47 ಕೋಟಿ ಪಡೆದ ನಾಲ್ವರು ಬೆಂಚ್ ಕಾದ್ರು..! RCB ಮ್ಯಾನೇಜ್‌ಮೆಂಟ್ ಪ್ಲಾನ್ ಅರ್ಥ ಆಯ್ತಾ?

By Suvarna News  |  First Published Apr 17, 2024, 1:01 PM IST

ಕ್ರೀಡೆಯ, ಫ್ರಾಂಚೈಸಿಯ ಹಾಗೂ ಅಭಿಮಾನಿಗಳ ಒಳಿತಿಗಾಗಿ RCBಯನ್ನು ಸೇಲ್ ಮಾಡಿ ಮಾಲೀಕತ್ವ ಬದಲಿಸಬೇಕು. ಬಿಸಿಸಿಐ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಹೊಸ ಮಾಲೀಕತ್ವದಲ್ಲಿ RCB ಸದೃಢವಾಗಿ ರೂಪುಗೊಳ್ಳಬಹುದು.


ಬೆಂಗಳೂರು: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಕೆಟ್ಟ ದಾಖಲೆ ಮಾಡಿದೆ. ಇದರ ಜತೆಗೆ ಪ್ಲೇ ಆಫ್ ರೇಸ್ನಿಂದಲೂ ಬಹುತೇಕ ಹೊರಬಿದ್ದಿದೆ. ಆದ್ರೂ ವಿರೋಚಿತವಾಗಿ ಸೋಲು ಅನುಭವಿಸ್ತು. ಪಂದ್ಯ ಸೋತ್ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ವಿರುದ್ಧ ಫ್ಯಾನ್ಸ್ ಹರಿಹಾಯ್ದಿದ್ದಾರೆ. ಕೆಲವರಂತೂ ಕೋಟಿ ವೀರರನ್ನ ಕೈ ಬಿಟ್ಟಿದ್ದೇಕೆ ಅನ್ನೋ ಪ್ರಶ್ನೆ ಕೇಳಿದ್ದಾರೆ.

ಯಾರಿಗೂ ಅರ್ಥವಾಗ್ತಿಲ್ಲ ಆರ್‌ಸಿಬಿ ಮ್ಯಾನೇಜ್ಮೆಂಟ್ ಪ್ಲಾನ್...!

Tap to resize

Latest Videos

ಕ್ರೀಡೆಯ, ಫ್ರಾಂಚೈಸಿಯ ಹಾಗೂ ಅಭಿಮಾನಿಗಳ ಒಳಿತಿಗಾಗಿ RCBಯನ್ನು ಸೇಲ್ ಮಾಡಿ ಮಾಲೀಕತ್ವ ಬದಲಿಸಬೇಕು. ಬಿಸಿಸಿಐ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಹೊಸ ಮಾಲೀಕತ್ವದಲ್ಲಿ RCB ಸದೃಢವಾಗಿ ರೂಪುಗೊಳ್ಳಬಹುದು. ಇದು ಭಾರತದ ಟೆನಿಸ್ ತಾರೆ ಕರ್ನಾಟಕದ ಮಹೇಶ್ ಭೂಪತಿ ಟ್ವೀಟ್. ಮಹೇಶ್ ಭೂಪತಿಗೆ ಇಷ್ಟು ಬೇಸರವಾಗಿದೆ ಅಂದ್ರೆ ಇನ್ನು RCBಯ ಡೈ ಹಾರ್ಡ್ ಫ್ಯಾನ್ಸ್‌ಗೆ ಇನ್ನೆಷ್ಟು ಬೇಸರವಾಗಿರಬೇಡ ಹೇಳಿ.

ಕಾಮೆಂಟೇಟರ್ To ಗ್ರೇಟ್ ಫಿನಿಶರ್: ಟೀಕಾಕಾರರ ಬಾಯಿ ಮುಚ್ಚಿಸಿದ ಡಿಕೆ ಬಾಸ್‌..!

