RCB ಜೊತೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್..!

Published : Apr 11, 2022, 04:08 PM IST
RCB ಜೊತೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್..!

ಸಾರಾಂಶ

* ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್ * ಹೊಂಬಾಳೆ ಫಿಲ್ಮ್ಸ್​ ಮತ್ತು ಆರ್​ಸಿಬಿ ಸಹಭಾಗಿತ್ವದಲ್ಲಿ ಒಪ್ಪಂದ * ಕ್ರೀಡೆ ಮತ್ತು ಮನರಂಜನೆಯ ಸಮ್ಮಿಲನಕ್ಕೆ 3 ವರ್ಷಗಳ ಕಾಲ ಸಹಿ

ಬೆಂಗಳೂರು(ಏ.11): ಹೊಂಬಾಳೆ ಫಿಲ್ಮ್ಸ್​​, ಸ್ಯಾಂಡಲ್​ವುಡ್​ ದೊಡ್ಡ ನಿರ್ಮಾಣ ಸಂಸ್ಥೆ. ಕೆಜಿಎಫ್​​​ ಅನ್ನೋ ಪ್ಯಾನ್​ ಇಂಡಿಯಾ ಸಿನಿಮಾ ಹುಟ್ಟಿದ್ದು ಇದೇ ಸಂಸ್ಥೆಯಿಂದ. ರಾಕಿಂಗ್​ ಸ್ಟಾರ್ ಯಶ್ ನಟನೆಯ ಕೆಜಿಎಫ್-1 ಸೂಪರ್​ ಡೂಪರ್​​ ಹಿಟ್ ಆದ ಬಳಿಕ ಕೆಜಿಎಫ್ ಚಾಪ್ಟರ್​-2 (KGF-2) ರಿಲೀಸ್​ಗೆ ಸಜ್ಜಾಗಿದೆ. ಏಪ್ರಿಲ್ 14ರಂದು ಮೋಸ್ಟ್​​ ಎಕ್ಸೈಟೆಡ್​​​​ ಮೂವಿ ತೆರೆಗೆ ಅಪ್ಪಳಿಸಲಿದೆ. ದೇಶಾದ್ಯಂತ ಈ ಸಿನಿಮಾ ಹವಾ ಎಬ್ಬಿಸಿರುವಾಗಲೇ ಹೊಂಬಾಳೆ ಫಿಲ್ಮ್ಸ್​​ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ.

ಇನ್ನುಂದೆ ಕ್ರಿಕೆಟ್​ ಪ್ರಿಯರಿಗೆ ಥ್ರಿಲ್ಲಿಂಗೋ ಥ್ರಿಲ್ಲಿಂಗ್​​:

ಏಪ್ರಿಲ್​ 10ರ ಬೆಳಿಗ್ಗೆ 11.15ಕ್ಕೆ ಸರಿಯಾಗಿ ಬಿಗ್​​ ಅನೌನ್ಸ್​​​​ ಮೆಂಟ್​ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿತ್ತು. ಸಿನಿ ಪ್ರಿಯರು ಕೆಜಿಎಫ್​ ಚಾಪ್ಟರ್​​ -2 ಗೆ ಸಂಬಂಧಿಸಿದ್ದಂತೆ ಏನಾದರೂ ಮಾಹಿತಿ ಹೊರ ಬೀಳಬಹುದು ನಿರೀಕ್ಷಿಸಿದ್ರು. ಇನ್ನೊಂದೆಡೆ ಆರ್​ಸಿಬಿ ಕೂಡ ಇದೇ ಮಾದರಿ ಪೋಸ್ಟ್​ ಅನ್ನ ಟ್ವೀಟರ್​​​​ನಲ್ಲಿ  ಹಂಚಿಕೊಂಡಿತ್ತು. ಹೊಂಬಾಳೆ ಫಿಲ್ಮ್ಸ್ ಮತ್ತು ಆರ್​ಸಿಬಿ (RCB), ಸೇಮ್ ಟೈಮ್​​ಗೆ ಬಿಗ್​ ಅನೌನ್ಸ್​​ಮೆಂಟ್​ ಮಾಡುವುದಾಗಿ ಹೇಳ್ತಿದ್ದಂತೆ  ಕ್ರಿಕೆಟ್ ಪ್ರಿಯರು ಮತ್ತು ಸಿನಿ ಪ್ರಿಯರ  ಹೃದಯ ಬಡಿತ ಹೆಚ್ಚಿಸಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಐಪಿಎಲ್​​ನ ಜನಪ್ರಿಯ ತಂಡಗಳಲ್ಲಿ ಒಂದಾದ ಆರ್​ಸಿಬಿ ಜೊತೆ ಹೊಂಬಾಳೆ ಫಿಲ್ಮ್ಸ್ ಕೈ ಜೋಡಿಸಿದೆ.

