ಕಾಮೆಂಟೇಟರ್ To ಗ್ರೇಟ್ ಫಿನಿಶರ್: ಟೀಕಾಕಾರರ ಬಾಯಿ ಮುಚ್ಚಿಸಿದ ಡಿಕೆ ಬಾಸ್‌..!

By Kannadaprabha News  |  First Published Apr 17, 2024, 11:38 AM IST

ಈ ಬಾರಿಯ IPL ಸಮರದಲ್ಲಿ RCB ಸತತ ಸೋಲುಗಳಿಂದ ಕಂಗೆಟ್ಟಿದೆ. ಈವರೆಗೂ ಆಡಿರೋ 7 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆಲುವು ಕಂಡಿದೆ. ಆದ್ರೆ, ಈ ಸೋಲುಗಳ ನಡೆವೆಯೂ ಡು ಪ್ಲೆಸಿಸ್  ಪಡೆಯ ಅಲ್ಪ- ಸ್ವಲ್ಪ ಮಾನ ಕಾಪಾಡ್ತಿರೋದು ದಿನೇಶ್ ಕಾರ್ತಿಕ್ ಅನ್ನೋ ಪಾರ್ಟ್‌ಟೈಮ್ ಕ್ರಿಕೆಟರ್, ಫುಲ್ ಟೈಮ್‌ ಕಾಮೆಂಟೇಟರ್.


ಬೆಂಗಳೂರು: ಈ ಬಾರಿಯ IPLನಲ್ಲಿ ಜೂನಿಯರ್ಗಳು ಮಾತ್ರವಲ್ಲ, 35 ವರ್ಷ ದಾಟಿರೋ ಸೀನಿಯರ್ಸ್ ಕೂಡ ಅಬ್ಬರಿಸ್ತಿದ್ದಾರೆ. ಅದರಲ್ಲೂ ಈ ಒಬ್ಬ ಪ್ಲೇಯರ್ ಅಂತೂ ನಿಜಕ್ಕೂ ಧೂಳೆಬ್ಬಿಸ್ತಿದ್ದಾರೆ. 38ನೇ ವಯಸ್ಸಿನಲ್ಲಿ ಅತ್ಯದ್ಭುತವಾಗಿ ಬ್ಯಾಟ್ ಬೀಸ್ತಿದ್ದಾರೆ. ಆ ಮೂಲಕ ಯುವ ಆಟಗಾರರಿಗೆ ಬಿಗ್ ಇನ್ಸಿಪಿರೇಷನ್ ಆಗಿದ್ದಾರೆ.

RCBಯ ಆಪತ್ಘಾಂಧವ ದಿನೇಶ್ ಕಾರ್ತಿಕ್..!

Tap to resize

Latest Videos

ಈ ಬಾರಿಯ IPL ಸಮರದಲ್ಲಿ RCB ಸತತ ಸೋಲುಗಳಿಂದ ಕಂಗೆಟ್ಟಿದೆ. ಈವರೆಗೂ ಆಡಿರೋ 7 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆಲುವು ಕಂಡಿದೆ. ಆದ್ರೆ, ಈ ಸೋಲುಗಳ ನಡೆವೆಯೂ ಡು ಪ್ಲೆಸಿಸ್  ಪಡೆಯ ಅಲ್ಪ- ಸ್ವಲ್ಪ ಮಾನ ಕಾಪಾಡ್ತಿರೋದು ದಿನೇಶ್ ಕಾರ್ತಿಕ್ ಅನ್ನೋ ಪಾರ್ಟ್‌ಟೈಮ್ ಕ್ರಿಕೆಟರ್, ಫುಲ್ ಟೈಮ್‌ ಕಾಮೆಂಟೇಟರ್. ಕಾರ್ತಿಕ್ ಇಲ್ಲ ಅಂದ್ರೆ, RCBಯ ಮಾನ ಮೂರು ಕಾಸಿಗೆ ಹರಾಜಾಗ್ತಿತ್ತು ಅಂದ್ರೆ ತಪ್ಪಿಲ್ಲ. 

ಹಾರ್ದಿಕ್ ಪಾಂಡ್ಯಗೆ ಹೊಸ ಟಾಸ್ಕ್: ಟಿ20 ವಿಶ್ವಕಪ್‌ ತಂಡದ ರೇಸ್‌ನಲ್ಲಿ ಶಿವಂ ದುಬೆ, ಚಹಲ್

RCBಗೆ ಎಂಟ್ರಿ ನೀಡಿದ್ಮೇಲೆ ಬದಲಾಯ್ತು ಡಿಕೆ ಲಕ್..! 

