ರಿಯಲ್‌ ಮ್ಯಾಡ್ರಿಡ್‌ಗೆ ರೋಹಿತ್‌ ಶರ್ಮಾ ರಾಯಭಾರಿ!

By Web Desk  |  First Published Dec 13, 2019, 11:12 AM IST

ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಪ್ರತಿಷ್ಠಿತ ಲಾ ಲೀಗಾ ಫುಟ್ಬಾಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 


ಮುಂಬೈ(ಡಿ.13): ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, ಸ್ಪಾನಿಶ್ ಫುಟ್ಬಾಲ್‌ ಕ್ಲಬ್‌ ರಿಯಲ್‌ ಮ್ಯಾಡ್ರಿಡ್‌ನ ರಾಯಭಾರಿಯಾಗಿ ಗುರುವಾರ ನೇಮಕಗೊಂಡರು. ಭಾರತದಲ್ಲಿ ಲಾ ಲೀಗಾದ (ಸ್ಪಾನೀಶ್ ಲೀಗ್‌) ರಾಯಭಾರಿಯಾದ ಮೊದಲಿಗ ಎನ್ನುವ ಹಿರಿಮೆಗೆ ಪಾತ್ರರಾಗಿರುವ ರೋಹಿತ್‌, ಲೀಗ್‌ ಇತಿಹಾಸದಲ್ಲೇ ರಾಯಭಾರಿಯಾದ ಮೊದಲ ಫುಟ್ಬಾಲೇತರ ವ್ಯಕ್ತಿ ಎನ್ನುವ ದಾಖಲೆಯನ್ನೂ ಬರೆದಿದ್ದಾರೆ.

Tap to resize

Latest Videos

ಇದನ್ನೂ ಓದಿ: ರೋಹಿತ್ ಶರ್ಮಾ ಅಬ್ಬರಕ್ಕೆ ಹಲವು ದಾಖಲೆ ಪುಡಿ ಪುಡಿ!

ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಲೀಗ್ ಟೂರ್ನಿಗೆ ಬಾಲಿವುಡ್ ನಟ ರಣವೀರ್ ಸಿಂಗ್ ರಾಯಭಾರಿಯಾಗಿದ್ದಾರೆ. ಇದೀಗ ಸ್ಪಾನಿಶ್ ಲೀಗ್ ಫುಟ್ಬಾಲ್‌ಗೆ ರೋಹಿತ್ ಆಯ್ಕೆಯಾಗೋ ಮೂಲಕ ಭಾರತೀಯ ಸೆಲೆಬ್ರೆಟಿಗಳು ವಿದೇಶಿ ಲೀಗ್‌ನ ಪ್ರಚಾರಕರಾಗಿ ಗಮನಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ರೋಹಿತ್ ವಿರುದ್ಧ ಸೇಡು ತೀರಿಸಿಕೊಂಡ ಪೊಲ್ಲಾರ್ಡ್..!

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಬ್ಯುಸಿಯಾಗಿರುವ ರೋಹಿತ್ ಶರ್ಮಾ, ಲಾ ಲೀಗಾ ಫುಟ್ಬಾಲ್ ಟೂರ್ನಿಯ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ರೋಹಿತ್ ಇದೀಗ ಏಕದಿನ ಸರಣಿಗೆ ಸಜ್ಜಾಗಿದ್ದಾರೆ. 

click me!