ಬ್ಯಾಟಿಂಗ್ ಗಮನ ಹರಿಸಲು ಹೇಳಿದ್ರೆ, ಊರ್ವಶಿ ಜೊತೆ ಡೇಟಿಂಗ್ ಮಾಡಿದ್ರಾ ಪಂತ್?

By Suvarna News  |  First Published Dec 13, 2019, 10:11 AM IST

ವಿಕೆಟ್ ಕೀಪರ್ ರಿಷಬ್ ಪಂತ್‌‍ಗೆ ಅವಕಾಶದ ಮೇಲೆ ಅವಕಾಶ ಸಿಗುತ್ತಿದೆ. ಆದರೆ ಪ್ರದರ್ಶನ ಮಾತ್ರ ರಾಯರ ಕುದುರೆ ಕತ್ತೆಯಾದಂತಿದೆ. ಪಂದ್ಯದಿಂದ ಪಂದ್ಯಕ್ಕೆ ಪಂತ್ ಲಯ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಪಂತ್ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ಕಾರಣ ಬಹಿರಂಗವಾಗಿದೆ. 


ನವದೆಹಲಿ(ಡಿ.13): ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಪ್ರತಿ ಪಂದ್ಯದಲ್ಲಿ ಟೀಕೆ ಎದುರಿಸುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಪಂತ್ ಬ್ಯಾಟಿಂಗ್ ಕಳಪೆಯಾಗುತ್ತಿದೆ. ಇದರ ಜೊತೆಗೆ  ಟೀಂ ಇಂಡಿಯಾ ನಾಯಕ, ಕೋಚ್, ಆಯ್ಕೆ ಸಮಿತಿ, ಮ್ಯಾನೇಜ್ಮೆಂಟ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಪಂತ್‌ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಒಂದಂಕಿಯಲ್ಲಿದ್ದ ಪಂತ್ ಸ್ಕೋರ್ ಇದೀಗ ಸೊನ್ನೆಗೆ ಇಳಿದಿದೆ. ಒಂದೆಡೆ ಬ್ಯಾಟಿಂಗ್ ಗಮನ ಹರಿಸಬೇಕಿದ್ದ ಪಂತ್, ಇದೀಗ ಡೇಟಿಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ. 

ಇದನ್ನೂ ಓದಿ: ಪಂತ್‌ಗೆ ವಯಸ್ಸಾದರೂ ಸುಧಾರಣೆಯಾಗಲ್ಲ; ಕಳಪೆ ಪ್ರದರ್ಶನಕ್ಕೆ ಫ್ಯಾನ್ಸ್ ಆಕ್ರೋಶ!

Tap to resize

Latest Videos

undefined

ರಿಷಬ್ ಪಂತ್ ಇದೀಗ ಬಾಲಿವುಡ್ ನಟಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. 22 ವರ್ಷದ ರಿಷಬ್ ಪಂತ್, ಬಾಲಿವುಡ್ ನಟಿ ಊರ್ವಶಿ ರೌಟೆಲಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ರಿಷಬ್ ಡೇಟಿಂಗ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. 

ಇದನ್ನೂ ಓದಿ: ಸಂಜು, ಸಂಜು ಎಂದು ಕೂಗಿದ ಫ್ಯಾನ್ಸ್; ಗರಂ ಆದ ವಿರಾಟ್ ಕೊಹ್ಲಿ

ವಿಂಡೀಸ್‌ ವಿರುದ್ಧದ ಟಿ20 ಸರಣಿಗೂ ಮುನ್ನ ರಿಷಭ್‌, ಊರ್ವಶಿ ಜತೆ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ವೆಸ್ಟ್ ಇಂಡೀಸ್ ವಿರುದ್ದದ 3 ಟಿ20 ಪಂದ್ಯಗಳಲ್ಲಿ ಪಂತ್ ಕಳಪೆ ಪ್ರದರ್ಶನ ನೀಡಿದ್ದರು. 3 ಪಂದ್ಯಗಳಿಂದ 51 ರನ್ ಸಿಡಿಸಿದ್ದಾರೆ. ಮುಂಬೈನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಪಂತ್ ಶೂನ್ಯ ಸುತ್ತಿದ್ದರು. ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಪಂತ್ ಕಳಪೆ ಪ್ರದರ್ಶನ ನೀಡಿದ್ದರು. ಇತ್ತ ಮತ್ತೊರ್ವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವಕಾಶಕ್ಕಾಗಿ ಬೆಂಚ್ ಕಾದರೂ ಸ್ಥಾನ ಸಿಗದೆ ನಿರಾಸೆ ಅನುಭವಿಸಿದರು. ಪಂತ್ ಆಯ್ಕೆ ಹಾಗೂ ಬ್ಯಾಟಿಂಗ್ ಕುರಿತು ಸಾಕಷ್ಟು ಟೀಕೆ ಕೇಳಿ ಬಂದಿದೆ. 

ಡಿಸೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!