Asia Cup 2023: ಬ್ಯಾಟಿಂಗ್-ಬೌಲಿಂಗ್​ ಎರಡರಲ್ಲೂ ಪಾಕ್ ಬಲಿಷ್ಠ..! ಬಾಬರ್ ಪಡೆ ಸೋಲಿಸೋದು ತುಂಬಾ ಕಷ್ಟ

By Suvarna News  |  First Published Sep 2, 2023, 2:05 PM IST

ಒನ್ಡೇ ಕ್ರಿಕೆಟ್​ನಲ್ಲಿ ಪಾಕಿಸ್ತಾನ ನಂ.1 ಸ್ಥಾನದಲ್ಲಿದೆ. ಟಿ20ಯಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡದ ಪಾಕ್, ಫಿಫ್ಟಿ ಓವರ್ ಕ್ರಿಕೆಟ್​ನಲ್ಲಿ ಮಾತ್ರ ಧೂಳೆಬ್ಬಿಸ್ತಿದೆ. ಕಳೆದ 10 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿರೋದೆ ಇದಕ್ಕೆ ಸಾಕ್ಷಿ. ಪಾಕ್ ತಂಡದಲ್ಲಿ ಡೇಂಜರಸ್ ಆಟಗಾರರ ದಂಡೇ ಇದೆ. 


ಬೆಂಗಳೂರು(ಸೆ.02): 2022ರ ಟಿ20 ವಿಶ್ವಕಪ್ ನಂತರ ಬದ್ಧವೈರಿಗಳು ಮತ್ತೊಮ್ಮೆ ಮುಖಾಮುಖಿ ಆಗ್ತಿವೆ. ಏಷ್ಯಾಕಪ್ ಸಮರದಲ್ಲಿಂದು  ಇಂಡೋ-ಪಾಕ್ ಮಧ್ಯೆ ಕ್ರಿಕೆಟ್​ ಮಹಾಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕೆಲವೇ ಗಂಟೆಗಳಲ್ಲಿ ಈ ಜಿದ್ದಾಜಿದ್ದಿನ ಕಾಳಗ ಶುರುವಾಗಲಿದೆ. ಎರಡೂ ತಂಡಗಳು ಈ ಬಿಗ್​ಫೈಟ್​ನಲ್ಲಿ ಗೆಲುವಿನ ಬಾವುಟ ಹಾರಿಸೋ ವಿಶ್ವಾಸದಲ್ಲಿವೆ. ಆದ್ರೆ, ಭಾರತಕ್ಕೆ ಹೋಲಿಸಿದ್ರೆ, ಪಾಕಿಸ್ತಾನ ಹೆಚ್ಚು ಬಲಿಷ್ಠವಾಗಿದೆ. ಎಲ್ಲಾ ಡಿಪಾರ್ಟ್​ಮೆಂಟ್​ಗಳಲ್ಲೂ ಬ್ಯಾಲೆನ್ಸ್‌ ಆಗಿದೆ. 

ಬಾಬರ್ ಅಜಮ್​ನ ಕಟ್ಟಿಹಾಕದಿದ್ರೆ ಸಂಕಷ್ಟ ತಪ್ಪಿದ್ದಲ್ಲ..!

Latest Videos

undefined

ಯೆಸ್, ಒನ್ಡೇ ಕ್ರಿಕೆಟ್​ನಲ್ಲಿ ಪಾಕಿಸ್ತಾನ ನಂ.1 ಸ್ಥಾನದಲ್ಲಿದೆ. ಟಿ20ಯಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡದ ಪಾಕ್, ಫಿಫ್ಟಿ ಓವರ್ ಕ್ರಿಕೆಟ್​ನಲ್ಲಿ ಮಾತ್ರ ಧೂಳೆಬ್ಬಿಸ್ತಿದೆ. ಕಳೆದ 10 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿರೋದೆ ಇದಕ್ಕೆ ಸಾಕ್ಷಿ. ಪಾಕ್ ತಂಡದಲ್ಲಿ ಡೇಂಜರಸ್ ಆಟಗಾರರ ದಂಡೇ ಇದೆ. 

ಪಾಕಿಸ್ತಾನ ಬ್ಯಾಟಿಂಗ್​ ಲೈನ್ ಅಪ್ ಫಖರ್ ಜಮಾನ್ ಮತ್ತು ಇಮಾಮ್ ಉಲ್ ಹಕ್‌ನಿಂದ ಸ್ಟಾರ್ಟ್​ ಆಗುತ್ತೆ. ಇವರಿಬ್ಬರು ಕಳೆದ ಕೆಲ ಪಂದ್ಯಗಳಿಂದ ತಂಡಕ್ಕೆ ಅದ್ಭುತ ಆರಂಭ ತಂದುಕೊಡ್ತಿದ್ದಾರೆ.  ಅದರಲ್ಲೂ ಫಖರ್ ಜಮಾನ್, ಭಾರತದ ವಿರುದ್ಧ ಸೂಪರ್ ಟ್ರ್ಯಾಕ್ ರೆಕಾರ್ಡ್‌ ಹೊಂದಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌​ನಲ್ಲಿ ಫಖರ್, ಶತಕ ಸಿಡಿಸಿ ಭಾರತವನ್ನ ಸೋಲಿಸಿದ್ದರು.

