22 ವರ್ಷಗಳ ಹಳೆಯ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ!

By Suvarna News  |  First Published Dec 22, 2019, 8:31 PM IST

ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ  2019ರ ಕ್ಯಾಲೆಂಡರ್ ವರ್ಷವನ್ನು ದಾಖಲೆ ಮೂಲಕ ಅಂತ್ಯಗೊಳಿಸಿದ್ದಾರೆ. ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಹಲವು ಮೈಲಿಗಲ್ಲು ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ದಾಖಲೆ ವಿವರ ಇಲ್ಲಿದೆ.


ಕಟಕ್(ಡಿ.22): ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ 22 ವರ್ಷದ ಹಳೆಯೇ ದಾಖಲೆಯನ್ನು ಮುರಿದಿದ್ದಾರೆ. ವಿಂಡೀಸ್ ನೀಡಿದ 316 ರನ್ ಟಾರ್ಗೆಟ್ ಚೇಸಿಂಗ್ ಮಾಡಲು ಕಣಕ್ಕಿಳಿದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ಇಷ್ಟೇ ಅಲ್ಲ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದ ವೆಸ್ಟ್ ಇಂಡೀಸ್

Tap to resize

Latest Videos

undefined

ರೋಹಿತ್ ಶರ್ಮಾ 9 ರನ್ ಪೂರೈಸುತ್ತಿದ್ದಂತೆ ಹೊಸ ದಾಖಲೆ ಬರೆದರು. ಕ್ಯಾಲೆಂಡರ್ ವರ್ಷದಲ್ಲಿ ಆರಂಭಿಕನಾಗಿ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ದಾಖಲೆ ಮುರಿದಿದ್ದಾರೆ. 1997ರಲ್ಲಿ ಜಯಸೂರ್ಯ 2388 ರನ್ ಸಿಡಿಸಿದ್ದರು. ಇದೀಗ ರೋಹಿತ್ 22 ವರ್ಷಗಳ ಬಳಿಕ ಜಯಸೂರ್ಯ ದಾಖಲೆ ಮುರಿದಿದ್ದಾರೆ.  

ದಿಟ್ಟ ಹೋರಾಟ ನೀಡಿದ ರೋಹಿತ್ ಹಾಫ್ ಸೆಂಚುರಿ ಸಿಡಿಸೋ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದರು. ಆರಂಭಿಕನಾಗಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ 2ನೇ ಆರಂಭಿಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರಂಭಿಕನಾಗಿ ಸನತ್ ಜಯಸೂರ್ಯ ಕ್ಯಾಲೆಂಡರ್ ವರ್ಷದಲ್ಲಿ(1997) 21 ಅರ್ಧಶತಕ ಸಿಡಿಸಿದ್ದರು. ಇದೀಗ ರೋಹಿತ್ 20 ಅರ್ಧಶತಕ ಸಿಡಿಸಿದ್ದಾರೆ. 

ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ ಆರಂಭಿಕರು:
ಸನತ್ ಜಯಸೂರ್ಯ - 21 (1997)
ರೋಹಿತ್ ಶರ್ಮಾ - 20 (2019)*
ಸೈಯದ್ ಅನ್ವರ್ - 20 (1996)
ಗ್ಯಾರಿ ಕರ್ಸ್ಟನ್ - 20 (2000)

2019ರಲ್ಲಿ ಗರಿಷ್ಠ50+ಸಿಡಿಸಿದ ಸಾಧಕರು:
ರೋಹಿತ್ ಶರ್ಮಾ - 13
ಶೈ ಹೋಪ್ - 12
ವಿರಾಟ್ ಕೊಹ್ಲಿ - 11

click me!