2004ರಲ್ಲಿ ಟೀಂ ಇಂಡಿಯಾಗೆ ಕಾಲಿಟ್ಟ ಡಿಕೆ, ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಮಿಂಚಿದ್ರು. ಆದ್ರೆ, ಧೋನಿ ಎಂಟ್ರಿ ನಂತರ ದಿನೇಶ್ ಕಾರ್ತಿಕ್ ತಂಡದಿಂದ ಹೊರಗುಳಿದಿದ್ದೇ ಹೆಚ್ಚು. ಆದ್ರೆ, ಅವಕಾಶ ಸಿಕ್ಕಾಗಲೆಲ್ಲಾ ಈ ತಮಿಳುನಾಡು ಪ್ಲೇಯರ್ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ರು. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಅಂದ್ರೆ, ಅದು 2018ರ ನಿದಾಹಾಸ್ ಟ್ರೋಫಿ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಇನ್ನಿಂಗ್ಸ್. 

ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ 168 ರನ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ, ಸೋಲಿನ ಸುಳಿಗೆ ಸಿಲುಕಿತ್ತು. 7ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಡಿಕೆ, ಕೇವಲ 8 ಎಸೆತಗಳಲ್ಲಿ 29 ರನ್ ಬಾರಿಸಿದ್ರು. ಅದರಲ್ಲೂ ಕೊನೆಯ ಬಾಲ್ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ, ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ರು. 

ಸುಮ್ಮನೇ ಆರ್‌ಸಿಬಿಯನ್ನು ಮಾರಿಬಿಡಿ..! ಭಾರತದ ಟೆನಿಸ್ ದಿಗ್ಗಜನ ಬೇಸರದ ನುಡಿ

ತಂಡದಲ್ಲಿನ ಕಾಂಪಿಟೇಷನ್, ಯುವ ಆಟಗಾರರ ಎಂಟ್ರಿಯಿಂದಾಗಿ, ಕಾರ್ತಿಕ್‌ಗೆ ಟೀಂ ಇಂಡಿಯಾದ ಬಾಗಿಲು ಬಂದ್ ಆಯ್ತು. ಆದ್ರೆ, IPLನಲ್ಲಿ RCBಗೆ ಎಂಟ್ರಿ ನೀಡಿದ್ಮೇಲೆ ಡಿಕೆ ಲಕ್ ಚೇಂಜ್ ಆಯ್ತು. RCB ತಂಡ ಸೇರೋ ಮುನ್ನ ಡಿಕೆ, ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡದಲ್ಲಿದ್ರು. ಫ್ಲಾಪ್ ಶೋ ನೀಡಿದ್ದರಿಂದ, ಕೋಲ್ಕತ್ತಾ ಫ್ರಾಂಚೈಸಿ ಡಿಕೆಯನ್ನ ರಿಲೀಸ್ ಮಾಡ್ತು. ಅಲ್ಲಿಗೆ ಡಿಕೆ ಕರಿಯರ್ ಮುಗಿದೇ ಹೋಯ್ತು ಅನ್ನೋ ಮಾತುಗಳು ಕೇಳಿ ಬಂದಿದ್ವು. ಅಷ್ಟೊತ್ತಿಗೆ ಕಾಮೆಂಟೇಟರ್ ಆಗಿ ಡಿಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ರು. 

ಈ ಕಾಮೆಂಟೇಟರ್ ಏನ್ ಮಾಡ್ತಾನೆ ಅಂದಿದ್ರು..!