ಹೊಂಬಾಳೆ ಫಿಲ್ಮ್ಸ್ (Hombale Films)​ ಮತ್ತು ಆರ್​ಸಿಬಿ ಸಹಭಾಗಿತ್ವದಲ್ಲಿ ಕ್ರೀಡೆ ಮತ್ತು ಮನರಂಜನೆಯ ಸಮ್ಮಿಲನಕ್ಕೆ 3 ವರ್ಷಗಳ ಕಾಲ ಸಹಿ ಮಾಡಿವೆ. ಈ ಸಹಯೋಗವು ಭರಪೂರ ಮನರಂಜನೆ, ಗ್ಲಾಮರ್​​, ಸಿನಿಮಾ ಮತ್ತು ಕ್ರೀಡೆಗಳ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಇದರಿಂದ ಫ್ಯಾನ್ಸ್​ಗೆ ಭರಪೂರ ಮನರಂಜನೆ ದೊರೆಯಲಿದೆ. ವಿಡಿಯೋದಲ್ಲಿ ಕೆಜಿಎಫ್​​​​-2 ಕ್ಯಾರಕ್ಟ್​ಗಳಂತೆ ಆರ್​ಸಿಬಿ ಆಟಗಾರರನ್ನ ತೋರಿಸಲಾಗಿದೆ.  ಅಧೀರನಂತೆ  ಫಾಫ್​ ಡುಪ್ಲೆಸಿಸ್​​​, ರವಿನಾ ಟೆಂಡನ್ ರೀತಿಯಲ್ಲಿ ಮ್ಯಾಕ್ಸ್​ವೆಲ್​​ ನಡಿಗೆ, ಯಶ್​ರಂತೆ ಕಿಂಗ್ ಕೊಹ್ಲಿ ಖಡಕ್​ ಲುಕ್​​ನಲ್ಲಿ  ಮಿಂಚಿದ್ದಾರೆ. ಇನ್ನು ಕೊನೆಯಲ್ಲಿ ಕ್ರಿಕೆಟರ್ಸ್​ ಬಾಯಿಂದ ಬರೋ ‘‘ಬಾರ್ನ್​ ಇನ್ ಬೆಂಗಳೂರು, ಟು ಥ್ರಿಲ್​ ದ ನೇಶನ್​’’ ಅನ್ನೋ ಮಾತು ಅಂತು  ಕೇಳುಗರಿಗೆ ಸಖತ್ ಮಜವಾಗಿದೆ.

ಆರ್​ಸಿಬಿ ಜೊತೆ ಹೊಂಬಾಳೆ ಫಿಲ್ಮ್ಸ್​​ ಕೈ ಜೋಡಿಸಿದ್ದೇಕೆ..?:

