ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಟೀಂ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಎಂಟ್ರಿ ನೀಡಿತ್ತು. ಫೈನಲ್ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿತ್ತು. 2023ರಲ್ಲೂ ಟೀಂ ಇಂಡಿಯಾ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಅದ್ರೆ, ರೋಹಿತ್ ನಾಯಕತ್ವದಲ್ಲೂ ಭಾರತಕ್ಕೆ WTC ಚಾಂಪಿಯನ್ಸ್ ಪಟ್ಟ ಒಲಿಯಲಿಲ್ಲ.
ಬೆಂಗಳೂರು(ಜ.05) ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸೋ ಬಂಗಾರದಂತ ಅವಕಾಶವನ್ನ ಟೀಮ್ ಇಂಡಿಯಾ ಮಿಸ್ ಮಾಡಿಕೊಂಡಿದೆ. ಇದ್ರಿಂದ ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲೋದ್ಯಾವಾಗ ಅನ್ನೋ ಪ್ರಶ್ನೆ ಮೂಡಿದೆ. ಇದ್ರ ಮಧ್ಯೆ ರೋಹಿತ್ ಶರ್ಮಾರ ನಾಯಕತ್ವದ ಬಗ್ಗೆಯೂ ಪ್ರಶ್ನೆ ಎದ್ದಿವೆ. ರೋಹಿತ್ ಕೂಡ ಕೊಹ್ಲಿ ಹಾದಿಯಲ್ಲಿ ಸಾಗ್ತಿದ್ದಾರಾ ಅನ್ನೋ ಮಾತುಗಳು ಕೇಳಿಬರ್ತಿವೆ..? ಅದ್ಯಾಕೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಕೊಹ್ಲಿಯಿಂದ ಆಗದ್ದು, ರೋಹಿತ್ ಕೈಯಲ್ಲೂ ಆಗಲಿಲ್ಲ..!
undefined
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಕದನದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ವೈಟ್ವಾಶ್ ಮುಖಭಂಗದಿಂದ ಪಾರಾಗಿದೆ. ಆದ್ರೆ, ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಗಿದೆ. 31 ವರ್ಷಗಳಿಂದ ಈವರೆಗೂ ಒಮ್ಮೆಯೂ ಟೀಂ ಇಂಡಿಯಾ, ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ.
ಭಾರತ-ಪಾಕ್ ಟಿ20 ವಿಶ್ವಕಪ್ ಪಂದ್ಯಕ್ಕೆ ಡೇಟ್ ಫಿಕ್ಸ್..!
ಈ ಬಾರಿ ರೋಹಿತ್ ಶರ್ಮಾ ಪಡೆ, ಹೊಸ ಇತಿಹಾಸ ನಿರ್ಮಿಸುತ್ತೆ ಅಂತ ಕ್ರಿಕೆಟ್ ಜಗತ್ತು ಭಾವಿಸಿತ್ತು. ಯಾಕೆಂದ್ರೆ ಆಫ್ರಿಕಾ ಪಡೆಗೆ ಹೋಲಿಸಿದ್ರೆ, ಟೀಂ ಇಂಡಿಯಾ ಬಲಿಷ್ಠವಾಗಿತ್ತು. ಹರಿಣಗಳ ಪಡೆಯಲ್ಲಿ ಅನುಭವಿ ಆಟಗಾರರ ಕೊರತೆಯಿತ್ತು. ಹೀಗಿದ್ರೂ ನಮ್ಮವರಿಗೆ ಸರಣಿ ಗೆಲ್ಲಲಾಗಲಿಲ್ಲ. ಧೋನಿ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಗದೇ ಇದ್ದದ್ದು ರೋಹಿತ್ ಕೈಯಲ್ಲೂ ಆಗಲಿಲ್ಲ.
ಕೊಹ್ಲಿ ಹಾದಿಯಲ್ಲೇ ಸಾಗ್ತಿದ್ದಾರಾ ರೋಹಿತ್..?
