ಐಪಿಎಲ್ ಟೂರ್ನಿ ಆರಂಭಗೊಂಡಂತೆ ಮಸ್ತಿ ಕೂಡ ಹೆಚ್ಚಾಗಿದೆ. ಇದೀಗ ರೋಹಿತ್ ಶರ್ಮಾ, ತಿಲಕ್ ವರ್ಮಾ ಸೇರಿದಂತೆ ಕ್ರಿಕೆಟಿಗರು ಮುಂಬೈ ಇಂಡಿಯನ್ಸ್ ತಂಡದ ಆಡ್ಮಿನ್‌ನ ಈಜುಕೊಳಕ್ಕೆ ಎಸೆದಿದ್ದರೆ.
ಮುಂಬೈ(ಮಾ.27) ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಪಂದ್ಯದಲ್ಲೇ ಮೊದಲ ಸೋಲು ಕಂಡಿದೆ. ಆದರೆ ಮುಂಬೈ ಇಂಡಿಯನ್ಸ್ ತಂಡದ ಮಸ್ತಿಗೆ ಯಾವುದೇ ಕೊರತೆ ಇಲ್ಲ. ಮುಂದಿನ ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ಆಟಗಾರರು ಇದರ ನಡುವೆ ತಂಗಿರುವ ಹೊಟೆಲ್‌ನಲ್ಲಿ ಮಸ್ತಿ ನಡೆಸಿದ್ದಾರೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ಆಡ್ಮಿನ್ ಒಬ್ಬರನ್ನು ರೋಹಿತ್ ಶರ್ಮಾ ಗ್ಯಾಂಗ್ ಎತ್ತಿ ಈಜುಕೊಳ್ಳಕ್ಕೆ ಹಾಕಿದ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡ ಹೊಟೆಲ್‌ನಲ್ಲಿ ಮಸ್ತಿಯಲ್ಲಿ ತೊಡಗಿದೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ನೋಡಿಕೊಳ್ಳುವ ಅಡ್ಮಿನ್ ಒಬ್ಬರನ್ನು ರೋಹಿತ್ ಶರ್ಮಾ, ತಿಲಕ್ ವರ್ಮಾ ಹಾಗೂ ಸೂರ್ಯ ಕುಮಾರ್ ಯಾದವ್ ಸೇರಿ ಎತ್ತಿಕೊಂಡು ಬಂದು ನೇರವಾಗಿ ಈಜುಕೊಳಕ್ಕೆ ಎಸೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶತಕ ಮಿಸ್ ಮಾಡಿಕೊಂಡ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ ಗುಡ್ ನ್ಯೂಸ್, ಕೊಹ್ಲಿ-ರೋಹಿತ್‌ಗೆ ಶಾಕ್?
ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ತಂಡದ ಸಹ ಆಟದಾರರ ಜೊತೆ ಮಸ್ತಿ ಮಾಡುತ್ತಿದೆ. ಇದರ ನಡುವೆ ತಂಡದ ಸಪೋರ್ಟಿಂಗ್ ಸ್ಟಾಫ್ ಸೇರಿದಂತೆ ಹಲವರನ್ನು ಪ್ರಾಂಕ್ ಮೂಲಕ ಹೆದರಿಸಿದೆ. ಒಂದಷ್ಟು ಮಂದಿಯನ್ನು ಈಜುಕೊಳಕ್ಕೆ ಎತ್ತಿ ಹಾಕಿದೆ. ಹಲವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದರೆ.ಮೊದಲ ಸೋಲಿಗೆ ಅಡ್ಮಿನ್‌ನ ಈಜುಕೊಳಕ್ಕೆ ಎಸೆದರೆ, ಇನ್ನುಳಿದ ಸೋಲಿಗೆ ಯಾರನ್ನು ಎಸೆಯುತ್ತೀರಿ ಎಂದು ಹಲವರು ಪ್ರಶ್ನಿಸಿದ್ದಾರೆ.
Rohit Sharma, Tilak Varma and Suryakumar Yadav together are throwing the Mumbai Indians admin into the pool 😭🤣 pic.twitter.com/luubtrrGI4
— 𝐑𝐮𝐬𝐡𝐢𝐢𝐢⁴⁵ (@rushiii_12)
ಮುಂಬೈ ಇಂಡಿಯನ್ಸ್ ಐಪಿಎಲ್ 2025ರ ಆವೃತ್ತಿಯನ್ನು ಸೋಲಿನೊಂದಿಗೆ ಆರಂಭಿಸಿದೆ. ಐಪಿಎಲ್ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ ಸೋಲಿನೊಂದಿಗೆ ಆವೃತ್ತಿ ಆರಂಭಿಸುತ್ತಿರುವುದು ಇದು ಮೊದಲಲ್ಲ. ಹಲವು ಬಾರಿ ಆರಂಭಿಕ ಕೆಲ ಪಂದ್ಯಗಳನ್ನು ಸೋತು ಬಳಿಕ ಚಾಂಪಿಯನ್ ಆದ ಉದಾಹರಣೆ ಇದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆಡಿತ್ತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ದಾಖಲಿಸಿದೆ. ಇದೀಗ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದೆ.
ಸದ್ಯ ಮುಂಬೈ ಇಂಡಿಯನ್ಸ್ ಐಪಿಎಲ್ 2025 ಟೇಬಲ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಆಡಿದ 1 ಪಂದ್ಯದಲ್ಲಿ ಸೋಲು ಕಂಡಿದೆ. ಇನ್ನು ಅಂಕಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಜಮಾನವಾಗಿದೆ.
ಉದ್ಯೋಗ ಖಾತ್ರಿಯಡಿ ವೇತನ ಪಡೆದ ಮೊಹಮ್ಮದ್ ಶಮಿ ತಂಗಿ ಕುಟುಂಬ, ಹೊಸ ತಲೆನೋವು ಶುರು