ರಾಂಚಿ ರಸ್ತೆಯಲ್ಲಿ ವಿಂಟೇಜ್‌ ರೋಲ್ಸ್ ರಾಯ್ಸ್‌ ಕಾರು ಡ್ರೈವ್ ಮಾಡಿದ ಧೋನಿ..! ವಿಡಿಯೋ ವೈರಲ್

By Naveen Kodase  |  First Published Jul 27, 2023, 1:55 PM IST

ವಿಂಟೇಜ್‌ ರೋಲ್ಸ್ ರಾಯ್ಸ್ ಕಾರು ಡ್ರೈವ್ ಮಾಡಿದ ಧೋನಿ
ಸೋಷಿಯಲ್ ಮೀಡಿಯಾದಲ್ಲಿ ಧೋನಿ ಡ್ರೈವಿಂಗ್ ವಿಡಿಯೋ ವೈರಲ್
ಕಾರು ಬೈಕ್‌ ಮೇಲೆ ಅತೀವ ಕ್ರೇಜ್‌ ಹೊಂದಿರುವ ಕ್ಯಾಪ್ಟನ್ ಕೂಲ್


ರಾಂಚಿ(ಜು.2): ಭಾರತ ವಿಶ್ವಕಪ್ ವಿಜೇತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಇತ್ತೀಚೆಗೆ 1980ರ ದಶಕದ ವಿಂಟೇಜ್‌ ರೋಲ್ಸ್‌ ರಾಯ್ಸ್‌ ಕಾರನ್ನು ರಾಂಚಿಯ ರಸ್ತೆಯ ಮೇಲೆ ಡ್ರೈವಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ, ಐಶಾರಾಮಿ ಹಾಗೂ ವಿಂಟೇಜ್‌ ಕಾರುಗಳ ಕಲೆಕ್ಷನ್ ಮೂಲಕವೇ ಹೆಚ್ಚು ಗಮನ ಸೆಳೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎನಿಸಿದೆ. ಇದೀಗ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಆಫ್‌-ಫೀಲ್ಡ್ ಬದುಕಿನ ಅಪರೂಪದ ಡ್ರೈವಿಂಗ್‌ ವಿಡಿಯೋವನ್ನು ನೆಟ್ಟಿಗರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ (MS Dhoni) ತೀರಾ ಅಪರೂಪ ಎನ್ನುವಂತೆ ಸೋಷಿಯಲ್ ಮೀಡಿಯಾವನ್ನು ಬಳಸುತ್ತಾರೆ. ಹೀಗಾಗಿ ಎಂ ಎಸ್ ಧೋನಿ ವೈಯುಕ್ತಿಕ ಜೀವನದಲ್ಲಿ ಏನೇನು ನಡೆಯುತ್ತಿದೆ ಎನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇದೆ. ಇನ್ನು ಈ ತಿಂಗಳ ಆರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ, ತಮ್ಮ ಫಾರ್ಮ್‌ ಹೌಸ್‌ನಲ್ಲಿ ಪ್ರೀತಿಯ ನಾಯಿಗಳ ಜತೆಗೆ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇನ್ನು ಧೋನಿ, ಇತರೆ ಕ್ರಿಕೆಟಿಗರಂತೆ ಪ್ರಾಕ್ಟೀಸ್‌ ಮಾಡುವ ಅಥವಾ ಸ್ನೇಹಿತರ ಜತೆ ಪಾರ್ಟಿ ಮಾಡುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿಲ್ಲ. 

