T20 World Cup: Afg vs SCO ಸ್ಕಾಟ್ಲೆಂಡ್ ಎದುರು ಟಾಸ್ ಗೆದ್ದ ಆಫ್ಘಾನ್ ಬ್ಯಾಟಿಂಗ್ ಆಯ್ಕೆ

By Suvarna NewsFirst Published Oct 25, 2021, 7:10 PM IST
Highlights

* ಶಾರ್ಜಾ ಮೈದಾನದಲ್ಲಿಂದು ಸ್ಕಾಟ್ಲೆಂಡ್‌-ಆಫ್ಘಾನಿಸ್ತಾನ ಮುಖಾಮುಖಿ

* ಟಾಸ್ ಗೆದ್ದ ಆಫ್ಘಾನಿಸ್ತಾನ ಬೌಲಿಂಗ್ ಆಯ್ಕೆ

* ಟಿ20 ಕ್ರಿಕೆಟ್‌ನಲ್ಲಿ ಆಫ್ಘಾನ್ ಎದುರು ಇದುವರೆಗೂ ಗೆಲುವು ಸಾಧಿಸಿಲ್ಲ ಆಫ್ಘಾನ್‌

ಶಾರ್ಜಾ(ಅ.25): ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup) ಯಲ್ಲಿಂದು ಆಫ್ಘಾನಿಸ್ತಾನ (Afghanistan Cricket Team) ಹಾಗೂ ಸ್ಕಾಟ್ಲೆಂಡ್ (Scotland Cricket Team) ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ನಬೀ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಗ್ರೂಪ್ 2 ನ ಆಫ್ಘಾನಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡಗಳ ನಡುವಿನ ಕಾದಾಟಕ್ಕೆ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನ (Sharjah Cricket Team) ಆತಿಥ್ಯವನ್ನು ವಹಿಸಿದೆ. ಆಫ್ಘಾನಿಸ್ತಾನ ತಂಡವು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೆಹಜಾದ್‌, ನಾಯಕ ಮೊಹಮ್ಮದ್ ನಬೀ, ರಶೀದ್ ಖಾನ್ (Rashid Khan) ಹಾಗೂ ಮುಜೀಬ್ ಉರ್ ರೆಹಮಾನ್ ಅವರನ್ನು ನೆಚ್ಚಿಕೊಂಡಿದೆ. ಇನ್ನೊಂದೆಡೆ ಆಲ್ರೌಂಡರ್‌ ಕ್ರಿಸ್‌ ಗ್ರೀವ್ಸ್‌, ನಾಯಕ ಕೈಲ್‌ ಕೋಟ್ಜಿ, ರಿಚಿ ಬೆರಿಂಗ್ಟನ್‌, ವೇಗಿ ಜೋಶ್‌ ಡೇವಿಯಂತಹ ಪ್ರತಿಭಾವಂತ ಆಟಗಾರರನ್ನು ಸ್ಕಾಟ್ಲೆಂಡ್‌ ಹೊಂದಿದ್ದು, ಆಫ್ಘಾನಿಸ್ತಾನಕ್ಕೆ ತಿರುಗೇಟು ನೀಡಿ ಸೂಪರ್ 12 ಹಂತದಲ್ಲಿ ಮೊದಲ ಗೆಲುವು ದಾಖಲಿಸಲು ಎದುರು ನೋಡುತ್ತಿದೆ

Toss news from Sharjah 📰

Afghanistan will bat.

Who's winning this one? | | https://t.co/WYvGXmbFNc pic.twitter.com/AiAGUr6yZu

— ICC (@ICC)

T20 World Cup Afg vs SCO ಆಫ್ಘನ್‌ಗೆ ಇಂದು ಸ್ಕಾಟ್ಲೆಂಡ್‌ ಸವಾಲು

ಟಿ20 ಕ್ರಿಕೆಟ್‌ನಲ್ಲಿ ಆಫ್ಘಾನಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡಗಳು ಒಟ್ಟು 6 ಬಾರಿ ಮುಖಾಮುಖಿಯಾಗಿದ್ದು, ಆಫ್ಘಾನ್ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಅಂದರೆ ಆರು ಪಂದ್ಯಗಳಲ್ಲೂ ಆಫ್ಘಾನಿಸ್ತಾನ ಕ್ರಿಕೆಟ್ ತಂಡವು ಗೆಲುವಿನ ನಗೆ ಬೀರಿದೆ. 

ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವು ಬಾಂಗ್ಲಾದೇಶ ವಿರುದ್ದ 6 ರನ್‌ಗಳ ರೋಚಕ ಜಯ ಸಾಧಿಸಿತ್ತು. ಇದಾದ ಬಳಿಕ ಪಪುಪಾ ನ್ಯೂಗಿನಿ ಎದುರು 17 ರನ್‌ಗಳ ಗೆಲುವು ಹಾಗೂ ಓಮನ್‌ ವಿರುದ್ದ 8 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿದೆ. ಕೈಲ್‌ ಕೋಟ್ಜಿ ಪಡೆ ಹ್ಯಾಟ್ರಿಕ್ ಗೆಲುವು ಸಾಧಿಸಿ ಅತ್ಮವಿಶ್ವಾಸದಿಂದ ಬೀಗುತ್ತಿದ್ದು, ಆಫ್ಘಾನಿಸ್ತಾನಕ್ಕೆ ಶಾಕ್ ನೀಡಲು ಎದುರು ನೋಡುತ್ತಿದೆ.

ತಂಡಗಳು ಹೀಗಿವೆ ನೋಡಿ

ಆಫ್ಘಾನಿಸ್ತಾನ ಕ್ರಿಕೆಟ್ ತಂಡ: ಹಜರತ್ತುಲ್ಲಾ ಝಝೈ, ಮೊಹಮ್ಮದ್ ಶೆಹಜಾದ್, ರೆಹಮತ್ತುಲ್ಲಾ ಗುರ್ಬಾಜ್, ನಜೀಬುಲ್ಲಾ ಜದ್ರಾನ್, ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬೀ(ನಾಯಕ), ಗುಲ್ಬದ್ದೀನ್ ನೈಬ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಹಮೀದ್ ಹಸನ್.

ಸ್ಕಾಟ್ಲೆಂಡ್ ಕ್ರಿಕೆಟ್ ತಂಡ: ಜಾರ್ಜ್ ಮುನ್ಸೆ, ಕೈಲ್‌ ಕೋಟ್ಜಿ(ನಾಯಕ), ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ರಿಚಿ ಬೆರ್ರಿಂಗ್ಟನ್, ಕಾಲಂ ಮೆಕ್‌ಲಾಡ್‌, ಮಿಚೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್‌, ಮಾರ್ಕ್ ವ್ಯಾಟ್, ಜೋಶ್‌ ಡೇವಿ, ಅಲಾಸ್ದೀರ್ ಇವಾನ್ಸ್‌, ಬ್ರಾಡ್ಲಿ ವೀಲ್‌

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ 

click me!