ರೋಹಿತ್ ಶರ್ಮಾ ಟೆಂಪಲ್ ರನ್‌; ಏಷ್ಯಾಕಪ್‌ಗೂ ಮುನ್ನ ಬಾಲಾಜಿ ದರ್ಶನ ಪಡೆದ ಟೀಂ ಇಂಡಿಯಾ ನಾಯಕ..!

By Naveen Kodase  |  First Published Aug 14, 2023, 3:50 PM IST

ಏಷ್ಯಾಕಪ್‌ಗೂ ಮುನ್ನ ತಿರುಪತಿಗೆ ಭೇಟಿ ನೀಡಿದ ರೋಹಿತ್ ಶರ್ಮಾ ದಂಪತಿ
ವಿಂಡೀಸ್ ಎದುರಿನ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಹಿಟ್‌ಮ್ಯಾನ್
ತಿರುಪತಿ ಬಾಲಾಜಿ ದರ್ಶನ ಪಡೆದ ಟೀಂ ಇಂಡಿಯಾ ನಾಯಕ


ತಿರುಪತಿ(ಆ.14): ಬಹುನಿರೀಕ್ಷಿತ ಏಷ್ಯಾಕಪ್‌ ಟೂರ್ನಿಗೂ ಮುನ್ನ ಬಿಡುವಿನಲ್ಲಿರುವ ಭಾರತದ ನಾಯಕ ರೋಹಿತ್‌ ಶರ್ಮಾ ಅವರು ಪತ್ನಿ, ಮಗಳ ಜೊತೆ ಭಾನುವಾರ ತಿರುಪತಿಯ ಬಾಲಾಜಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದರ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 30ರಿಂದ ಆರಂಭವಾಗಲಿದೆ.

ಹೌದು, ಏಷ್ಯಾಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಿರುಪತಿಗೆ ಭೇಟಿ ನೀಡಿದಾಗ, ಅವರಿಗೆ ಪತ್ನಿ ರಿತಿಕಾ ಸಜ್‌ದೇ ಹಾಗೂ ಹಾಗೂ ಪುತ್ರಿ ಸಮೈರಾ ಸಾಥ್ ನೀಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ, ಪತ್ನಿ ಹಾಗೂ ಪುತ್ರಿ ಜತೆ ಕಾರಿಂದ ಇಳಿದು ಬರುತ್ತಿರುವುದು ಕಂಡು ಬಂದಿದೆ. ನಾಯಕ ರೋಹಿತ್ ಶರ್ಮಾ ನೋಡಲು ಅಭಿಮಾನಿಗಳು ಅವರತ್ತ ಮುಗಿಬಿದ್ದ ಸನ್ನಿವೇಶವೂ ಕಂಡುಬಂದಿದೆ.

Latest Videos

undefined

ಹೀಗಿತ್ತು ನೋಡಿ ಆ ಕ್ಷಣ:

Captain Rohit Sharma visited Tirupathi Balaji Temple with his Family ahead of Asia Cup.

pic.twitter.com/aSqiNbiVQA

— Tanay Vasu (@tanayvasu)

ಟೀಂ ಇಂಡಿಯಾದ ಇಬ್ಬರು ಸೂಪರ್‌ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್ ಎದರಿನ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ತುಂಬಾ ಇಂಟ್ರೆಸ್ಟಿಂಗ್ ಸಂಗತಿಯಿಂದರೇ, ಈ ವರ್ಷ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರತ ಪರ ಒಂದೇ ಒಂದು ಟಿ20 ಪಂದ್ಯವನ್ನಾಡಿಲ್ಲ. ಚುಟುಕು ಕ್ರಿಕೆಟ್ ತಂಡವನ್ನು ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡ ಮುನ್ನಡೆಸುತ್ತಾ ಬಂದಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಗೆ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಅನುಭವಿ ವೇಗಿ ಮೊಹಮ್ಮದ್ ಶಮಿಗೂ ವಿಶ್ರಾಂತಿ ನೀಡಲಾಗಿದೆ. 

