ಹೊಸ ವರ್ಷದ ಆರಂಭದಲ್ಲಿ ಭಾರತ-ಶ್ರೀಲಂಕಾ ಸರಣಿ; ರೋಹಿತ್‌ಗೆ ರೆಸ್ಟ್?

By Suvarna NewsFirst Published Dec 23, 2019, 3:19 PM IST
Highlights

ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ವಿಶ್ರಾಂತಿಗೆ ಜಾರಿದೆ. ಹೊಸ ವರ್ಷ ಆರಂಭದಲ್ಲೇ ಲಂಕಾ ವಿರುದ್ಧ ಸರಣಿ ಆಡಲಿದೆ. ಆದರೆ ಈ ಸರಣಿಯಿಂದ ರೋಹಿತ್ ವಿಶ್ರಾಂತಿ ಬಯಸಿದ್ದಾರೆ.

ಮುಂಬೈ(ಡಿ.23): ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮುಕ್ತಾಯಗೊಂಡಿದೆ. ಟಿ20 ಹಾಗೂ ಏಕದಿನ ಸರಣಿ ಕೈವಶ ಮಾಡಿಕೊಂಡಿರುವ  ಟೀಂ ಇಂಡಿಯಾ 2019ನೇ ವರ್ಷವನ್ನು ಯಶಸ್ವಿಯಾಗಿ ಮುಗಿಸಿದೆ. ವಿಂಡೀಸ್ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ ಗೆಲುವಿನೊಂದಿಗೆ ವರ್ಷದ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿಸಿದೆ. ಇದೀಗ ಹೊಸ ವರ್ಷದಲ್ಲಿ ಹೊಸ ಸರಣಿ ಆಡಲು ಸಜ್ಜಾಗುತ್ತಿದೆ.

ಇದನ್ನೂ ಓದಿ: ಕಟಕ್‌ನಲ್ಲಿ ವಿಂಡೀಸ್ ಉಡೀಸ್; ಏಕದಿನ ಸರಣಿ ಗೆದ್ದು ದಾಖಲೆ ಬರೆದ ಭಾರತ!

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಬಳಿಕ ಟೀಂ ಇಂಡಿಯಾ 2 ವಾರಗಳ ಕಾಲ ವಿಶ್ರಾಂತಿ ಪಡೆಯಲಿದೆ. 2020ರ ಹೊಸ ವರ್ಷದ ಆರಂಭದಲ್ಲೇ ಶ್ರೀಲಂಕಾ ವಿರುದ್ಧ ಟಿ20 ಸರಣಿ ಆಡಲಿದೆ. ಸತತ ಪಂದ್ಯ ಆಡುತ್ತಿರುವ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗೆ ಲಂಕಾ ಸರಣಿಯಿಂದ ವಿಶ್ರಾಂತಿ ಕೋರಿದ್ದಾರೆ. ಹೀಗಾಗಿ ಬಿಸಿಸಿಐ ರೋಹಿತ್‌ಗೆ ವಿಶ್ರಾಂತಿ ನೀಡಲು ಮುಂದಾಗಿದೆ.

ಇದನ್ನೂ ಓದಿ: 300+ ಚೇಸಿಂಗ್; ಟೀಂ ಇಂಡಿಯಾ ನಂ.1!

ಭಾರತ ಹಾಗೂ ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿ ಜನವರಿ 5 ರಿಂದ ಆರಂಭಗೊಳ್ಳಲಿದೆ.  ಜನವರಿ 10ಕ್ಕೆ ಲಂಕಾ ಸರಣಿ ಅಂತ್ಯಗೊಳ್ಳಲಿದೆ.

ಭಾರತ-ಶ್ರೀಲಂಕಾ ಸರಣಿ
ಜ.5, 1ನೇ ಟಿ20 (ಗುವಹಾಟಿ)
ಜ.7, 2ನೇ ಟಿ20(ಇಂದೋರ್)
ಜನ.10ನೇ ಟಿ20(ಪುಣೆ)

ಡಿಸೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!