ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಆಪ್ತ ಸ್ನೇಹಿತ, ಮುಂಬೈ ರಣಜಿ ತಂಡದ ಸಹ ಆಟಗಾರ ಕೊರೋನಾಗೆ ಬಲಿಯಾಗಿದ್ದಾರೆ.
ಮುಂಬೈ(ಡಿ.21): ಕೊರೋನಾ ವೈರಸ್ ಆರ್ಭಟ ಮುಂದುವರಿಯುತ್ತಲೇ ಇದೆ. ಲಸಿಕೆ ಪ್ರಯೋಗಗಳು ನಡೆಯುತ್ತಿದ್ದರೂ, ಕೊರೋನಾ ಮಾತ್ರ ಕಡಿಮೆಯಾಗುತ್ತಿಲ್ಲ. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಆಪ್ತ ಸ್ನೇಹಿತ, ಮುಂಬೈ ರಣಜಿ ತಂಡದ ಸಹ ಆಟಗಾರ ವಿಜಯ್ ಶಿರ್ಕೆ ಕೊರೋನಾಗೆ ಬಲಿಯಾಗಿದ್ದಾರೆ.
6 ರಾಜ್ಯಗಳ ಬಡಮಕ್ಕಳ ಚಿಕಿತ್ಸೆಗೆ ಸಚಿನ್ ತೆಂಡುಲ್ಕರ್ ನೆರವು
ಮುಂಬೈ ರಣಜಿ ತಂಡದ ಪ್ರಮುಖ ವೇಗಿಯಾಗಿದ್ದ ವಿಜಯ್ ಶಿರ್ಕೆ, ಸಚಿನ್ ಹಾಗೂ ವಿನೋದ್ ಕಾಂಬ್ಳಿ ಜೊತೆ ಕ್ರಿಕೆಟ್ ಆಡಿದ್ದರು. ಕೊರೋನಾ ಸೋಂಕು ತಗುಲಿದ ಕಾರಣ ಥಾಣೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 57 ವರ್ಷದ ಮಾಜಿ ಕ್ರಿಕೆಟಿಗ ವಿಜಯ್ ಶಿರ್ಕೆ ನಿನ್ನೆ ರಾತ್ರಿ(ಡಿ.20)ಕ್ಕೆ ನಿಧನರಾಗಿದ್ದಾರೆ. ಕೊರೋನಾದಿಂದ ಬಹುತೇಕ ಗುಣಮುಖರಾಗಿದ್ದ ಶಿರ್ಕೆ ಆರೋಗ್ಯ ಏರುಪೇರಾಗಿತ್ತು.
ಮುಂಬೈ ಕ್ರಿಕೆಟ್ ಸಂಸ್ಥೆಯ ಅಂಡರ್ 17 ಸಮ್ಮರ್ ಕ್ಯಾಂಪ್‌ಗ 2 ವರ್ಷ ಕೋಚ್ ಆಗಿ ಶಿರ್ಕೆ ಕಾರ್ಯನಿರ್ವಹಿಸಿದ್ದರು. ಕೆಲ ವರ್ಷಗಳ ಹಿಂದೆ ಶಿರ್ಕೆ ಥಾಣೆಗೆ ಸ್ಥಳಾಂತರಗೊಂಡಿದ್ದರು. ಅಕ್ಟೋಬರ್ ತಿಂಗಳಲ್ಲಿ ಸಚಿನ್ ತೆಂಡುಲ್ಕರ್ ಆಪ್ತ ಅವಿ ಕದಮ್ ಕೊರೋನಾಗೆ ಬಲಿಯಾಗಿದ್ದರು. ಇದೀಗ ವಿಜಯ್ ಶಿರ್ಕೆ ಕೊರೋನಾ ಸೋಂಕು ತಗುಲಿ ಅಸುನೀಗಿದ್ದಾರೆ.
ಸಚಿನ್ 'ಮಾರುತಿ 800' to ಕಂಗನಾ 'BMW':ಸೆಲೆಬ್ರೆಟಿಗಳ ಮೊದಲ ಕಾರು ಯಾವುದು?
ಔಟ್ ಸ್ವಿಂಗರ್ ಕೌಶಲ್ಯ ಹೊಂದಿದ್ದ ವಿಜಯ್ ಶಿರ್ಕೆ, ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದರು. ಶಿರ್ಕೆ ನಿಧನಕ್ಕೆ ಸಚಿನ್ ತೆಂಡುಲ್ಕರ್, ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲ ಸೇರಿದಂತೆ ಹಲವು ಸಂತಾಪ ಸೂಚಿಸಿದ್ದಾರೆ.