ವಿಂಡೀಸ್ ಎದುರು ಟಿ20 ಸರಣಿ ಕೈಚೆಲ್ಲಿದ ಟೀಂ ಇಂಡಿಯಾ:

ವೆಸ್ಟ್‌ಇಂಡೀಸ್‌ನ ಸ್ಫೋಟಕ ಹಾಗೂ ಅನುಭವಿ ಬ್ಯಾಟರ್‌ಗಳ ನಡುವೆ ಐಪಿಎಲ್‌ ಸ್ಟಾರ್‌ಗಳ ಆಟ ನಡೆಯಲಿಲ್ಲ. ಸೂರ್ಯಕುಮಾರ್‌ ಹೊರತುಪಡಿಸಿ ಇತರ ಬ್ಯಾಟರ್‌ಗಳ ವೈಫಲ್ಯ ಹಾಗೂ ಮೊನಚು ಕಳೆದುಕೊಂಡ ಬೌಲಿಂಗ್‌ ದಾಳಿಯಿಂದಾಗಿ ವಿಂಡೀಸ್‌ ವಿರುದ್ಧದ ಕೊನೆ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್‌ ಸೋಲನಭವಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ 3-2ರಲ್ಲಿ ಜಯಭೇರಿ ಬಾರಿಸಿ, 2016ರ ಬಳಿಕ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಸಾಧನೆ ಮಾಡಿತು.

ODI World Cup 2023: ಭಾರತಕ್ಕೆ ಬರುವ ಪಾಕಿಸ್ತಾನಕ್ಕೆ ವಿಶೇಷ ಸವಲತ್ತೇನೂ ಇಲ್ಲ..! ಪಾಕ್‌ಗೆ ಮುಖಭಂಗ?

ಇದೇ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 4ನೇ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತ್ತು. ಆದರೆ ಭಾನುವಾರ ಮೊದಲು ಬ್ಯಾಟ್‌ ಆಯ್ಕೆ ಮಾಡಿ ಕೈಸುಟ್ಟುಕೊಂಡ ಭಾರತ 9 ವಿಕೆಟ್‌ಗೆ 165 ರನ್‌ ಗಳಿಸಿತು. ಚೇಸಿಂಗ್‌ಗೂ ಮಳೆ ಅಡ್ಡಿಪಡಿಸುವ ಖಾತರಿ ಇದ್ದ ಕಾರಣ ಆರಂಭದಲ್ಲೇ ಅಬ್ಬರಿಸತೊಡಗಿದ ವಿಂಡೀಸ್‌ 18 ಓವರ್‌ಗಳಲ್ಲಿ ಪಂದ್ಯ ತನ್ನದಾಗಿಸಿಕೊಂಡಿತು. ಭಾರತೀಯ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸಿದ ಬ್ರ್ಯಾಂಡನ್‌ ಕಿಂಗ್‌ ಹಾಗೂ ಪೂರನ್‌ 2ನೇ ವಿಕೆಟ್‌ಗೆ 107 ರನ್‌ ಜೊತೆಯಾಟವಾಡಿದರು. ಕಿಂಗ್‌ 55 ಎಸೆತಗಳಲ್ಲಿ 85 ರನ್‌ ಚಚ್ಚಿ ಔಟಾಗದೆ ಉಳಿದರೆ, ನಿಕೋಲಸ್‌ ಪೂರನ್‌ 35 ಎಸೆತಗಳಲ್ಲಿ ಔಟಾಗದೆ 47 ರನ್‌ ಗಳಿಸಿದರು. ತಿಲಕ್‌ ವರ್ಮಾ, ಅಶ್‌ರ್‍ದೀಪ್‌ ಸಿಂಗ್‌ ತಲಾ 1 ವಿಕೆಟ್‌ ಪಡೆದರು.

ಸತತ 11 ಟಿ20 ಸರಣಿ ಜಯದ ಓಟಕ್ಕೆ ಬ್ರೇಕ್‌

ಸತತ 12ನೇ ದ್ವಿಪ​ಕ್ಷೀಯ ಟಿ20 ಸರಣಿ ಗೆಲ್ಲುವ ಭಾರತದ ಕನಸಿಗೆ ವಿಂಡೀಸ್‌ ಬ್ರೇಕ್‌ ಹಾಕಿದೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ಸರಣಿ ಸೋತ ಬಳಿಕ ಈವರೆಗೆ 12 ಸರಣಿಗಳಲ್ಲಿ ಅಜೇಯವಾಗಿತ್ತು. 11 ಸರಣಿಗಳಲ್ಲಿ ಗೆದ್ದಿದ್ದರೆ, ಕಳೆದ ವರ್ಷ ದ.ಆಫ್ರಿಕಾ ವಿರುದ್ಧದ ಸರಣಿ 2-2ರಿಂದ ಸಮಬಲಗೊಂಡಿತ್ತು. ಇದರೊಂದಿಗೆ ಸತತವಾಗಿ ಅತಿಹೆಚ್ಚು ದ್ವಿಪಕ್ಷೀಯ ಟಿ20 ಸರಣಿ ಗೆದ್ದ ಸಾಧನೆ ಮಾಡಿತ್ತು.

click me!