Tap to resize

Latest Videos

ಧೋನಿಗೆ ಕ್ರಿಕೆಟ್‌ ಬಳಿಕ ಆಟೋಮೊಬೈಲ್ಸ್ ಕ್ಷೇತ್ರದ ಮೇಲೆ ಹೆಚ್ಚಿನ ಒಲವು ಎನ್ನುವ ವಿಚಾರ ಗುಟ್ಟಾಗಿ ಏನೂ ಉಳಿದಿಲ್ಲ. ಮಹೇಂದ್ರ ಸಿಂಗ್ ಧೋನಿಯ ಫಾರ್ಮ್‌ ಹೌಸ್‌ನ ಗ್ಯಾರೇಜ್‌ನಲ್ಲಿ ಸುಮಾರು 15ಕ್ಕೂ ಅಧಿಕ ಹೈ ಎಂಡ್‌ ಕಾರುಗಳು ಹಾಗೂ ಕವಾಸಕಿ ನಿಂಜಾ, ಡುಕಾಟಿ, ಹಾರ್ಲೆ ಡೇವಿಡ್‌ಸನ್ ಸೇರಿದಂತೆ 70ಕ್ಕೂ ಅಧಿಕ ಬೈಕುಗಳಿವೆ ಎಂದು ವರದಿಯಾಗಿದೆ. ಇದೀಗ ರೋಲ್ಸ್‌ ರಾಯ್ಸ್‌, ಕಾರು ಧೋನಿಯ ಕಾರ್ ಕಲೆಕ್ಷನ್‌ಗೆ ಮತ್ತೊಂದು ಗರಿ ಸೇರ್ಪಡೆಯಾದಂತೆ ಆಗಿದೆ.

World Cup 2023: ಭಾರತ-ಪಾಕ್‌ ಪಂದ್ಯ ವೇಳೆ 10 ಸೆಕೆಂಡ್‌ ಜಾಹೀರಾತಿಗೆ ₹30 ಲಕ್ಷ?

@kushmahi7 ಎನ್ನುವ ಇನ್‌ಸ್ಟಾಗ್ರಾಂ ಯೂಸರ್, ಇದೀಗ ಧೋನಿ ನೀಲಿ ಬಣ್ಣದ ವಿಂಟೇಜ್‌ ರೋಲ್ಸ್ ರಾಯ್ಸ್(Rolls Royce) ಕಾರು ಡ್ರೈವಿಂಗ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಎಂ ಎಸ್ ಧೋನಿ ಅಭಿಮಾನಿ ವಲಯದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಮೊಬೈಲ್ ವಾಟ್ಸ್‌ಅಪ್ ಸ್ಟೇಟಸ್‌ನಲ್ಲೂ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ. 

ಮಹೇಂದ್ರ ಸಿಂಗ್ ಧೋನಿ, 2020ರ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಇದೀಗ ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ ಎಂದು ಮುಂಬೈ ಇಂಡಿಯನ್ಸ್‌ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಕೂಡಾ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ವಿರಾಟ್ ಕೊಹ್ಲಿ ಏಷ್ಯಾದ ಎರಡನೇ ಶ್ರೀಮಂತ ಅಥ್ಲೀಟ್..! ಹಾಗಿದ್ರೆ ಮೊದಲ ಸ್ಥಾನದಲ್ಲಿರೋರು ಯಾರು?

ಇನ್ನು 2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಎಂ ಎಸ್ ಧೋನಿ, ಐಪಿಎಲ್‌ಗೂ ಗುಡ್‌ ಬೈ ಹೇಳಲಿದ್ದಾರೆ ಎನ್ನುವ ಗಾಳಿ ಸುದ್ದಿ ವೈರಲ್ ಆಗಿತ್ತು. ಈ ಕುರಿತಂತೆ ಕಪ್‌ ಗೆದ್ದ ಬಳಿಕ ಮಾತನಾಡಿದ್ದ ಧೋನಿ, ನಿವೃತ್ತಿ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಾಕಷ್ಟು ಸಮಯವಿದ್ದು, ಕನಿಷ್ಠ ಇನ್ನೂ ಒಂದು ಸೀಸನ್ ಐಪಿಎಲ್ ಆಡುವ ಸುಳಿವು ಬಿಟ್ಟುಕೊಟ್ಟಿದ್ದಾರೆ.

click me!