ಪೌರತ್ವ ಮಸೂದೆ ಪ್ರತಿಭಟನೆ; ರಣಜಿ, ಐಎಸ್ಎಲ್ ಪಂದ್ಯ ರದ್ದು!

By Kannadaprabha News  |  First Published Dec 13, 2019, 11:03 AM IST

ಕೇಂದ್ರದ ಪೌರತ್ವ ಮಸೂದೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ನಾರ್ಥ್ ಈಸ್ಟ್ ರಾಜ್ಯಗಳಲ್ಲಿ ಪೌರತ್ವ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಅಸ್ಸಾಂನಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದ್ದು ರಣಜಿ ಹಾಗೂ ಫುಟ್ಬಾಲ್ ಪಂದ್ಯ ರದ್ದಾಗಿದೆ.


ಗುವಾಹಟಿ(ಡಿ.13):  ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ವಲಸೆ ಬಂದಿರುವ ಹಿಂದೂ ಹಾಗೂ ಮುಸ್ಲಿಂಮೇತರಿಗೆ ಭಾರತದ ಶಾಶ್ವತ ಪೌರತ್ವ ನೀಡುವ ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಮಸೂದೆ ಬಿಸ್ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಪಾಸ್ ಆಗಿದೆ. ಇದು ಭಾರಿ ವಿರೋಧಕ್ಕೆ ಕಾರಣವಾಗಿದೆ. ಪೌರತ್ವ ಮಸೂದೆ ತಿದ್ದುಪಡಿ ವಿರೋಧಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ರಣಜಿ ಹಾಗೂ ಐಎಸ್ಎಲ್ ಪಂದ್ಯಗಳು ರದ್ದಾಗಿದೆ. 

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಸೃಷ್ಟಿಸಿರುವುದು ಏಕೆ?

Latest Videos

undefined

ಪ್ರತಿಭಟನೆ ಹೆಚ್ಚಾದ ಕಾರಣ ಅಸ್ಸಾಂ ಹಾಗೂ ಸವೀರ್ಸಸ್ ನಡುವಿನ ರಣಜಿ ಪಂದ್ಯದ 4ನೇ ಹಾಗೂ ಅಂತಿಮ ದಿನದಾಟ ಆರಂಭಗೊಳ್ಳಲಿಲ್ಲ. ಸವೀರ್ಸಸ್ ಗೆಲುವಿನ ಉತ್ಸಾಹದಲ್ಲಿತ್ತು. ಆದರೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡಿತು.

ಇದನ್ನೂ ಓದಿ: ರಣಜಿ ಟ್ರೋಫಿ: ತಮಿಳುನಾಡು ಮಣಿಸಿ ಶುಭಾರಂಭ ಮಾಡಿದ ಕರ್ನಾಟಕ.

ಇದೇ ವೇಳೆ ನಾಥ್‌ರ್‍ಈಸ್ಟ್‌ ಯುನೈಟೆಡ್‌ ಹಾಗೂ ಚೆನ್ನೈಯನ್‌ ಎಫ್‌ಸಿ ನಡುವಿನ ಫುಟ್ಬಾಲ್‌ ಪಂದ್ಯವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. 

click me!