KGF ಸ್ಟಾರ್ ಯಶ್ ಜೊತೆ ಪಾಂಡ್ಯ ಬ್ರದರ್ಸ್, ಕೆಜಿಎಫ್ 3 ಎಂದ ಕ್ರಿಕೆಟರ್ಸ್!

By Suvarna News  |  First Published Dec 29, 2022, 9:14 PM IST

ಭಾರತದಲ್ಲಿ ಕ್ರಿಕೆಟ್ ಹಾಗೂ ಸಿನಿಮಾಗೆ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಕ್ರಿಕೆಟಿಗರು ಹಾಗೂ ಸೆಲೆಬ್ರೆಟಿಗಳು ಮುಖಾಮುಖಿಯಾಗುವುದು ಹೊಸದೇನಲ್ಲ. ಆದರೆ ಈ ಬಾರಿ ರಾಕಿಂಗ್ ಸ್ಟಾರ್ ಯಶ್, ಟೀಂ ಇಂಡಿಯಾ ಕ್ರಿಕೆಟಿಗರಾದ ಪಾಂಡ್ಯ ಬ್ರದರ್ಸ್ ಜೊತೆ ಕಾಣಿಸಿಕೊಂಡಿದ್ದಾರೆ. 
 


ಮುಂಬೈ(ಡಿ.29): ಕೆಜಿಎಫ್ ಚಿತ್ರ ದೇಶ ವಿದೇಶಗಳಲ್ಲಿ ಭಾರಿ ಸದ್ದು ಮಾಡಿದ ಚಿತ್ರ. ಕನ್ನಡ ಚಿತ್ರರಂಗ ಮೂಲಕ ಯಶ್ ದೇಶವನ್ನೇ ಆಳಿದ ಚಿತ್ರ ಇದು. ಈ ಚಿತ್ರ ವೀಕ್ಷಿಸಿದ ಟೀಂ ಇಂಡಿಯಾ ಕ್ರಿಕೆಟಿಗರು ಫಿದಾ ಆಗಿದ್ದರು. ಹೀಗೆ ಕೆಜಿಎಫ್ ಚಿತ್ರವನ್ನು ಹೆಚ್ಚು ಇಷ್ಚಪಟ್ಟವರ ಪೈಕಿ ಟೀಂ ಇಂಡಿಯಾದ ಪಾಂಡ್ಯ ಬ್ರದರ್ಸ್ ಮುಂಚೂಣಿಯಲ್ಲಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ಸ್ಟಾರ್ ಹಾಗೂ ಟೀಂ ಇಂಡಿಯಾ ಸ್ಟಾರ್ಸ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ,  ಯಶ್ ಜೊತೆ ಕಾಣಿಸಿಕೊಂಡಿದ್ದಾರೆ. ಯಶ್ ಭೇಟಿಯಾಗಿರುವ ಫೋಟೋವನ್ನು ಸ್ವತಃ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಚ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಭಾರಿ ಮೆಚ್ಚುಗ ವ್ಯಕ್ತವಾಗಿದೆ.

ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ, ಇದು ಕೆಜಿಎಪ್ 3 ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಗಳ ಸುರಿಮಳೆ ವ್ಯಕ್ತವಾಗಿದೆ. ಕೆಜಿಎಫ್ 3ನೇ ಪಾರ್ಟ್ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಪಾಂಡ್ಯ ಬ್ರದರ್ಸ್ ಪೋಸ್ಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಇತ್ತ ಅಭಿಮಾನಿಗಳು ಕೂಡ ಕೆಜಿಎಫ್ 3 ಕುರಿತು ಕಮೆಂಟ್ ಮಾಡಿದ್ದಾರೆ.

