ವಿಂಡೀಸ್ ವಿರುದ್ಧದ ಏಕದಿನ: ಚೆನ್ನೈಗೆ ಬಂದಿಳಿದ ಭಾರತ!

By Web Desk  |  First Published Dec 13, 2019, 10:39 AM IST

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಗೆದ್ದ ಭಾರತ, ಇದೀಗ ಏಕದಿನ ಸರಣಿಗಾಗಿ ಚೆನ್ನೈಗೆ ಆಗಮಿಸಿದೆ. ಕೊಹ್ಲಿ ಸೈನ್ಯ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದೆ. 


ಚೆನ್ನೈ(ಡಿ.13): ವೆಸ್ಟ್‌ಇಂಡೀಸ್‌ ವಿರುದ್ಧ ಟಿ20 ಸರಣಿಯನ್ನು 2-1ರ ಅಂತರದಲ್ಲಿ ಗೆದ್ದ ಭಾರತ ತಂಡ, ಏಕದಿನ ಸರಣಿ ಮೇಲೆ ಕಣ್ಣಿಟ್ಟಿದೆ. ಡಿ.15ರಂದು ನಡೆಯಲಿರುವ ಮೊದಲ ಪಂದ್ಯವನ್ನಾಡಲು ಗುರುವಾರ ಟೀಂ ಇಂಡಿಯಾ ಚೆನ್ನೈಗೆ ಬಂದಿಳಿದೆ. ಭಾನುವಾರ ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. 

ಇದನ್ನೂ ಓದಿ: ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ವಿರಾಟ್‌ ಕೊಹ್ಲಿಗೆ ಬಡ್ತಿ!.

Tap to resize

Latest Videos

ವಿಂಡೀಸ್‌ ತಂಡ ಸಹ ಚೆನ್ನೈ ತಲುಪಿದ್ದು, ಶುಕ್ರವಾರದಿಂದ ಅಭ್ಯಾಸ ಆರಂಭಿಸಲಿದೆ. ಜ.18ರಂದು ವಿಶಾಖಪಟ್ಟಣಂನಲ್ಲಿ 2ನೇ ಏಕದಿನ ಪಂದ್ಯ ನಡೆಯಲಿದ್ದು, ಡಿ.22ರಂದು ಕಟಕ್‌ನಲ್ಲಿ 3ನೇ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಬ್ಯಾಟಿಂಗ್ ಗಮನ ಹರಿಸಲು ಹೇಳಿದ್ರೆ, ಊರ್ವಶಿ ಜೊತೆ ಡೇಟಿಂಗ್ ಮಾಡಿದ್ರಾ ಪಂತ್?

ವಿಂಡೀಸ್ ವಿರುದ್ದದ 3 ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸರಣಿ ಗೆದ್ದಿತ್ತು. ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ಗೆಲುವು ಸಾಧಿಸಿ ತಿರುಗೇಟು ನೀಡಿತು. ಅಂತಿಮ ಪಂದ್ಯದಲ್ಲಿ ಭಾರತ 67 ರನ್ ಗೆಲುವು ಸಾಧಿಸೋ ಮೂಲಕ 2-1 ಅಂತರದಲ್ಲಿ ಗೆಲುವು ಸಾಧಿಸಿತು.
 

click me!