ಒನ್​ಡೌನ್​ನಲ್ಲಿ ಕಣಕ್ಕಿಳಿಯೋ ಕ್ಯಾಪ್ಟನ್ ಬಾಬರ್ ಅಜಮ್ ಸದ್ಯ ಜಬರ್​ದಸ್ತ್​ ಫಾರ್ಮ್​ನಲ್ಲಿದ್ದಾರೆ. ಏಕದಿನ ಕ್ರಿಕೆಟ್​​ನ ನಂ.1 ಬ್ಯಾಟ್ಸ್​​ಮನ್ ಆಗಿರೋ ಬಾಬರ್, ನೇಪಾಳ ವಿರುದ್ಧ 151 ರನ್ ಚಚ್ಚಿದ್ರು. ಹೀಗಾಗಿ ಅಜಮ್​ನ ಆದಷ್ಟು ಬೇಗ ಕಟ್ಟಿಹಾಕಲೇಬೇಕು. ನಂಬರ್ ಫೋರ್​ನಲ್ಲಿ ಬ್ಯಾಟ್​ ಬೀಸೋ ಮೊಹಮ್ಮದ್ ರಿಜ್ವಾನ್ ಪಾಕ್ ಬ್ಯಾಟಿಂಗ್​ನ ಬ್ಯಾಕ್​ಬೋನ್ ಅಂದ್ರೆ ತಪ್ಪಿಲ್ಲ. ಇವರಿಬ್ಬರು 2021ರ ಟಿ20 ವಿಶ್ವಕಪ್​ನಲ್ಲಿ, ಟೀಂ ಇಂಡಿಯಾ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. 

ಇಫ್ತಿಕಾರ್ ಅಹ್ಮದ್ ಕೂಡ ಪಾಕ್ ಮಿಡಲ್ ಆರ್ಡರ್​ ಬ್ಯಾಟಿಂಗ್​​ನ  ಪ್ರಬಲ ಅಸ್ತ್ರವಾಗಿದ್ದಾರೆ. 32 ವರ್ಷದ ಈ ಬ್ಯಾಟ್ಸ್​​ಮನ್, ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸೋದ್ರಲ್ಲಿ ಪಂಟರ್. T20 ವಿಶ್ವಕಪ್​ನಲ್ಲಿ ಭಾರತದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿ, ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ರು. 

ಶಾಹಿನ್ ಅಫ್ರಿದಿ ವಿರುದ್ಧ  ಆಡೋದೆ ಬಿಗ್​ ಚಾಲೆಂಜ್..! 
ಶಾಹೀನ್ ಅಫ್ರಿದಿ..! ಈ ಎಡಗೈ ವೇಗಿ ಹೊಸ ಬಾಲ್​ನೊಂದಿಗೆ ಎರಡೂ ಬದಿಯಲ್ಲಿ ಸ್ವಿಂಗ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಇದರಿಂದ ನಮ್ಮ ಬಲಗೈ ಬ್ಯಾಟರ್ಸ್​​ಗೆ ಅಫ್ರಿದಿ ಬೌಲಿಂಗ್​ನಲ್ಲಿ ಆಡೋದು ಬಿಗ್ ಚಾಲೆಂಜ್ ಆಗಲಿದೆ. ಈ ಹಿಂದೆ 2021ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಶಾಹೀನ್, ಭಾರತದ ಟಾಪ್ ಆರ್ಡರ್​ ಬ್ಯಾಟಿಂಗ್​ನ ಡೆಮಾಲಿಶ್ ಮಾಡಿದ್ರು. 

ಸೂಪರ್ ಫಾರ್ಮ್​ನಲ್ಲಿ ಪಾಕ್ ಸ್ಪಿನ್ನರ್ಸ್..! 
ಯೆಸ್, ಭಾರತೀಯ ಬ್ಯಾಟರ್ಸ್​ ಸ್ಪಿನ್​ ವಿರುದ್ಧ ಆಡಲು ಪರದಾಡ್ತಾರೆ. ಅದರಲ್ಲೂ ವಿರಾಟ್ ಕೊಹ್ಲಿ ಇತ್ತೀಚೆಗೆ ಸ್ಪಿನ್ನರ್ಸ್​ಗೆ EASYಯಾಗಿ ವಿಕೆಟ್ ಒಪ್ಪಿಸ್ತಿದ್ದಾರೆ. ಪಾಕ್ ಸ್ಪಿನ್ನರ್ಸ್​, ನೇಪಾಳ ವಿರುದ್ಧದ ಪಂದ್ಯದಲ್ಲಿ ಮೋಡಿ ಮಾಡಿದ್ರು. ಶದಾಬ್ ಖಾನ್ 4 ವಿಕೆಟ್ ಬೇಟೆಯಾಡಿದ್ರು.  

ಒಟ್ಟಿನಲ್ಲಿ ಬಾಬರ್ ಪಡೆಗೆ ಮಣ್ಣುಮುಕ್ಕಿಸೋದು ರೋಹಿತ್ ಸೈನ್ಯಕ್ಕೆ ಅಷ್ಟು ಸುಲಭವಲ್ಲ. ಎಲ್ಲಾ ವಿಭಾಗಗಳಲ್ಲೂ ಅತ್ಯದ್ಭುತ ಪ್ರದರ್ಶನ ನೀಡಿದ್ರೆ ಮಾತ್ರ ಗೆಲುವು ದಕ್ಕಲಿದೆ. ಇಲ್ಲ ಅಂದ್ರೆ, ಮುಖಭಂಗ ಅನುಭವಿಸೋದು ಪಕ್ಕಾ.

ಮಹೇಶ್​ ಗುರಣ್ಣನವರ್​, ಸ್ಪೋರ್ಟ್ಸ್​ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!