ಪಾಕ್ ವಿರುದ್ಧ ರೋಹಿತ್ ಶರ್ಮಾ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ. ಅದರಲ್ಲೂ ಕಳೆದ ಮೂರು ಒನ್ಡೇ ಇನ್ನಿಂಗ್ಸ್ನಲ್ಲಿ ಎರಡು ಶತಕ, ಒಂದು ಅರ್ಧಶತಕ ಬಾರಿಸಿದ್ದಾರೆ. ಇನ್ನು ಕಳೆದ ಎರಡು ಇನ್ನಿಂಗ್ಸ್ನಲ್ಲೂ ಸೆಂಚುರಿ ಸಿಡಿಸಿದ್ದಾರೆ.
ಬೆಂಗಳೂರು(ಸೆ.02): ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಹೋಗಿ ಸರಣಿ ಆಡಿ ಬರೋಬ್ಬರಿ 15 ವರ್ಷಗಳಾಗಿದೆ. ಅಂದು ಬದ್ಧವೈರಿ ದೇಶಕ್ಕೆ ಹೋಗಿ ಆಡಿದವರೆಲ್ಲಾ ಇಂದು ರಿಟೈರ್ಡ್ ಆಗಿ ಮನೆಯಲ್ಲಿದ್ದಾರೆ. ಆದ್ರೆ ಒಬ್ಬ ಆಟಗಾರ ಮಾತ್ರ ಇನ್ನೂ ಟೀಂ ಇಂಡಿಯಾದಲ್ಲಿ ಆಡ್ತಿದ್ದಾನೆ. ಆತನೇ ಹಿಟ್ ಮ್ಯಾನ್ ರೋಹಿತ್ ಶರ್ಮಾ.
ಹೌದು, 2008ರಲ್ಲಿ ಕೊನೆಯ ಬಾರಿ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆ ಟೂರ್ನಿಯಲ್ಲಿ ಎರಡು ಒನ್ಡೇ ಮ್ಯಾಚ್ ಆಡಿದ್ದ ರೋಹಿತ್ ಶರ್ಮಾ, ಒಂದು ಹಾಫ್ ಸೆಂಚುರಿ ಬಾರಿಸಿದ್ರು. ಹಿಟ್ ಮ್ಯಾನ್ ಬಿಟ್ರೆ ಈಗಿರುವ ಭಾರತ-ಪಾಕಿಸ್ತಾನ ತಂಡದಲ್ಲಿ ಯಾರೋಬ್ಬರು ಆ ಸರಣಿಯಲ್ಲಿ ಆಡಿರಲಿಲ್ಲ. ಇಂದು ಇದೇ ರೋಹಿತ್ ಬದ್ಧವೈರಿ ವಿರುದ್ಧ ಟೀಂ ಇಂಡಿಯಾವನ್ನ ಲೀಡ್ ಮಾಡ್ತಿದ್ದಾರೆ.
undefined
ಒನ್ಡೇಯಲ್ಲಿ ಪಾಕ್ ವಿರುದ್ಧ ರೋಹಿತ್ ಆರ್ಭಟ
ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ಒಂದೂ ಟೆಸ್ಟ್ ಆಡಿಲ್ಲ. 11 ಟಿ20 ಮ್ಯಾಚ್ ಆಡಿದ್ರೂ ಒಂದೂ ಅರ್ಧಶತಕವನ್ನೂ ದಾಖಲಿಸಿಲ್ಲ. ಚುಟುಕು ಕ್ರಿಕೆಟ್ನಲ್ಲಿ ಪಾಕ್ ಬೌಲರ್ ಎದುರು ಪರದಾಡಿದ್ದಾರೆ. ಆದ್ರೆ ಒನ್ಡೇಯಲ್ಲಿ ಮಾತ್ರ ಪಾಕ್ ಅಂದ್ರೆ ಹಿಟ್ ಮ್ಯಾನ್ ಸಿಡಿದೇಳುತ್ತಾರೆ. ಆಡಿರೋ 16 ಒನ್ಡೇ ಮ್ಯಾಚ್ನಲ್ಲಿ ಎರಡು ಸೆಂಚುರಿ, 6 ಹಾಫ್ ಸೆಂಚುರಿ ಸಿಡಿಸಿ ಪಾಕಿಗಳಿಗೆ ಚಳಿಜ್ವರ ಬಿಡಿಸಿದ್ದಾರೆ. ಪಾಕ್ ಬೌಲರ್ಸ್ಗೆ ಬರೋಬ್ಬರಿ 16 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧ 16 ಏಕದಿನ ಪಂದ್ಯಗಳನ್ನಾಡಿದ್ದು, 51.42ರ ಸರಾಸರಿಯಲ್ಲಿ 720 ರನ್ ಹೊಡೆದಿದ್ದಾರೆ. 2 ಶತಕ ಮತ್ತು 6 ಅರ್ಧಶತಕಗಳು ಅವರ ಖಾತೆಯಲ್ಲಿವೆ.