Tap to resize

Latest Videos

Yash: ಬೇರೆ ಚಿತ್ರರಂಗಗಳ ಬಗ್ಗೆ ಹಗುರವಾಗಿ ಮಾತನಾಡಬಾರದು: ರಾಕಿಂಗ್ ಸ್ಟಾರ್ ಯಶ್

ಯಶ್‌ಗೆ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದರೆ. ಅದರಲ್ಲೂ ವಿಶೇಷವಾಗಿ ಮುಂಬೈನಲ್ಲಿ ಅಭಿಮಾನಿಗಳ ಸಂಖ್ಯೆ ತುಸು ಹೆಚ್ಚಿದೆ. ಟೀಂ ಇಂಡಿಯಾ ಕ್ರಿಕೆಟಿಗರೂ ಕೂಡ ಯಶ್‌ಗೆ ಫಿದಾ ಆಗಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೆಜಿಎಫ್ ಚಿತ್ರ ಸ್ಕ್ರೀನಿಂಗ್ ಮಾಡಲಾಗಿತ್ತು. ಈ ಚಿತ್ರ ವೀಕ್ಷಿಸಿದ್ದ ಹಾರ್ದಿಕ್ ಪಾಂಡ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲ ಯಶ್ ಅಭಿನಯ, ಸ್ಟೈಲ್‌ಗೆ ಮಾರು ಹೋಗಿದ್ದರು. ಇದೀಗ ಯಶ್ ಭೇಟಿಯಾಗಿರುವ ಪಾಂಡ್ಯ ಬ್ರದರ್ಸ್ ಸಂತಸ ಹಂಚಿಕೊಂಡಿದ್ದಾರೆ.

 

 

ಯಶ್ ಅಭಿನಯದ ಕೆಜಿಎಫ್ 1 ಬಿಡುಗಡೆಯಾಗಿ ಈಗಾಗಲೇ ನಾಲ್ಕು ವರ್ಷ ಸಂದಿದೆ. ಡಿ.21, 2018ರಂದು ಬಿಡುಗಡೆಯಾಗಿದ್ದ ಕೆಜಿಎಫ್‌ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ. ಇದಾದ ಬಳಿಕ ಕೆಜಿಎಪ್ 2 ದೇಶದ ಚಿತ್ರರಂಗ ಹಲವು ದಾಖಲೆಯನ್ನೇ ಪುಡಿ ಮಾಡಿತು. ಇಷ್ಟೇ ಅಲ್ಲ ಕನ್ನಡ ಚಿತ್ರವೊಂದು ದೇಶ ವಿದೇಶದಲ್ಲಿ ಗಳಿಕೆ ಸೇರಿದಂತೆ ಎಲ್ಲದರಲ್ಲೂ ಸಾಧನೆ ಮಾಡಿದೆ. ಕೆಜಿಎಪ್ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. 

ಲೆಕ್ಕಾಚಾರ ನೋಡಿದ್ರೆ ಕೆಜಿಎಫ್‌ ಬರೋವರೆಗೂ 'ರಾಮಚಾರಿ'ನೇ ನಂ 1: 8 ವರ್ಷ ಪೂರೈಸಿದ Mr & Mrs Ramachari

ಹಾರ್ದಿಕ್ ಪಾಂಡ್ಯಗೆ ನಾಯಕತ್ವ
ಮುಂದಿನ ವಾರ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ತವರಿನ ಟಿ20 ಸರಣಿಗೆ ನಿರೀಕ್ಷೆಯಂತೆಯೇ ಭಾರತ ತಂಡಕ್ಕೆ ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಟಿ20 ತಂಡದಲ್ಲಿ ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ ಸೇರಿದಂತೆ ಹಿರಿಯರಿಗೆ ಕೊಕ್‌ ನೀಡಲಾಗಿದ್ದು, ಹಲವು ಯುವ ಆಟಗಾರರು 16 ಮಂದಿಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಭೂತಪೂರ್ವ ಲಯದಲ್ಲಿರುವ ಸೂರ‍್ಯಕುಮಾರ್‌ ಟಿ20 ಸರಣಿಯಲ್ಲಿ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಇಶಾನ್‌ ಕಿಶನ್‌, ಋುತುರಾಜ್‌ ಗಾಯಕ್ವಾಡ್‌, ಶುಭ್‌ಮನ್‌ ಗಿಲ್‌ ತಂಡದಲ್ಲಿ ಸ್ಥಾನ ಪಡೆದಿದ್ದು, ರಾಹುಲ್‌ ತ್ರಿಪಾಠಿ ಹಾಗೂ ವಿಕೆಟ್‌ ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ಗೂ ಅವಕಾಶ ನೀಡಲಾಗಿದೆ. ಅಶ್‌ರ್‍ದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌ ಜೊತೆ ಯುವ ವೇಗಿಗಳಾದ ಶಿವಂ ಮಾವಿ, ಮುಖೇಶ್‌ ಕುಮಾರ್‌ ಮೊದಲ ಬಾರಿ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

click me!