ವಿಜಯವಾಡ: ರವಿಚಂದ್ರನ್ ಸ್ಮರಣ್‌ರ ಅಮೋಘ ಶತಕದ ನೆರವಿನಿಂದ ಆಂಧ್ರಪ್ರದೇಶ ವಿರುದ್ಧದ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಮೊತ್ತಕ್ಕೆ ಕುಸಿಯುವ ಅಪಾಯದಿಂದ ಕರ್ನಾಟಕ ಪಾರಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ, 22 ರನ್‌ಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಆಗ ನಾಯಕ ಸ್ಮರಣ್ ತಾಳ್ಮೆಯಿಂದ ಕಟ್ಟಿದ ಇನ್ನಿಂಗ್ಸ್, ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್ ಕಲೆಹಾಕಲು ನೆರವಾಯಿತು.
ಕಳೆದ ಬಾರಿಯ ರನ್ನರ್-ಅಪ್ ಕರ್ನಾಟಕ, ಮೊದಲ ದಿನದಂತ್ಯಕ್ಕೆಆತಿಥೇಯ ತಂಡದ 2 ವಿಕೆಟ್ ಕಬಳಿಸಿತು. ತಾರಾ ಬ್ಯಾಟಿಂಗ್ ಪಡೆಯೊಂದಿಗೆ ಕಣಕ್ಕಿಳಿದಿರುವ ಕರ್ನಾಟಕ, ಇನ್ನಿಂಗ್ಸ್‌ನ ಆರಂಭದಲ್ಲೇ ಮಯಾಂಕ್ ಅಗರ್‌ವಾಲ್ (5), ಕೆ.ವಿ.ಅನೀಶ್ (0), ಕೆ.ಎಲ್.ರಾಹುಲ್ (4), ಕರುಣ್ ನಾಯರ್ (8)ರ ವಿಕೆಟ್‌ಗಳನ್ನು ಕಳೆದುಕೊಂಡಿತು.
ತೀವ್ರ ಸಂಕಷ್ಟದಲ್ಲಿದ್ದ ತಂಡಕ್ಕೆ ಸ್ಮರಣ್ ಹಾಗೂ ಕೆ.ಎಲ್.ಶ್ರೀಜಿತ್ ಆಸರೆಯಾದರು. ಇವರಿಬ್ಬರು 5ನೇ ವಿಕೆಟ್‌ಗೆ 111 ರನ್ ಸೇರಿಸಿದರು. 58 ರನ್ ಗಳಿಸಿ ಶ್ರೀಜಿತ್ ಔಟಾದ ಬಳಿಕ, ಸ್ಮರಣ್ 8ನೇ ವಿಕೆಟ್‌ಗೆ ಮಾಧವ್ ಬಜಾಜ್ ಜೊತೆ ಸೇರಿ ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು.
ಚೊಚ್ಚಲ ಪಂದ್ಯವಾಡುತ್ತಿರುವ ಗುಲ್ಬರ್ಗಾದ ಮಾಧವ್, 33 ರನ್ ಗಳಿಸಿ 59 ರನ್ ಜೊತೆಯಾಟದಲ್ಲಿ ಭಾಗಿಯಾದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8ನೇ ಶತಕ ದಾಖಲಿಸಿದ ಸ್ಮರಣ್ 218 ಎಸೆತದಲ್ಲಿ 11 ಬೌಂಡರಿ, 1 ಸಿಕ್ಸರ್‌ನೊಂದಿಗೆ 126 ರನ್ ಗಳಿಸಿ ಔಟಾದರು.
ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಬಳಿಕ ದಿನದಾಟದ ಕೊನೆಯಲ್ಲಿ 5 ಓವರ್ ಬೌಲ್ ಮಾಡಿದ ಕರ್ನಾಟಕ, 16 ರನ್‌ಗೆ ಆಂಧ್ರದ 2 ವಿಕೆಟ್ ಪಡೆಯಿತು. ಹೇಮಂತ್ ರೆಡ್ಡಿ 1, ತ್ರಿಪುರಾಣ ವಿಜಯ್ (4) ರನ್‌ಗೆ ಔಟಾದರು. ಸ್ಪಿನ್ನರ್‌ಗಳಾದ ಶಿಖರ್ ಶೆಟ್ಟಿ ಹಾಗೂ ಮಾಧವ್ ತಲಾ 1 ವಿಕೆಟ್ ಕಿತ್ತರು. ಆಂಧ್ರ ಇನ್ನೂ 258 ರನ್ ಹಿನ್ನಡೆಯಲ್ಲಿದ್ದು, ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಮೇಲೆ ಕಣ್ಣಿಟ್ಟಿದೆ.
ಸ್ಕೋರ್: ಕರ್ನಾಟಕ 82.2 ಓವರಲ್ಲಿ 274/10 (ಸ್ಮರಣ್ 126, ಶ್ರೀಜಿತ್ 58, ಸೌರಭ್ 3-69), ಆಂಧ್ರ 1ನೇ ದಿನದಂತ್ಯಕ್ಕೆ 16/2
ಪುದುಚೇರಿ: ಆಸ್ಟ್ರೇಲಿಯಾ ‘ಎ’ ವಿರುದ್ಧದ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 49 ರನ್ ಜಯ ಸಾಧಿಸಿದ ಭಾರತ ‘ಎ’ ಸರಣಿ ವೈಟ್‌ವಾಶ್‌ನಿಂದ ಪಾರಾಗಿದೆ. ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ‘ಎ’ 2-1ರಲ್ಲಿ ಸರಣಿ ತನ್ನದಾಗಿಸಿಕೊಂಡಿತು. ಭಾರತ 47.3 ಓವರಲ್ಲಿ 275 ರನ್‌ಗೆ ಆಲೌಟ್ ಆದರೆ, ಆಸ್ಟ್ರೇಲಿಯಾ 46.2 ಓವರಲ್ಲಿ 226ಕ್ಕೆ ಸರ್ವಪತನಗೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.