ಡಿಸೆಂಬರ್ 19: ಭಾರತ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಸಿಹಿ, ಕಹಿ ಕ್ಷಣ!

Suvarna News   | Asianet News
Published : Dec 20, 2020, 10:02 AM IST
ಡಿಸೆಂಬರ್ 19: ಭಾರತ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಸಿಹಿ, ಕಹಿ ಕ್ಷಣ!

ಸಾರಾಂಶ

ಡಿಸೆಂಬರ್ 19ರ ಟೀಂ ಇಂಡಿಯಾ ಟೆಸ್ಟ್ ಪಾಲಿಗೆ ಎಂದೆಂದು ಮರೆಯಲಾಗದ ದಿನ. ಈ ದಿನದಲ್ಲೇ ಭಾರತ ಕಾಕತಾಳೀಯ ದಾಖಲೆಗಳಿಗೆ ಸಾಕ್ಷಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಡಿ.20): ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಡಿಸೆಂಬರ್ 19ರ ದಿನ ಒಂದು ರೀತಿಯ ಮಿಶ್ರಫಲ ದೊರೆತ ದಿನ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ಹಾಗೂ ಕನಿಷ್ಠ ಮೊತ್ತಗಳನ್ನು ದಾಖಲಿಸಿದ ದಿನ ಇದು. 

ಹೌದು, 2016ರಂದು ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ 7 ವಿಕೆಟ್‌ಗೆ 759 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದ ಭಾರತ ತನ್ನ ಗರಿಷ್ಠ ಮೊತ್ತ ದಾಖಲಿಸಿತ್ತು. ಈ ಪಂದ್ಯದಲ್ಲಿ ಕರುಣ್‌ ನಾಯರ್‌ ತ್ರಿಶತಕ ಬಾರಿಸಿದ್ದರು. 

ಇನ್ನು, ಡಿ.19, 2020, ಆಸ್ಪ್ರೇಲಿಯಾ ವಿರುದ್ಧ 36ಕ್ಕೆ ಆಲೌಟ್‌ ಆಗುವ ಮೂಲಕ ಟೀಂ ಇಂಡಿಯಾ ತನ್ನ ಕನಿಷ್ಠ ಮೊತ್ತ ದಾಖಲಿಸಿತು. ಎರಡೂ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿಯೇ ನಾಯಕ ಎನ್ನುವುದು ಮತ್ತೊಂದು ವಿಶೇಷ.

2009ರಿಂದ ಸತತ 12 ವರ್ಷ ಮಾಡಿದ್ದ ಸಾಧನೆ 2020ರಲ್ಲಿ ಕೊಹ್ಲಿಗೇ ಆಗಲೇ ಇಲ್ಲ!

ಬ್ಯಾಟ್ಸ್‌ಮನ್‌ಗಳ ‘ಒಂದಂಕಿ’ ಸಾಧನೆ!

ಪಿಂಕ್ ಬಾಲ್ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್‌ಮನ್‌ ಸಹ ಒಂದಂಕಿ ಮೊತ್ತ ದಾಟಲಿಲ್ಲ. ಮಯಾಂಕ್‌ ಅಗರ್‌ವಾಲ್‌ 9 ರನ್‌ ಗಳಿಸಿ ತಂಡದ ಪರ ಅತಿಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡರು.  ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ಔಟಾಗಿದ್ದು ಟೆಸ್ಟ್‌ ಇತಿಹಾಸದಲ್ಲಿ 2ನೇ ಬಾರಿ. 1924ರಲ್ಲಿ ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾದಿಂದ ಈ ಅನಗತ್ಯ ದಾಖಲೆ ನಿರ್ಮಾಣವಾಗಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?