ಕಳೆದ 3 ಇನ್ನಿಂಗ್ಸ್ನಲ್ಲೂ ಅಬ್ಬರ, ಹ್ಯಾಟ್ರಿಕ್ ಸೆಂಚುರಿ ಬರುತ್ತಾ..?
ಪಾಕ್ ವಿರುದ್ಧ ರೋಹಿತ್ ಶರ್ಮಾ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ. ಅದರಲ್ಲೂ ಕಳೆದ ಮೂರು ಒನ್ಡೇ ಇನ್ನಿಂಗ್ಸ್ನಲ್ಲಿ ಎರಡು ಶತಕ, ಒಂದು ಅರ್ಧಶತಕ ಬಾರಿಸಿದ್ದಾರೆ. ಇನ್ನು ಕಳೆದ ಎರಡು ಇನ್ನಿಂಗ್ಸ್ನಲ್ಲೂ ಸೆಂಚುರಿ ಸಿಡಿಸಿದ್ದಾರೆ. 2018 ಏಷ್ಯಾಕಪ್ ಮತ್ತು 2019ರ ವರ್ಲ್ಡ್ಕಪ್ನಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಇಂದು ಶತಕ ಹೊಡೆದ್ರೆ ಪಾಕ್ ವಿರುದ್ಧ ಹ್ಯಾಟ್ರಿಕ್ ಸೆಂಚುರಿ ಬಾರಿಸಿದ ದಾಖಲೆ ಮಾಡಲಿದ್ದಾರೆ. ಯಾರೊಬ್ಬರೂ ಈ ರೆಕಾರ್ಡ್ ಮಾಡಿಲ್ಲ. ಇಂದು ಪಾಕ್ ವಿರುದ್ಧ 163 ರನ್ ಬಾರಿಸಿದ್ರೆ, ಒನ್ಡೇ ಕ್ರಿಕೆಟ್ನಲ್ಲಿ 10 ಸಾವಿರ ರನ್ ಸರದಾರ ಎನಿಸಿಕೊಳ್ಳಲಿದ್ದಾರೆ.
2018ರಲ್ಲಿ ನಾಯಕನಾಗಿ ಮತ್ತು ಆಟಗಾರನಾಗಿ ರೋಹಿತ್ ಸಕ್ಸಸ್ ಆಗಿದ್ದರು. ಕೊಹ್ಲಿ ಅನುಪಸ್ಥಿಯಲ್ಲಿ ಭಾರತಕ್ಕೆ ಏಷ್ಯಕಪ್ ಗೆಲ್ಲಿಸಿಕೊಟ್ಟಿದ್ದರು. ಜೊತೆಗೆ ರನ್ ಹೊಳೆಯನ್ನೇ ಹರಿಸಿ ಸಹ ಆಟಗಾರರಿಗೆ ಮಾದರಿಯಾಗಿದ್ದರು. ಈ ಸಲವೂ ರೋಹಿತ್ ಶರ್ಮಾ ಮೇಲೆ ಎರಡು ಜವಾಬ್ದಾರಿ ಇದೆ. ಈ ಎರಡು ಜವಾಬ್ದಾರಿಯನ್ನ ಸಮರ್ಪಕವಾಗಿ ನಿರ್ವಹಿಸಿದ್ರೆ, ಭಾರತಕ್ಕೆ ಮತ್ತೊಂದು ಏಷ್ಯಾಕಪ್ ಬರಲಿದೆ.