29ನೇ ವಸಂತಕ್ಕೆ ಕಾಲಿಟ್ಟ ಸಾರಾ ತೆಂಡೂಲ್ಕರ್‌ : ಮಗಳ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಕ್ರಿಕೆಟ್‌ ದೇವರು ಸಚಿನ್

Published : Oct 12, 2026, 12:16 PM IST
Sachin Tendulkar

ಸಾರಾಂಶ

ಸಾರಾ ತೆಂಡೂಲ್ಕರ್‌ ಬರ್ತ್‌ ಡೇ ಸಂಭ್ರಮದಲ್ಲಿದ್ದಾರೆ. ಅವರು 29ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಮಗಳ ಬರ್ತ್‌ ಡೇ ಸಂದರ್ಭದಲ್ಲಿ ತಂದೆ ಸಚಿನ್‌ ತೆಂಡೂಲ್ಕರ್‌ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಲೋಕದ ದಿಗ್ಗಜ್ಜ, ಕ್ರಿಕೆಟ್‌ ದೇವರು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಮಗಳು ಸಾರಾ ತೆಂಡೂಲ್ಕರ್ ಗೆ ಹುಟ್ಟುಹಬ್ಬದ ಸಂಭ್ರಮ. ಸಾರಾ ತೆಂಡೂಲ್ಕರ್‌ ಇಂದು 29ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಸಚಿನ್‌ ತೆಂಡೂಲ್ಕರ್‌ ಹಂಚಿಕೊಂಡ ಪೋಸ್ಟ್‌ ಒಂದು ಎಲ್ಲರ ಮನಸ್ಸು ಸೆಳೆದಿದೆ. ಮಗಳ ಬಗ್ಗೆ ಹೆಮ್ಮೆಯ ಭಾವನೆಯನ್ನು ಸಚಿನ್‌ ತೆಂಡೂಲ್ಕರ್‌ ವ್ಯಕ್ತಪಡಿಸಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಭಾವನಾತ್ಮಕ ಪೋಸ್ಟ್

ಸಾಮಾನ್ಯವಾಗಿ ಮಕ್ಕಳಿಗೆ ದಾರಿ ತೋರಿಸುವುದು ತಂದೆ-ತಾಯಿಯ ಕೆಲಸ. ಆದರೆ ಒಂದು ಹಂತದ ನಂತರ ಮಕ್ಕಳೇ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಥ ಸಂದರ್ಭದಲ್ಲಿ ಪೋಷಕರಿಗೆ ಆಗುವ ಸಂತೋಷವೇ ಬೇರೆ. ಸಚಿನ್ ಅವರ ಮಾತುಗಳಲ್ಲೂ ಇದೇ ಭಾವನೆ ಎದ್ದು ಕಾಣುತ್ತಿದೆ.

ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಮಗಳು ಸಾರಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಸಚಿನ್ ತೆಂಡೂಲ್ಕರ್, ಒಂದು ಕಾಲದಲ್ಲಿ ನಾನು ನಿನಗೆ ದಾರಿ ತೋರಿಸುತ್ತಿದ್ದೆ. ಈಗ ಹೆಚ್ಚಿನ ಸಂದರ್ಭಗಳಲ್ಲಿ ನೀನೇ ನಿನ್ನ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ನೋಡಿ ನನಗೆ ಸಂತೋಷವಾಗುತ್ತದೆ. ಹುಟ್ಟುಹಬ್ಬದ ಶುಭಾಶಯಗಳು ಸಾರಾ. ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹಾರ್ಟ್ ಎಮೋಜಿಯನ್ನೂ ಹಂಚಿಕೊಂಡಿದ್ದಾರೆ.

ಕೆಲವೇ ಸಾಲುಗಳ ಈ ಸಂದೇಶದಲ್ಲಿ ತಂದೆಯೊಬ್ಬರ ಮನಸ್ಸಿನ ಭಾವನೆ ಅಡಗಿದೆ. ಒಂದು ಕಾಲದಲ್ಲಿ ಮಗಳ ಕೈ ಹಿಡಿದು ನಡೆಯಲು ಕಲಿಸಿದ ತಂದೆ, ಇಂದು ಆಕೆ ಸ್ವತಂತ್ರವಾಗಿ ತನ್ನ ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನೋಡಿ ಸಂತೋಷಪಡುತ್ತಿದ್ದಾರೆ.

ಮಕ್ಕಳು ಚಿಕ್ಕವರಿದ್ದಾಗ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ತಂದೆ-ತಾಯಿಯ ಮಾರ್ಗದರ್ಶನ ಇರುತ್ತದೆ. ಆದರೆ ಅವರು ಬೆಳೆದು ದೊಡ್ಡವರಾದಂತೆ ತಮ್ಮದೇ ಆದ ಕನಸುಗಳನ್ನು ಕಾಣುತ್ತಾರೆ, ತಮ್ಮದೇ ಆದ ದಾರಿಯನ್ನು ಹುಡುಕಿಕೊಳ್ಳುತ್ತಾರೆ. ಆಗ ಮಕ್ಕಳನ್ನು ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವಷ್ಟು ಬೆಳೆದಿರುವುದನ್ನು ನೋಡುವುದು ಪೋಷಕರಿಗೆ ಹೆಮ್ಮೆಯ ಕ್ಷಣ. ಸಚಿನ್ ಅವರ ಈ ಸಂದೇಶವೂ ಅಂಥದ್ದೇ ಒಂದು ಸುಂದರ ಭಾವನೆಯನ್ನು ಹಂಚಿಕೊಂಡಿದೆ.

ಸಾರಾ ತೆಂಡೂಲ್ಕರ್

ಸಾರಾ ತೆಂಡೂಲ್ಕರ್ ಅವರು 1997ರ ಅಕ್ಟೋಬರ್ 12ರಂದು ಮುಂಬೈನಲ್ಲಿ ಜನಿಸಿದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಅವರ ಮಗಳು ಸಾರಾ, ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ತಮ್ಮ ಆರಂಭಿಕ ಶಿಕ್ಷಣ ಪಡೆದಿದ್ದಾರೆ. ನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್ಗೆ ತೆರಳಿದ್ದರು.

ಸಾರಾ ತಮ್ಮ ವೈಯಕ್ತಿಕ ಜೀವನ ಮತ್ತು ಸೋಷಿಯಲ್ ಮೀಡಿಯಾ ಚಟುವಟಿಕೆಗಳಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಅವರಿಗೆ ಸಾಕಷ್ಟು ಫಾಲೋವರ್ಸ್ ಇದ್ದಾರೆ. ಅವರು ಹಂಚಿಕೊಳ್ಳುವ ಫೋಟೋಗಳು ಮತ್ತು ಪೋಸ್ಟ್ಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

21ನೇ ಶತಮಾನದ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬ್ಯಾಟರ್ ಆಯ್ಕೆ ಮಾಡಿದ ಸ್ಟುವರ್ಟ್ ಬ್ರಾಡ್‌..! ಕೊಹ್ಲಿ ಲಾಸ್ಟ್‌, ಮೊದಲ ಸ್ಥಾನ ಯಾರಿಗೆ?
ರಣಜಿ ಟ್ರೋಫಿ: 22 ರನ್‌ಗೆ 4 ವಿಕೆಟ್‌ ಪತನ! ಕರ್ನಾಟಕಕ್ಕೆ ಆಸರೆಯಾದ ನಾಯಕ ಸ್ಮರಣ್‌ ಅಮೋಘ ಶತಕ