ಮುಂಬೈ ಇಂಡಿಯನ್ಸ್ ಕೋಚ್‌ ಮಾರ್ಕ್ ಬೌಷರ್‌ ವಿರುದ್ಧ ರೋಹಿತ್ ಶರ್ಮಾ ಪತ್ನಿ ಕೆಂಡ..!

By Naveen Kodase  |  First Published Feb 7, 2024, 9:29 AM IST

‘ರೋಹಿತ್‌ರನ್ನು ಕೆಳಗಿಳಿಸಿದ್ದು ಕೇವಲ ಕ್ರಿಕೆಟ್‌ ನಿರ್ಧಾರ. ಈ ಬಾರಿ ರೋಹಿತ್‌ ಶರ್ಮಾಗೆ ನಾಯಕತ್ವದ ಒತ್ತಡವಿಲ್ಲದೆ ಆಡಬಹುದು. ಅಲ್ಲದೆ ಹಾರ್ದಿಕ್‌ ಪಾಂಡ್ಯ ಮೊದಲ ಯತ್ನದಲ್ಲೇ ಗುಜರಾತನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಹೀಗಾಗಿ ಹಾರ್ದಿಕ್ ಪಾಂಡ್ಯರನ್ನು ಕರೆತರಲು ನಾವು ಕೂಡ ಎದುರು ನೋಡುತ್ತಿದ್ದೆವು. ಹೀಗೆ ಸಿಕ್ಕ ಅವಕಾಶ ಬಳಸಿಕೊಂಡಿದ್ದೇವೆ’ ಎಂದು ಸಂದರ್ಶನವೊಂದರಲ್ಲಿ ಸೋಮವಾರ ತಿಳಿಸಿದ್ದರು. 

ಮುಂಬೈ(ಫೆ.07): ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬದಲಾವಣೆ ಬಗ್ಗೆ ತಂಡದ ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ರ ಸ್ಪಷ್ಟೀಕರಣ ಹಾಗೂ ಅದಕ್ಕೆ ರೋಹಿತ್‌ ಶರ್ಮಾ ಪತ್ನಿ ರಿತಿಕಾ ನೀಡಿದ ಪ್ರತಿಕ್ರಿಯೆ ಸದ್ಯ ಗೊಂದಲ ಹೆಚ್ಚಿಸಿದೆ.

‘ರೋಹಿತ್‌ರನ್ನು ಕೆಳಗಿಳಿಸಿದ್ದು ಕೇವಲ ಕ್ರಿಕೆಟ್‌ ನಿರ್ಧಾರ. ಈ ಬಾರಿ ರೋಹಿತ್‌ ಶರ್ಮಾಗೆ ನಾಯಕತ್ವದ ಒತ್ತಡವಿಲ್ಲದೆ ಆಡಬಹುದು. ಅಲ್ಲದೆ ಹಾರ್ದಿಕ್‌ ಪಾಂಡ್ಯ ಮೊದಲ ಯತ್ನದಲ್ಲೇ ಗುಜರಾತನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಹೀಗಾಗಿ ಹಾರ್ದಿಕ್ ಪಾಂಡ್ಯರನ್ನು ಕರೆತರಲು ನಾವು ಕೂಡ ಎದುರು ನೋಡುತ್ತಿದ್ದೆವು. ಹೀಗೆ ಸಿಕ್ಕ ಅವಕಾಶ ಬಳಸಿಕೊಂಡಿದ್ದೇವೆ’ ಎಂದು ಸಂದರ್ಶನವೊಂದರಲ್ಲಿ ಸೋಮವಾರ ತಿಳಿಸಿದ್ದರು. 

Latest Videos

undefined

Breaking: 19 ವಯೋಮಿತಿ ವಿಶ್ವಕಪ್‌ ಫೈನಲ್‌ಗೇರಿದ ಭಾರತ ತಂಡ!

ಇದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ರಿತಿಕಾ, ‘ಇದರಲ್ಲಿ(ಬೌಷರ್‌ ಹೇಳಿಕೆ) ಹಲವು ತಪ್ಪು ಮಾಹಿತಿಗಳಿವೆ’ ಎಂದಿದ್ದಾರೆ. ರಿತಿಕಾ ಹೇಳಿಕೆ ಕ್ರಿಕೆಟ್‌ ಅಭಿಮಾನಿಗಳ ನಡುವೆ ಕುತೂಹಲ, ಊಹಾಪೋಹಗಳಿಗೆ ಕಾರಣವಾಗಿದೆ.

ಪಾಂಡ್ಯಗಾಗಿ ಗುಜರಾತ್‌ಗೆ ಮುಂಬೈ ಇಂಡಿಯನ್ಸ್‌ ನೀಡಿದ್ದು ₹100 ಕೋಟಿ?

ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಐಪಿಎಲ್‌ನ ಗುಜರಾತ್‌ ಜೈಂಟ್ಸ್‌ ತೊರೆದು ಮುಂಬೈ ಇಂಡಿಯನ್ಸ್‌ಗೆ ಮರಳಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಆದರೆ ಅವರ ವರ್ಗಾವಣೆಗಾಗಿ ಮುಂಬೈ ತಂಡ ಗುಜರಾತ್‌ಗೆ ಬರೋಬ್ಬರಿ 100 ಕೋಟಿ ರುಪಾಯಿ ನೀಡಿತ್ತು ಎಂಬ ಅಚ್ಚರಿಯ ಸಂಗತಿ ಮಾಧ್ಯಮಗಳಲ್ಲಿ ವರದಿಯಾಗಿದೆ.

9ನೇ ಹುಟ್ಟುಹಬ್ಬ ಆಚರಿಸಿಕೊಂಡ ಝಿವಾ..! ಇಲ್ಲಿವೆ ನೋಡಿ ಧೋನಿ ಮಗಳ ಲೇಟೆಸ್ಟ್ ಫೋಟೋ

ಹೌದು, ಐಪಿಎಲ್ ಟ್ರೇಡಿಂಗ್ ನಿಯಮ ಪ್ರಕಾರ ಒಬ್ಬ ಆಟಗಾರನನ್ನು ಮತ್ತೊಂದು ತಂಡದಿಂದ ಖರೀದಿಸಬೇಕಾದರೆ ಎರಡೂ ಫ್ರಾಂಚೈಸಿಗಳು ಒಮ್ಮತಕ್ಕೆ ಬರಬೇಕು. ಮಾರಾಟ ಮಾಡುವ ಫ್ರಾಂಚೈಸಿಯು ಹೇಳುವ ಮೊತ್ತವನ್ನು ಖರೀದಿಸುವ ಫ್ರಾಂಚೈಸಿ ನೀಡಬೇಕಾಗುತ್ತದೆ. ಹಾರ್ದಿಕ್‌ರನ್ನು ನೀಡಬೇಕಿದ್ದರೆ ಮುಂಬೈನಿಂದ ಗುಜರಾತ್‌ ₹100 ಕೋಟಿ ಬೇಡಿಕೆ ಇಟ್ಟಿತ್ತು ಎಂದು ಹೇಳಲಾಗುತ್ತಿದೆ.
 
click me!