ಮೊನ್ನೆ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಪಂದ್ಯವನ್ನ RCB ವಿರೋಚಿತವಾಗಿ ಸೋತಿದಕ್ಕೆ ಬೇಸರವಿಲ್ಲ. ಆದ್ರೆ ಪ್ಲೇಯಿಂಗ್-11 ಆಯ್ಕೆ ವಿಷಯಕ್ಕೆ ಮಾತ್ರ ಎಲ್ಲರಿಗೂ ಬೇಸವಿದೆ. ಬರೋಬ್ಬರಿ 90 ಕೊಟ್ಟು 24 ಆಟಗಾರರನ್ನ ಖರೀದಿಸಿದೆ. ಆದ್ರೆ ಮೊನ್ನೆ ಒಂದೇ ಪಂದ್ಯದಲ್ಲಿ 47 ಕೋಟಿ ರುಪಾಯಿ ಕೊಟ್ಟು ಖರೀದಿಸಿದ ನಾಲ್ವರು ಆಟಗಾರರನ್ನ ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಿದೆ. ಇದಕ್ಕಿಂತ ದುರಂತ ಮತ್ತೊಂದಿಲ್ಲ.

ಕ್ಯಾಮರೋನ್ ಗ್ರೀನ್‌ಗೆ 17.5 ಕೋಟಿ, ಅಲ್ಜರಿ ಜೋಸೆಫ್‌ಗೆ 11.5, ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 11 ಮತ್ತು ಮೊಹಮ್ಮದ್ ಸಿರಾಜ್‌ಗೆ 7 ಕೋಟಿ ಕೊಟ್ಟು ಖರೀದಿಸಿದೆ. ಆದ್ರೆ ಮೊನ್ನೆ ಹೈದ್ರಾಬಾದ್ ಪಂದ್ಯದಲ್ಲಿ ಈ ನಾಲ್ವರನ್ನೂ ಆಡಿಸಲೇ ಇಲ್ಲ. ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಿದಕ್ಕೆ ಈ ನಾಲ್ವರು ಕಳಪೆ ಫಾರ್ಮ್ ಕಾರಣವಿರಬಹುದು. ಆದ್ರೆ ಒಂದೇ ಪಂದ್ಯದಿಂದ ನಾಲ್ವರು ಸ್ಟಾರ್ ಪ್ಲೇಯರ್ಗಳನ್ನ ಡ್ರಾಪ್ ಮಾಡಿದ್ದು ಎಷ್ಟು ಸರಿ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಹಾರ್ದಿಕ್ ಪಾಂಡ್ಯಗೆ ಹೊಸ ಟಾಸ್ಕ್: ಟಿ20 ವಿಶ್ವಕಪ್‌ ತಂಡದ ರೇಸ್‌ನಲ್ಲಿ ಶಿವಂ ದುಬೆ, ಚಹಲ್

ಕೇಳಿ ರೆಸ್ಟ್ ಪಡೆದ ಮ್ಯಾಕ್ಸ್ವೆಲ್

ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಮ್ಯಾಕ್ಸ್ವೆಲ್ ಮತ್ತು ಸಿರಾಜ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅವರಿಬ್ಬರಿಗೆ ಒಂದೆರಡು ಪಂದ್ಯದಿಂದ ರೆಸ್ಟ್ ಬೇಕಿತ್ತು. ಅದಕ್ಕಾಗಿಯೇ ಮ್ಯಾಕ್ಸಿ ಕೇಳಿಕೊಂಡು ವಿಶ್ರಾಂತಿ ಪಡೆದಿದ್ದಾರೆ. ರೆಸ್ಟ್ ಪಡೆದು ಕಮ್ಬ್ಯಾಕ್ ಮಾಡೋ ಗುರಿ ಇಟ್ಟುಕೊಂಡಿದ್ದಾರೆ ಇವರಿಬ್ಬರು. ಆದ್ರೆ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನಾದ್ರೂ ಆಡಿಸಬಹುದಿತ್ತು ಅಲ್ವಾ..? ಇಬ್ಬರು ಫಾರಿನ್ ಬೌಲರ್ಸ್ ಆಡಿಸುವ ಜಾರುರತ್ತು ಏನಿತ್ತು. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಬ್ಯಾಟಿಂಗ್ ಲೈನ್ ಅಪ್ ವೀಕ್ ಮಾಡಿಕೊಂಡು ಪಂದ್ಯವನ್ನೂ ಸೋತಿತು ಆರ್ಸಿಬಿ. ಒಟ್ನಲ್ಲಿ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಪ್ಲಾನ್ ಯಾರಿಗೂ ಅರ್ಥವಾಗ್ತಿಲ್ಲ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!