ಅಂದಹಾಗೇ ವೀಕ್ಷಕರೇ, ಬ್ಲಾಕ್​ ಬಸ್ಟರ್​ ಕೆಜಿಎಫ್​ ಮೂವಿಯನ್ನ ಸಿನಿ ಜಗತ್ತಿಗೆ ನೀಡಿರೋ ಹೊಂಬಾಳೆ ಫಿಲ್ಸ್ಸ್​  ಐಪಿಎಲ್​​​ನ ಆರ್​ಸಿಬಿ ಜೊತೆ ಕೈ ಜೋಡಿಸಿದ್ದರ ಹಿಂದೆ ಒಂದು ಬಲವಾದ ಕಾರಣವಿದೆ. ಅದೇನಂದ್ರೆ ಪ್ರೊಷೊಷನ್​​. ಹೌದು, ಈಗಾಗ್ಲೇ ಆರ್​ಸಿಬಿ ಒಂದು ಬ್ರ್ಯಾಂಡ್​ ಸೃಷ್ಟಿಸಿದೆ. ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿದೆ. ಇದರ ಲಾಭ ಪಡೆದು ಹೊಂಬಾಳೆ ಫಿಲ್ಸ್ಮ್ ತನ್ನ ಬ್ಯಾನರ್​​ ಅಡಿ ನಿರ್ಮಾಣ ಆಗುವ ಮೂವಿಗಳನ್ನ ಪ್ರೊಮೊಷನ್ ಮಾಡಲಿದೆ. ಚಿತ್ರದ ಟ್ರೇಲರ್​​​ಟೀಸರ್​ ಪ್ರಚಾರಕ್ಕೆ ಆರ್​ಸಿಬಿ ಸಹಕರಿಸಲಿದೆ. ಹೇಳಿ ಕೇಳಿ ಆರ್​ಸಿಬಿ ಕೂಡ ಬೆಂಗಳೂರಿನ ಪ್ರೊಡಕ್ಟ್​​​. ಇಲ್ಲೇ ಹುಟ್ಟಿದೆ. ಕೋಟ್ಯಾಂತರ ಕನ್ನಡಿಗರ ಪ್ರೀತಿ ಸಂಪಾದಿಸಿದೆ. ಇನ್ನು ಹೊಂಬಾಳೆ ಫಿಲ್ಮ್ಸ್​ ಕೂಡ ಬೆಂಗಳೂರಿನದ್ದು.  ಕೆಜಿಎಫ್​ ಸಿನಿಮಾ ನಿರ್ಮಿಸಿ ದೇಶಾದ್ಯಂತ ಇನ್ನಿಲ್ಲದ ಹವಾ ಸೃಷ್ಟಿಸಿದೆ. ಈಗ ಎರಡು ದಿಗ್ಗಜ ಸಂಸ್ಥೆಗಳು ಕೊಲಾಬ್ರೇಟ್ ಆಗಿರೋದ್ರಿಂದ ಇದು ಮನರಂಜನೆಯ ಹೊಸ ಯುಗಕ್ಕೆ ನಾಂದಿ ಆಗೋದು ಪಕ್ಕಾ.

ಶೀಘ್ರದಲ್ಲೇ KGF ಗ್ಯಾಂಗ್​​​ V/S RCB ಗ್ಯಾಂಗ್ ಮುಖಾಮುಖಿ..?:

ಸದ್ಯದ ಮಾಹಿತಿ ಪ್ರಕಾರ ಶೀಘ್ರದಲ್ಲೇ KGF ಗ್ಯಾಂಗ್​​​ ಮತ್ತು RCB ಗ್ಯಾಂಗ್ ಮುಖಾಮುಖಿಯಾಗಲಿವೆ  ಎನ್ನಲಾಗ್ತಿದೆ. ಏಪ್ರಿಲ್​ 12ರಂದು ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯವಿದೆ. ಈ ಪಂದ್ಯಕ್ಕೂ ಮುನ್ನ  ನಟ ಯಶ್ ಸೇರಿದಂತೆ ಕೆಜಿಎಫ್​​ ತಂಡ ಆರ್​ಸಿಬಿ ಪ್ಲೇಯರ್ಸ್​ ಜೊತೆ ಇಂಟರ್​​​ವ್ಯೂವ್​​ ನಡೆಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದು ನಿಜವಾದ್ರೆ ಅಭಿಮಾನಿಗಳಿಗೆ ಮನರಂಜನೆಯ ಫುಲ್​ ಮೀಲ್ಸ್​ ಗ್ಯಾರಂಟಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Vaibhav Sooryavanshi: ಆನ್‌ಫೀಲ್ಡ್‌ನಲ್ಲಿಯೇ ವೈಭವ್ ಸೂರ್ಯವಂಶಿ ಮೇಲೆ ಕೈ ಮಾಡಿದ ತಿಲಕ್ ವರ್ಮಾ, ವಿಡಿಯೋ ನೋಡಿ!
Duleep Trophy Final: ಸ್ಪೋಟಕ ಆರಂಭ ಕೊಟ್ಟ ವೈಭವ್ ಸೂರ್ಯವಂಶಿಗೆ ಭಾರೀ ನಿರಾಸೆ, ಈಶ್ವರನ್ ಅರ್ಧ ಶತಕ