ಯೆಸ್, ರೋಹಿತ್ ಟೀಂ ಇಂಡಿಯಾ ಕ್ಯಾಪ್ಟನ್ ಆದ್ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಆದ್ರೆ, ಈ ನಿರೀಕ್ಷೆಗಳೆಲ್ಲಾ ಸುಳ್ಳಾಗಿವೆ. ರೋಹಿತ್ ನಾಯಕರಾದ ನಂತರ ಟೀಂ ಇಂಡಿಯಾ, ಯಾವುದೇ ICC ಕಪ್ ಗೆದ್ದಿಲ್ಲ. ಈಗ ದಕ್ಷಿಣ ಆಫ್ರಿಕಾದಲ್ಲೂ ಟೆಸ್ಟ್ ಸರಣಿ ಗೆಲ್ಲೋ ಬಂಗಾರದಂತ ಅವಕಾಶವನ್ನ ಕೈಚಲ್ಲಿದೆ. ಕಳೆದ ಒಂದೂವರೆ ವರ್ಷದಲ್ಲಿ ರೋಹಿತ್ ಮೂರು ICC ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
2021ರಲ್ಲಿ ನಡೆದ T20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ, ಮಕಾಡೆ ಮಲಗಿತ್ತು. ಆದ್ರೆ, 2022ರಲ್ಲಿ ನಡೆದ ಟಿ20 ವಿಶ್ವಕಪ್ ಸಮರದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾಕೌಟ್ ಸ್ಟೇಜ್ ತಲುಪಿತ್ತು. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ತಂಡ, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳಿಂದ ಸೋಲು ಕಂಡಿತು.
ವರ್ಷದ ಏಕದಿನ ಕ್ರಿಕೆಟಿಗ ರೇಸಲ್ಲಿ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಶುಭ್‌ಮನ್ ಗಿಲ್
ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಟೀಂ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೆ ಎಂಟ್ರಿ ನೀಡಿತ್ತು. ಫೈನಲ್ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿತ್ತು. 2023ರಲ್ಲೂ ಟೀಂ ಇಂಡಿಯಾ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಅದ್ರೆ, ರೋಹಿತ್ ನಾಯಕತ್ವದಲ್ಲೂ ಭಾರತಕ್ಕೆ WTC ಚಾಂಪಿಯನ್ಸ್ ಪಟ್ಟ ಒಲಿಯಲಿಲ್ಲ.
ಏಕದಿನ ವಿಶ್ವಕಪ್ ಗೆಲ್ಲುವ ಕನಸು ನುಚ್ಚುನೂರು..!
ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಬಿಗ್ ಚಾಲೆಂಜ್ ಆಗಿತ್ತು. ಆದ್ರೆ, ಈ ಚಾಲೆಂಜ್‌ನಲ್ಲಿ ರೋಹಿತ್ ದಿಗ್ಜಿಜಯ ಸಾಧಿಸಿದ್ರು. ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲೂ ಮಿಂಚಿದ್ರು. ಬ್ಯಾಟಿಂಗ್ನಲ್ಲಂತೂ ಜಬರ್ದಸ್ತ್ ಪ್ರದರ್ಶನ ನೀಡಿದ್ರು. ಅವ್ರ ಆಟಕ್ಕೆ ಫ್ಯಾನ್ಸ್, ಮಾಜಿ ಪ್ಲೇಯರ್ಸ್ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ಆದ್ರೆ, ಸೆಮಿಫೈನಲ್ವರೆಗೂ ಸೋಲಿಲ್ಲದ ಸರದಾರನಂತಿದ್ದ ಟೀಂ ಇಂಡಿಯಾ, ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸ್ತು. ಅಲ್ಲಿಗೆ ವಿಶ್ವಕಪ್ ಗೆಲ್ಲುವ ರೋಹಿತ್ರ ಕನಸು ನುಚ್ಚು ನೂರಾಯ್ತು
ಕೊಹ್ಲಿಯಂತೆ ರೋಹಿತ್ಗೂ ಅದೃಷ್ಟ ಇಲ್ವಾ..?
ಯೆಸ್, ನಿಜ ಹೇಳಬೇಕಂದ್ರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಎಲ್ಲಾ ಇತ್ತು. ಆದ್ರೆ, ಅದೃಷ್ಟ ಮಾತ್ರ ಇರಲಿಲ್ಲ. ರೋಹಿತ್ ವಿಚಾರದಲ್ಲೂ ಅದೇ ರಿಪೀಟ್ ಆಗ್ತಿದೆ. ಕೊಹ್ಲಿ ನಾಯಕರಾಗಿದ್ದಾಗ ಟೀಂ ಇಂಡಿಯಾ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿತ್ತು. 2019ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಎಂಟ್ರಿ ನೀಡಿತ್ತು. 2021ರ WTCಯಲ್ಲಿ ಫೈನಲ್ನಲ್ಲಿ ಸೋತಿತ್ತು. ಅದರಂತೆ ರೋಹಿತ್ ಕ್ಯಾಪ್ಟನ್ಸಿಯಲ್ಲೂ ಟೀಂ ಇಂಡಿಯಾ ಮೂರು ICC ಇವೆಂಟ್‌ಗಳಲ್ಲಿ ನಾಕೌಟ್ನಲ್ಲೇ ಎಡವಿದೆ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್