IPLಗೆ ಅಹಮ್ಮದಾಬಾದ್, ಲಕ್ನೌ ಹೊಸ 2 ತಂಡ; ಬಿಡ್ಡಿಂಗ್ ಗೆದ್ದ RPSG ಹಾಗೂ CVC ಕ್ಯಾಪಿಟಲ್!

By Suvarna News  |  First Published Oct 25, 2021, 7:40 PM IST
  • IPL ಟೂರ್ನಿಗೆ ಮತ್ತೆರಡು ತಂಡ ಸೇರ್ಪಡೆ, ಇನ್ನು 10 ತಂಡಗಳ ಹೋರಾಟ
  • ಅಹಮ್ಮದಾಬಾದ್, ಲಕ್ನೌ ಎರಡು ಹೊಸ ತಂಡಕ್ಕೆ ಗ್ರೀನ್ ಸಿಗ್ನಲ್
  • 2 ತಂಡ ಖರೀದಿಸಿಲು 22 ಕಂಪನಿಗಳಿಂದ ಬಿಡ್ಡಿಂಗ್
  • ಬಿಡ್ ಗೆದ್ದ RPSG ಹಾಗೂ ಲಂಡನ್ ಮೂಲದ ಸಿವಿಸಿ ಕ್ಯಾಪಿಟಲ್

ದುಬೈ(ಅ.25): ಟಿ20  ವಿಶ್ವಕಪ್ ಟೂರ್ನಿ ಒಂದಡೆಯಾದರೆ, ಮತ್ತೊಂದೆಡೆ ಬಿಸಿಸಿಐ ಮುಂಬರವು ಐಪಿಎಲ್ ಟೂರ್ನಿಗೆ ಭರದ ಸಿದ್ಧತೆ ನಡೆಸುತ್ತಿದೆ. ಮುಂದಿನ ಐಪಿಎಲ್ ಟೂರ್ನಿಗೆ 10 ತಂಡಗಳು ಹೋರಾಟ ನಡೆಸಲಿದೆ. ಇಂದು ದುಬೈನಲ್ಲಿ ನಡೆದ ಹೊಸ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಬಿಸಿಸಿಐ ಅಹಮ್ಮದಾಬಾದ್ ಹಾಗೂ ಲಕ್ನೌ ತಂಡಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.ಬಿಸಿಸಿಐ ಅಧೀಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.

T20 World Cup ಸೋಲಿನ ಗಾಯದ ಮೇಲೆ ಬರೆ, ಮುಂದಿನ ಪಂದ್ಯಕ್ಕೆ ಈ ಸ್ಟಾರ್ ಆಟಗಾರ ಆಡೋದು ಡೌಟ್..!

Latest Videos

ಹೌದು, ಮುಂದಿನ ಐಪಿಎಲ್ ಟೂರ್ನಿಯಿಂದ ಅಹಮ್ಮದಾಬಾದ್ ಹಾಗೂ ಲಕ್ನೌ ತಂಡ ಸೇರ್ಪಡೆಗೊಳ್ಳುತ್ತಿದೆ. ಸಂಜೀವ್ ಗೊಯಂಕಾ ಮಾಲೀಕತ್ವದ RPSG ಹಾಗೂ ಲಂಡನ್ ಮೂಲದ ಸಿವಿಸಿ ಕ್ಯಾಪಿಟಲ್ ಬಿಡ್ ಗೆದ್ದುಕೊಂಡಿದೆ. ಸಂಜೀವ್ ಗೊಯೆಂಕಾ 7,090 ಕೋಟಿ ರೂಪಾಯಿಗೆ ತಂಡ ಖರೀದಿಸಿದರೆ, ಸಿವಿಸಿ ಕ್ಯಾಪಿಟಲ್ 5,600 ಕೋಟಿ ರೂಪಾಯಿಗೆ ತಂಡ ಖರೀದಿಸಿತು.