2022ರ IPLಗೂ ಮುನ್ನ ನಡೆದ ಮೆಗಾ ಆಕ್ಷನ್ನಲ್ಲಿ RCB ಫ್ರಾಂಚೈಸಿ 5.5 ಕೋಟಿ ದಿನೇಶ್ ಕಾರ್ತಿಕ್‌ರನ್ನ ಖರೀದಿಸ್ತು. ಆಗ ಫ್ಯಾನ್ಸ್ ಮತ್ತು ಕೆಲ ಮಾಜಿ ಕ್ರಿಕೆಟರ್ಸ್ RCBಗೆ ಬುದ್ಧಿ ಇಲ್ವಾ..? ಈ ಕಾಮೆಂಟೇಟರ್‌ನ ತಗೊಂಡು ಏನ್ ಮಾಡ್ತಾರೆ ಅಂದಿದ್ರು. ಆದ್ರೆ, ಆ ಸೀಸನ್ನಲ್ಲಿ ಡಿಕೆ, ಅಬ್ಬರಿಸಿ ಬೊಬ್ಬರಿದಿದ್ರು. ತಮ್ಮ ತಾಕತ್ತನ್ನ ಪ್ರಶ್ನಿಸಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ರು. 16 ಪಂದ್ಯಗಳಿಂದ 183.33ರ ಸ್ಟ್ರೈಕ್ರೇಟ್ನಲ್ಲಿ 330 ರನ್ ದಾಖಲಿಸಿದ್ರು. ಇದ್ರಿಂದ T20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಯ್ತು. 3 ವರ್ಷಗಳ ನಂತರ ಟೀಂ ಇಂಡಿಯಾದ ಡೋರ್ ಮತ್ತೆ ಓಪನ್ ಆಯ್ತು. 

ಇನ್ನು ಕಳೆದ ಸೀಸನ್ನಲ್ಲಿ ಡಿಕೆ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಇದ್ರಿಂದ ಅವ್ರನ್ನ ತಂಡದಿಂದ ರಿಲೀಸ್ ಮಾಡ್ಬೇಕು ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೆ, ಈ ಬಾರಿ ಡಿಕೆ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದ್ದಾರೆ. ಇದ್ರಿಂದ ಅಂದು ಟೀಕೆ ಮಾಡಿದ್ದವರೇ, ಇಂದು ಡಿಕೆಯನ್ನ ಹಾಡಿಹೊಗಳ್ತಿದ್ದಾರೆ. 

15 ದಿನ ಮೊದಲು ಪ್ರಾಕ್ಟೀಸ್, ಲೀಗ್ನಲ್ಲಿ ಸೂಪರ್ ಸಕ್ಸಸ್..!

ಯೆಸ್, ವರ್ಷಪೂರ್ತಿ ಮ್ಯಾಚ್ಗಳನ್ನಾಡೋ ಯಂಗ್‌ಸ್ಟರ್ಸ್‌ಗಳೇ IPLನಲ್ಲಿ ರನ್‌ಗಳಿಸಲು ಒದ್ದಾಡ್ತಾರೆ. ಆದ್ರೆ, 10 ತಿಂಗಳು ಕಾಮೆಂಟ್ರಿ ಮಾಡೋ ಕಾರ್ತಿಕ್, IPL  ಅರಂಭಕ್ಕೂ 15 ದಿನ ಮುನ್ನ ಪ್ರಾಕ್ಟೀಸ್ ಶುರು ಮಾಡಿ, ಅಬ್ಬರಿಸ್ತಿದ್ದಾರೆ. RCB ತಂಡಕ್ಕೆ ಆಪತ್ಭಾಂಧವರಾಗಿದ್ದಾರೆ. ಇನ್ಫ್ಯಾಕ್ಟ್ RCB ಗೆದ್ದಿರೋ ಏಕೈಕ ಪಂದ್ಯದ ಮ್ಯಾಚ್ ವಿನ್ನರ್ ಕೂಡ ಡಿಕೇನೆ.!  

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡಿಕೆ ಜಸ್ಟ್, 10 ಎಸೆತಗಳಲ್ಲಿ 3 ಫೋರ್ ಮತ್ತು 2 ಸಿಕ್ಸರ್ ಸಹಿತ 28 ರನ್ ಚಚ್ಚಿದ್ರು. ಆ ಮೂಲಕ  ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.  7 ಪಂದ್ಯಗಳಲ್ಲಿ ಡಿಕೆ,  205.45ರ ಭಯಾನಕ ಸ್ಟ್ರೈಕ್ರೇಟ್ನಲ್ಲಿ 226 ರನ್ ಸಿಡಿಸಿದ್ದಾರೆ. ಒಟ್ಟಿನಲ್ಲಿ ಡಿಕೆ ಆಟ, ಅವ್ರ ನೆವರ್ ಗಿವ್ ಅಪ್ ಆ್ಯಟಿಟ್ಯುಡ್, ಕಮ್‌ಬ್ಯಾಕ್ ಎಂತವರಿಗೂ ಸ್ಫೂರ್ತಿ. ಮುಂದಿನ ಪಂದ್ಯಗಳಲ್ಲೂ ಡಿಕೆ ಅಬ್ಬರಿಸಲಿ, ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡಲಿ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!