ಆಸೀಸ್ ಪ್ರವಾಸಕ್ಕೆ ರೋಹಿತ್ ಶರ್ಮಾ ಕೈಬಿಡಲು ಕಾರಣವೇನು? ಮೌನ ಮುರಿದ ಆರಂಭಿಕ!

By Suvarna NewsFirst Published Nov 21, 2020, 9:05 PM IST
Highlights

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರನ್ನು ಕೈಬಿಟ್ಟಿರುವುದು ಅತೀ ದೊಡ್ಡ ಕೋಲಾಹಲ ಎಬ್ಬಿಸಿತು. ಈ ಕುರಿತು ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಬಿಸಿಸಿಐ ವಿರುದ್ಧ ಕೆಂಡಾಮಂಡಲವಾಗಿದ್ದರು. ಆದರೆ ರೋಹಿತ್ ಶರ್ಮಾ ಮಾತ್ರ ತುಟಿ ಬಿಚ್ಚಿರಲಿಲ್ಲ. ಇದೀಗ ರೋಹಿತ್ ಮೌನ ಮುರಿದಿದ್ದಾರೆ.

ಬೆಂಗಳೂರು(ನ.21): ಐಪಿಎಲ್ 2020 ಟೂರ್ನಿ ನಡುವೆ ರೋಹಿತ್ ಶರ್ಮಾ ಇಂಜುರಿ ಕಾರಣ ನೀಡಿ ತಂಡದಿಂದ ಹೊರಗುಳಿದಿದ್ದರು. ಪ್ಲೇ ಆಫ್ ಪಂದ್ಯಕ್ಕೆ ರೋಹಿತ್ ವಾಪಸ್ ಆಗಿದ್ದರು. ಆದರೆ ರೋಹಿತ್ ಇಂಜುರಿಯಿಂದ ಚೇತರಿಸಿಕೊಂಡು ಮುಂಬೈ ಇಂಡಿಯನ್ಸ್ ಪರ ಆಡಿದ್ದರೂ, ಬಿಸಿಸಿಐ ಆಯ್ಕೆ ಸಮಿತಿ, ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಶರ್ಮಾ ಕೈಬಿಟ್ಟಿತ್ತು. ಇದು ಹಲವು ಪರ ವಿರೋಧ ಚರ್ಚೆಗೆ ಗ್ರಾಸವಾಗಿತ್ತು.

ರೋಹಿತ್ ಶರ್ಮಾ ಬದಲು ಸೂರ್ಯಕುಮಾರ್ ಯಾದವ್‌ಗೆ ಚಾನ್ಸ್‌ ನೀಡಲು ಒತ್ತಾಯ 

ಇದೀಗ ಸ್ವತಃ ರೋಹಿತ್ ಶರ್ಮಾ ತಾವು ಆಯ್ಕೆಯಾಗದಿರುವ ಕುರಿತು ಮಾತನಾಡಿದ್ದಾರೆ. ತಾನು ಹ್ಯಾಮ್‌ಸ್ಟ್ರಿಂಗ್ ಇಂಜುರಿಗೆ ತುತ್ತಾಗಿರುವುದಾಗಿ ಹೇಳಿದ್ದಾರೆ. ಟೆಸ್ಟ್ ಸರಣಿಗೂ ಮುನ್ನ ಇಂಜುರಿಯಿಂದ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ಸೃಷ್ಟಿಯಾಗಿರುವ ವಿವಾದ ತನಗೆ ತಿಳಿದಿಲ್ಲ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ ಎಂದು ರೋಹಿತ್ ಹೇಳಿದ್ದಾರೆ.

ಫಿಟ್ನೆಸ್‌ ತರಬೇತಿಗೆ ಬೆಂಗಳೂರಿಗೆ ಬಂದ ರೋಹಿತ್‌ ಶರ್ಮಾ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿಲ್ಲ ಅನ್ನೋ ಕಾರಣಕ್ಕೆ ಯಾರ ಪ್ರತಿಕ್ರಿಯೆಯನ್ನು ನಾನು ಗಮನಿಸಿಲ್ಲ. ನಾನು ಬಿಸಿಸಿಐ ಹಾಗೂ ಮುಂಬೈ ಇಂಡಿಯನ್ಸ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಬಿಸಿಸಿಐ ನನ್ನ ರಿಕವರಿಗೆ ಕಾಯುತ್ತಿದೆ. ನಾನೂ ಕೂಡ ಟೆಸ್ಟ್ ಸರಣಿಗೂ ಮುನ್ನ ಮಾನಸಿಕವಾಗಿಯೂ ಸದೃಢವಾಗಲು ಬಯಸುತ್ತಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
 

click me!