2 ತಂಡಗಳ ಖರೀದಿಗಾಗಿ 22 ಕಂಪನಿಗಳು ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿತ್ತು. 22ರಲ್ಲಿ 10 ತಂಡಗಳು ಅಂತಿಮಗೊಂಡಿತ್ತು. ಇದೀಗ ಬಿಡ್ಡಿಂಗ್‌ನಲ್ಲಿ ಅಹಮ್ಮದಾಬಾದ್ ಹಾಗೂ ಲಕ್ನೌ ಎರಡು ತಂಡ ಹೊಸ ತಂಡವಾಗಿ ಐಪಿಎಲ್ ಟೂರ್ನಿ ಸೇರಿಕೊಳ್ಳುತ್ತಿದೆ ಎಂದು ಬಿಸಿಸಿಐ ಘೋಷಿಸಿದೆ.

Spirit of Cricket| ಗೆಲುವಿನ ಬಳಿಕ ಧೋನಿ ಎದುರು ಕೈಕಟ್ಟಿ ನಿಂತ ಪಾಕ್ ಆಟಗಾರರು!

ಅಹಮ್ಮದಾಬಾದ್, ಲಕ್ನೌ,  ಕಟಕ್, ಧರ್ಮಶಾಲಾ, ಗುವ್ಹಾಟಿ ನಗರಗಳ ತಂಡಕ್ಕಾಗಿ ಬಿಡ್ಡಿಂಗ್ ನಡೆದಿತ್ತು. ಮ್ಯಾಂಚೆಸ್ಟರ್ ಯುನೈಟೆಡ್, ಅದಾನಿ ಗ್ರೂಪ್, ಸಂಜೀವ್ ಗೊಯಂಕಾ ಮಾಲೀಕತ್ವದ RPSG ಗ್ರೂಪ್, ಜಿಂದಾಲ್ ಸ್ಟೀಲ್ ಸೇರಿದಂತೆ 22 ಕಂಪನಿಗಳು ಹೊಸ ತಂಡ ಖರೀದಿಸಲು ಆಸಕ್ತಿ ತೋರಿತ್ತು.  ಇದರಲ್ಲಿ ಎಂ.ಎಸ್.ಧೋನಿ ಮ್ಯಾನೇಜರ್ ಅರುಣ್ ಪಾಂಡೆಯ ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕೂಡ ಐಪಿಎಲ್ ತಂಡ ಖರೀದಿಸಲು ಆಸಕ್ತಿ ತೋರಿತ್ತು.

ಐಪಿಎಲ್ ತಂಡಗಳ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮುಂಬೈ ಇಂಡಿಯನ್ಸ್
ಚೆನ್ನೈ ಸೂಪರ್ ಕಿಂಗ್ಸ್
ಡೆಲ್ಲಿ ಕ್ಯಾಪಿಟಲ್ಸ್
ಸನ್‌ರೈಸರ್ಸ್ ಹೈದರಾಬಾದ್
ರಾಜಸ್ಥಾನ ರಾಯಲ್ಸ್
ಪಂಜಾಬ್ ಕಿಂಗ್ಸ್
ಅಹಮ್ಮದಾಬಾದ್(ಹೊಸ ತಂಡ)
ಲಕ್ನೌ(ಹೊಸ ತಂಡ)

ಸಂಜೀವ್ ಗೊಯೆಂಕಾ ಅವರ  RPSG ಗ್ರೂಪ್ ಐಪಿಎಲ್ ಟೂರ್ನಿಯಲ್ಲಿ 2 ವರ್ಷಗಳ ಕಾಲ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಅನ್ನೋ ತಂಡ ಮುನ್ನಡೆಸಿತ್ತು. ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಕಾರಣದಿಂದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಎರಡು ವರ್ಷ ನಿಷೇಧ ಹೇರಲಾಗಿತ್ತು. ಈ ಎರಡು ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡ ಕಣಕ್ಕಿಳಿದಿತ್ತು. ಇದರಲ್ಲಿ ರೈಸಿಂಗ್ ಪುಣೆ  ಫ್ರಾಂಚೈಸಿಯನ್ನು  ಇದೇ   RPSG ಗ್ರೂಪ್ ಖರೀದಿ ಮಾಡಿತ್ತು. 

15ನೇ ಐಪಿಎಲ್ ಆವೃತ್ತಿಯಿಂದ ಅಂದರೆ ಐಪಿಎಲ್ 2022ರಿಂದ ಹೊಸ ಎರಡು ತಂಡಗಳು ಸೇರಿಕೊಳ್ಳುತ್ತಿದೆ. ಇನ್ನು 10 ತಂಡಗಳ ಮೆಘಾ ಹರಾಜು ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. 

click me!