ಸೋಲಿನ ಆಘಾತದಿಂದ.., ವಿಶ್ವಕಪ್ ಫೈನಲ್ ಬಳಿಕ ಮೊದಲ ಬಾರಿಗೆ ನೋವು ತೋಡಿಕೊಂಡ ರೋಹಿತ್!

By Suvarna NewsFirst Published Dec 13, 2023, 7:37 PM IST
Highlights

ವಿಶ್ವಕಪ್ ಫೈನಲ್ ಪಂದ್ಯದಲ್ಲಿನ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ ಎಲ್ಲೂ ಕಾಣಿಸಿಕೊಂಡಿಲ್ಲ. ಸೋಲಿನ ಆಘಾತದ ಬಳಿಕ ಮೌನಕ್ಕೆ ಜಾರಿದ್ದ ರೊಹಿತ್ ಇದೇ ಮೊದಲ ಬಾರಿಗೆ ಈ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಕೆಲ ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ.

ಮುಂಬೈ(ಡಿ.12) ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಸೋಲನ್ನು ಕ್ರಿಕೆಟ್ ಪ್ರೇಮಿಗಳು ಅರಗಿಸಿಕೊಂಡಿಲ್ಲ. ಇನ್ನೂ ನಾಯಕ ರೋಹಿತ್ ಶರ್ಮಾ ಪಾಡು ಇದಕ್ಕಿಂತ ಭಿನ್ನವಾಗಿಲ್ಲ. ಆಸ್ಟ್ರೇಲಿಯಾ ವಿರುದ್ದ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಟೀಂ ಇಂಡಿಯಾ ಸದ್ಯ ಸೌತ್ ಆಫ್ರಿಕಾ ಪ್ರವಾಸದಲ್ಲಿದೆ. ಆದರೆ ನಾಯಕ ರೊಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದಾರೆ. ಸೋಲಿನ ಬಳಿಕ ರೋಹಿತ್ ಶರ್ಮಾ ಎಲ್ಲೂ ಕಾಣಿಸಿಕೊಂಡಿಲ್ಲ. ತಮ್ಮ ಕುಟುಂಬದ ಜೊತೆ ಕೆಲ ಸಮಯ ಕಳೆದಿದ್ದಾರೆ. ಸೋಲಿನ ಬಳಿಕ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಈ ಕುರಿತು ಮಾತನಾಡಿದ್ದಾರೆ. ಈ ಸೋಲಿನಿಂದ ಹೊರಬರಲು ನನ್ನ ಬಳಿ ಯಾವುದೇ ಐಡಿಯಾ ಇರಲಿಲ್ಲ ಎಂದಿದ್ದಾರೆ.

ಸೋಲಿನ ಬಳಿಕ ಕೆಲ ದಿನ ಏನು ಮಾಡಬೇಕು ಎಂಬುದೆ ನನಗೆ ತೋಚುತ್ತಿರಲಿಲ್ಲ. ಈ ಸೋಲಿನ ಆಘಾತದಿಂದ ಹೊರಬರಲು ನನ್ನ ಬಳಿ ಯಾವುದೇ ಐಡಿಯಾ ಇರಲಿಲ್ಲ. ವಿಶ್ವಕಪ್ ಫೈನಲ್ ಸೋಲಿನ ಬಳಿಕ ಎಲ್ಲವನ್ನೂ ಸುಧಾರಿಸಿಕೊಂಡು ಮುನ್ನಡೆಯುವುದೇ ಕಷ್ಟವಾಗಿತ್ತು. ಹೀಗಾಗಿ ಈ ಸೋಲನ್ನು ನನ್ನ ಮನಸ್ಸಿನಿಂದ ತೆಗೆದುಹಾಕಬೇಕು ಎಂದು ನಿರ್ಧರಿಸಿದೆ. ಆದರೆ ಈ ರೀತಿ ಸುಲಭವಾಗಿ ಎಲ್ಲವನ್ನೂ ಮರೆತು ಮುನ್ನಡೆಯುವುದು ಕಷ್ಟ. ನನಗೆ ಸಾಧ್ಯವೇ ಇಲ್ಲ. ನನ್ನ ಕುಟುಂಬ, ಆಪ್ತರು, ಗೆಳೆಯರು, ಅಭಿಮಾನಿಗಳ ಪ್ರೇರಣೆಯಿಂದ ಮುನ್ನಡದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

 

𝗛𝗘𝗔𝗟𝗜𝗡𝗚 🟩🟩🟩⬜️❤️‍🩹

🎥: IG/@team45ro pic.twitter.com/HAQpGrV9bf

— Mumbai Indians (@mipaltan)

 

2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾದ ಈ ಆಟಗಾರರಿಗೆ ಎಷ್ಟು ವಯಸ್ಸಾಗಿರಲಿದೆ?

