ಪಂತ್‌ಗೆ ವಯಸ್ಸಾದರೂ ಸುಧಾರಣೆಯಾಗಲ್ಲ; ಕಳಪೆ ಪ್ರದರ್ಶನಕ್ಕೆ ಫ್ಯಾನ್ಸ್ ಆಕ್ರೋಶ!

Published : Dec 12, 2019, 03:42 PM ISTUpdated : Dec 12, 2019, 04:13 PM IST
ಪಂತ್‌ಗೆ ವಯಸ್ಸಾದರೂ ಸುಧಾರಣೆಯಾಗಲ್ಲ; ಕಳಪೆ ಪ್ರದರ್ಶನಕ್ಕೆ ಫ್ಯಾನ್ಸ್ ಆಕ್ರೋಶ!

ಸಾರಾಂಶ

ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಪದೆ ಪದೇ ಕಳಪೆ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈ ಟಿ20 ಪಂದ್ಯದಲ್ಲಿ ಪಂತ್ ಡಕೌಟ್ ಆಗೋ ಮೂಲಕ ಫ್ಯಾನ್ಸ್ ಪಿತ್ತ ನೆತ್ತಿಗೇರಿಸಿದ್ದಾರೆ. ಪಂತ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ(ಡಿ.12): ಟೀಂ ಇಂಡಿಯಾ ವಿಕೆಟ್ ಕೀಪರ್ ಎಂ.ಎಸ್.ಧೋನಿ ವಿದಾಯದ ಅಂಚಿನಲ್ಲಿದ್ದಾರೆ. ಹೀಗಾಗಿ ಧೋನಿ ಬಳಿಕ ಟೀಂ ಇಂಡಿಯಾಗೆ ಸಮರ್ಥ ವಿಕೆಟ್ ಕೀಪರ್ ಅವಶ್ಯಕತೆ ಇದೆ. ಇದಕ್ಕಾಗಿ ಆಯ್ಕೆ ಸಮಿತಿ, ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಸೇರಿದಂತೆ ಟೀಂ ಇಂಡಿಯಾ ದಿಗ್ಗಜರು ರಿಷಬ್ ಪಂತ್‌ಗಿಂತ ಉತ್ತಮ ಆಯ್ಕೆ ಇನ್ನೊಬ್ಬರಿಲ್ಲ ಎನ್ನತ್ತಿದ್ದಾರೆ. ಆದರೆ ಪಂತ್ ಮಾತ್ರ ಸುಧಾರಣೆಯಾಗುತ್ತಿಲ್ಲ. ಮುಂಬೈ ಪಂದ್ಯದಲ್ಲಿ ಪಂತ್ ಕಳಪೆಯಾಟ ಮುಂದುವರಿದಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಂಜು, ಸಂಜು ಎಂದು ಕೂಗಿದ ಫ್ಯಾನ್ಸ್; ಗರಂ ಆದ ವಿರಾಟ್ ಕೊಹ್ಲಿ!

ಪಂತ್ ಬದಲು ತಂಡಕ್ಕೆ ಆಯ್ಕೆಯಾಗಿರುವ ಪಂತ್‌ಗಿಂತ ಪ್ರತಿಭಾನ್ವಿತ ಸಂಜು ಸಾಮ್ಸನ್‌ಗೆ ಅವಕಾಶ ನೀಡಿ ಅನ್ನೋ ಕೂಗು ಕೇಳಿ ಬಂದಿತ್ತು. ಆದರೆ ಅವಕಾಶಕ್ಕಾಗಿ ಕಾದು ಕುಳಿತ ಸಂಜು ಸ್ಯಾಮ್ಸನ್‌ಗೆ ಒಂದು ಪಂದ್ಯದಲ್ಲೂ ಚಾನ್ಸ್ ಕೊಡಲೇ ಇಲ್ಲ. ಪಂತ್ ಇಂದಲ್ಲ ನಾಳೆ ಅಬ್ಬರಿಸುತ್ತಾರೆ. ಭವಿಷ್ಯದಲ್ಲಿ ಪಂತ್ ಬಿಟ್ಟರೆ ಇನ್ಯಾರೂ ಸ್ಟಾರ್‌ಗಳಿಲ್ಲ ಅನ್ನೋ ಮಟ್ಟಿಗೆ ಕ್ರಿಕೆಟ್ ದಿಗ್ಗಜರು ಪ್ರತಿಕ್ರಿಯೆ ನೀಡಿದರು. ಆದರೆ ವಿಂಡೀಸ್ ವಿರುದ್ದದ 3ನೇ ಟಿ20ಯಲ್ಲಿ ಪಂತ್ ಶೂನ್ಯ ಸುತ್ತಿದರು.

ಇದನ್ನೂ ಓದಿ: ಸ್ಯಾಮ್ಸನ್ ಬದಲು ಪಂತ್‌ಗೆ ಸ್ಥಾನ; ಟೀಂ ಆಯ್ಕೆಗೆ ಫ್ಯಾನ್ಸ್ ಗರಂ!

ವಿಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಪಂತ್ ಕಳಪೆಯಾಟ ಮುಂದುವರಿದಿದೆ. ಇಷ್ಟಾದರೂ ಹಲವರಿಗೆ ಪಂತ್ ಸೂಪರ್ ಸ್ಟಾರ್. ಇದೀಗ ಪಂತ್ ವಿರುದ್ದ ಅಭಿಮಾನಿಗಳು ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2035 ಆದರೂ ಪಂತ್ ಕಳಪೆಯಾಟ ಹೀಗೆ ಇರಲಿದೆ. ಇಷ್ಟೇ ಅಲ್ಲ ದಿಗ್ಗಜರೂ ಮಾತ್ರ ಪಂತ್ ಯುವ ಆಟಗಾರ, ಹೀಗಾಗಿ ಫಾರ್ಮ್‌ಗೆ ಬರಲು ಕೆಲ ಪಂದ್ಯಗಳು ಬೇಕಿದೆ ಎಂದು ಅಭಿಪ್ರಾಯ ಪಡಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಪಂತ್ ವಿರುದ್ಧ ಫ್ಯಾನ್ಸ್ ಆಕ್ರೋಶ ಇಲ್ಲಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?