೋ ಟ್ವೀಟ್ ಮಾಡಿದ್ದು ಖುಷಿ ತಂದಿದೆ. ಒಬ್ಬ ಆಟಗಾರನಿಗೆ ಇದಕ್ಕಿಂತ ದೊಡ್ಡ ಖುಷಿ ಇಲ್ಲ. ನಾನು ಬೆಳಗಾವಿಯ ವಡಗಾವಿಯಲ್ಲಿ ವಾಸವಿದ್ದು ರಾಯಬಾಗದಲ್ಲಿ M.P.Ed ವ್ಯಾಸಂಗ ಮಾಡುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.