ಏಕದಿನ ವಿಶ್ವಕಪ್ ಗೆಲ್ಲಬೇಕು ಅನ್ನೋದು ನನ್ನ ಅತೀ ದೊಡ್ಡ ಆಸೆಯಾಗಿತ್ತು. ಇದಕ್ಕಾಗಿ ನಾವು ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವು. ಆದರೆ ಗೆಲುವು ಸಿಗಲಿಲ್ಲ ಎಂದಾಗ ಸಹಜವಾಗಿ ನೋವಾಗುತ್ತದೆ. ಆದರೆ ತಂಡ ಆಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ನಾವು 10 ಪಂದ್ಯದಲ್ಲಿ ಗೆಲುವು ಸಾಧಿಸಿದ್ದೇವು. ಈ 10 ಪಂದ್ಯದಲ್ಲೂ ಕೆಲ ತಪ್ಪುಗಳನ್ನು ಮಾಡಿದ್ದೇವೆ. 11ನೇ ಪಂದ್ಯದಲ್ಲೂ ಕೆಲ ತಪ್ಪುಗಳಾಗಿವೆ. ಆದರೆ ಸೋಲಿಗೆ ಅದೇ ತಪ್ಪುಗಳು ಕಾರಣ ಎಂದಲ್ಲ. ಆದರೆ ಸೋಲಿನಿಂದ ಹೊರಬರುವುದು ಸುಲಭಲ್ಲ. ಹೀಗಾಗಿ ನಾನು ಕುಟುಂಬದ ಜೊತೆ ತೆರಳಿದ್ದೆ. ನನ್ನ ಮನಸ್ಸುನ್ನು ಆಘಾತದಿಂದ ಹೊರತರಬೇಕಿತ್ತು. ಆದರೆ ಎಲ್ಲಾ ಕಡೆ ಅಭಿಮಾನಿಗಳು ಬಂದು ಟೀಂ ಇಂಡಿಯಾ ಪ್ರದರ್ಶನ, ಆಟದ ರೀತಿಯನ್ನು ಮೆಚ್ಚಿಕೊಂಡಿದ್ದರು. ಸೋಲಿನ ನೋವು ಎಲ್ಲರಿಗೂ ಇದೆ. ಆದರೆ ತಂಡದ ಪ್ರದರ್ಶನಕ್ಕೆ ಎಲ್ಲರಿಗೂ ಮೆಚ್ಚುಗೆ ಇದೆ. ಇದು ನನಗೆ ಸ್ಪೂರ್ತಿ ನೀಡಿತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

'ನೀವೇ ಕ್ಯಾಪ್ಟನ್ ಆಗಿರಿ': BCCI ರೋಹಿತ್​ ಶರ್ಮಾ ಹಿಂದೆ ಬಿದ್ದಿರೋದ್ಯಾಕೆ..?

ತಂಡದ ಆಟಗಾರರ ಪ್ರದರ್ಶನವನ್ನು ಎಲ್ಲರೂ ಅಭಿನಂದಿಸಿದ್ದಾರೆ. ಟೀಂ ಇಂಡಿಯಾ ಎಲ್ಲಾ ಆಟಗಾರರಿಗೆ ವಿಶ್ವಕಪ್ ಗೆಲ್ಲಬೇಕು ಅನ್ನೋ ಕನಸಿರುತ್ತದೆ. ಹಾಗೇ ಅಭಿಮಾನಿಗಳಿಗೂ ಟ್ರೋಫಿ ನಮ್ಮದಾಗಬೇಕು ಅನ್ನೋ ಆಸೆ ಇರುತ್ತದೆ. ಆದರೆ ಸಾಧ್ಯವಾಗದಾಗ ನೋವು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
 

click me!