ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾಗುತ್ತಾ? 16,700 ಕೋಟಿ ಡೀಲ್ ನಂತರ ಮಹತ್ವದ ಅಪ್‌ಡೇಟ್ಸ್ ಕೊಟ್ಟ ಅನನ್ಯಾ ಬಿರ್ಲಾ!

Published : Mar 26, 2026, 03:03 PM IST
RCB IPL 2026

ಸಾರಾಂಶ

ಐಪಿಎಲ್ ಇತಿಹಾಸದ ಅತಿದೊಡ್ಡ ಡೀಲ್‌ನಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಕನ್ಸೋರ್ಟಿಯಂ ಆರ್‌ಸಿಬಿ ತಂಡವನ್ನು ಖರೀದಿಸಿದೆ. ಇದರಿಂದ ತಂಡದ ಹೆಸರು ಬದಲಾಗಬಹುದೆಂಬ ಊಹಾಪೋಹಗಳು ಹರಡಿದ್ದವು. ಆದರೆ, ಅನನ್ಯಾ ಬಿರ್ಲಾ ಅವರು ತಂಡದ ಹೆಸರು 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಎಂದೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಡೀಲ್ ನಡೆದ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಹೆಸರು ಬದಲಾಗುತ್ತಾ ಅನ್ನೋ ಚಿಂತೆ ಫ್ಯಾನ್ಸ್‌ಗೆ ಶುರುವಾಗಿತ್ತು. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಕನ್ಸೋರ್ಟಿಯಂ, ಬರೋಬ್ಬರಿ 16,706 ಕೋಟಿ ರೂಪಾಯಿ ($1.78 ಬಿಲಿಯನ್) ಕೊಟ್ಟು ಆರ್‌ಸಿಬಿ ತಂಡದ ಮಾಲೀಕತ್ವವನ್ನು ಪಡೆದುಕೊಂಡಿತ್ತು. ಇದೇ ಕಾರಣಕ್ಕೆ ಹೆಸರು ಬದಲಾಗುತ್ತೆ ಅನ್ನೋ ಚರ್ಚೆ ಜೋರಾಗಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನನ್ಯಾ ಬಿರ್ಲಾ ಅವರೇ ಈಗ ತೆರೆ ಎಳೆದಿದ್ದಾರೆ.

ಮಹತ್ವದ ಅಪ್‌ಡೇಟ್ಸ್ ಕೊಟ್ಟ ಅನನ್ಯಾ ಬಿರ್ಲಾ?

ಅನನ್ಯಾ ಬಿರ್ಲಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ತಂಡದ ಹೆಸರನ್ನು ಬದಲಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಗಾಸಿಪ್‌ಗಳಿಗೆ ಬ್ರೇಕ್ ಬಿದ್ದಿದೆ. 2025ರಲ್ಲಿ ತಮ್ಮ ಚೊಚ್ಚಲ ಐಪಿಎಲ್ ಕಪ್ ಗೆದ್ದ ತಂಡದ ಬ್ರ್ಯಾಂಡ್ ಮೌಲ್ಯವನ್ನು ಉಳಿಸಿಕೊಳ್ಳಲು ಹೊಸ ಮಾಲೀಕರು ನಿರ್ಧರಿಸಿದ್ದಾರೆ ಅನ್ನೋದು ಇದರಿಂದ ಸ್ಪಷ್ಟವಾಗಿದೆ.

ಈ ಡೀಲ್ ಮೂಲಕ ಆರ್‌ಸಿಬಿ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ. ಆದಿತ್ಯ ಬಿರ್ಲಾ ಗ್ರೂಪ್ ಜೊತೆಗೆ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲಾಕ್‌ಸ್ಟೋನ್ ಮತ್ತು ಬೋಲ್ಟ್ ವೆಂಚರ್ಸ್ ಕಂಪನಿಗಳು ಈ ಜಂಟಿ ಸಹಭಾಗಿತ್ವದಲ್ಲಿವೆ. ಈ ಗ್ರೂಪ್, ಪುರುಷರ ತಂಡದ ಜೊತೆಗೆ ಮಹಿಳಾ ತಂಡದ ಸಂಪೂರ್ಣ ಮಾಲೀಕತ್ವವನ್ನೂ ಹೊಂದಿರಲಿದೆ. 2008ರಲ್ಲಿ ಐಪಿಎಲ್ ಶುರುವಾದಾಗಿನಿಂದ ಇರುವ ಎಂಟು ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದು. ಕಳೆದ ವರ್ಷ ಮೊದಲ ಬಾರಿಗೆ ಐಪಿಎಲ್ ಕಿರೀಟ ಗೆದ್ದ ನಂತರ ತಂಡದ ಮಾರುಕಟ್ಟೆ ಮೌಲ್ಯ ಗಗನಕ್ಕೇರಿತ್ತು.

2008ರಲ್ಲಿ ಮಲ್ಯ ಖರೀದಿಸಿದ್ದ ತಂಡ

ಐಪಿಎಲ್‌ ಸ್ಥಾಪನೆಯಾದಾಗ ಆರ್‌ಸಿಬಿ ತಂಡವನ್ನು ಮದ್ಯದ ದೊರೆ ವಿಜಯ್‌ ಮಲ್ಯ 111.6 ಮಿಲಿಯನ್‌ ಡಾಲರ್‌ಗೆ ಖರೀದಿಸಿದ್ದರು. ಅಂದರೆ ಅಂದಿನ ಡಾಲರ್‌ ಮೌಲ್ಯದ ಪ್ರಕಾರ ಅಂದಾಜು ₹480 ಕೋಟಿ. 2016 ಮಲ್ಯ ತಂಡದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಬಳಿಕ, ಫ್ರಾಂಚೈಸಿಯನ್ನು ಡಿಯಾಜಿಯೋ ಸಂಸ್ಥೆ ನಿರ್ವಹಿಸುತ್ತಿತ್ತು.

2018ರಲ್ಲಿ ರಾಜಸ್ಥಾನ ತಂಡದಲ್ಲಿದ್ದ ಆರ್‌ಸಿಬಿಯ ಹೊಸ ಬಾಸ್‌ ಆರ್ಯಮನ್‌!

ಕೋಟ್ಯಧಿಪತಿ ಕುಮಾರ್‌ ಮಂಗಳಂ ಬಿರ್ಲಾ ಅವರ ಪುತ್ರ ಆರ್ಯಮನ್‌ ಒಬ್ಬ ಕ್ರಿಕೆಟಿಗ. 2018-19ರಲ್ಲಿ ಮಧ್ಯಪ್ರದೇಶ ಪರ ದೇಸಿ ಕ್ರಿಕೆಟ್‌ ಆಡಿದ್ದಾರೆ. 4 ಪ್ರಥಮ ದರ್ಜೆ, 9 ಲಿಸ್ಟ್‌ ‘ಎ’ ಪಂದ್ಯಗಳನ್ನಾಡಿದ್ದಾರೆ. 2018ರ ಐಪಿಎಲ್‌ನಲ್ಲಿ ಅವರು ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದನದಲ್ಲೂ ಐಪಿಎಲ್ ಟಿಕೆಟ್ ಹವಾ; ಕ್ರಿಕೆಟ್ ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!
ಚಾಂಪಿಯನ್‌ ಆರ್‌ಸಿಬಿ ತಂಡವನ್ನು ಸೇಲ್‌ ಮಾಡಿದ್ದೇಕೆ ಡಿಯಾಜಿಯೋ? ಇದಕ್ಕೆ ಕೊಹ್ಲಿ ಕಾರಣ?