
Rishabh Pant Injury Update: ನ್ಯೂಜಿಲೆಂಡ್ ಎದುರಿನ ಇಂಡಿಯಾ 'ಎ' ತಂಡದ ಸರಣಿಯ ಮೊದಲ ಎರಡು ಪಂದ್ಯಗಳಿಂದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಹೊರಬಿದ್ದಿದ್ದಾರೆ. ನ್ಯೂಜಿಲೆಂಡ್ ಎ ತಂಡದ ವಿರುದ್ಧ ಇಂಡಿಯಾ ಎ ಒಟ್ಟು ಮೂರು ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ. ಸೆಪ್ಟೆಂಬರ್‌ನಲ್ಲಿ ನಡೆದ ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸುವಾಗ ರಿಷಭ್ ಪಂತ್ ಗಾಯಗೊಂಡಿದ್ದರು. ಫಿಟ್‌ನೆಸ್ ಆಧಾರದ ಮೇಲೆ ಆಯ್ಕೆ ಸಮಿತಿ ಅವರನ್ನು ಮೊದಲು ತಂಡಕ್ಕೆ ಸೇರಿಸಿಕೊಂಡಿತ್ತು. ಇದೀಗ ಮೊದಲೆರಡು ಪಂದ್ಯಗಳಿಂದ ಪಂತ್ ಹೊರಗುಳಿದಿದ್ದಾರೆ.
ಸದ್ಯ ಬಿಸಿಸಿಐ ವೈದ್ಯಕೀಯ ತಂಡ ರಿಷಭ್ ಪಂತ್ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮೂರನೇ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಬೋರ್ಡ್ ಆಮೇಲೆ ನಿರ್ಧಾರ ತೆಗೆದುಕೊಳ್ಳಲಿದೆ. ನವೆಂಬರ್ 19 ರಿಂದ ಡಿಸೆಂಬರ್ 1 ರವರೆಗೆ ನಡೆಯಲಿರುವ ಭಾರತದ ಸೀನಿಯರ್ ಟೆಸ್ಟ್ ಸರಣಿಗೂ ಮುನ್ನ ಪಂತ್ ಗಾಯಗೊಂಡಿರುವುದು ಟೀಮ್ ಮ್ಯಾನೇಜ್‌ಮೆಂಟ್‌ಗೆ ಟೆನ್ಷನ್ ತಂದಿದೆ. ಆದರೆ, ಸೀನಿಯರ್ ತಂಡವನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ.
ರಿಷಭ್ ಪಂತ್ ಬದಲಿಗೆ 21 ವರ್ಷದ ಜಾರ್ಖಂಡ್ ವಿಕೆಟ್ ಕೀಪರ್-ಬ್ಯಾಟರ್ ಕುಮಾರ್ ಕುಶಾಗ್ರ ಅವರನ್ನು ಆಯ್ಕೆ ಸಮಿತಿ ಮೊದಲ ಎರಡು ಪಂದ್ಯಗಳಿಗೆ ಆರಿಸಿದೆ. ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಮತ್ತು ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಸಿಡಿಸಿರುವ ಕುಶಾಗ್ರ ಸಖತ್ ಫಾರ್ಮ್‌ನಲ್ಲಿದ್ದಾರೆ. ಇಂಡಿಯಾ ಎ ತಂಡದ ಕ್ಯಾಪ್ಟನ್ ಆಗಿ ಧ್ರುವ್ ಜುರೆಲ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಮೊದಲ ಪಂದ್ಯ: ಅಕ್ಟೋಬರ್ 24-27, ಲಿಂಕನ್
ಎರಡನೇ ಪಂದ್ಯ: ಅಕ್ಟೋಬರ್ 31-ನವೆಂಬರ್ 3, ಕ್ರೈಸ್ಟ್‌ಚರ್ಚ್
ಮೂರನೇ ಪಂದ್ಯ: ನವೆಂಬರ್ 7-10, ಲಿಂಕನ್.
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ರವಿಚಂದ್ರನ್ ಸ್ಮರಣ್, ಧ್ರುವ್ ಜುರೆಲ್ (ಕ್ಯಾಪ್ಟನ್/ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆಕಿಬ್ ನಬಿ, ಆಕಾಶ್ ದೀಪ್, ಅಂಶುಲ್ ಕಾಂಬೋಜ್, ಮಾನವ್ ಸುತಾರ್, ಮುಖೇಶ್ ಚೌಧರಿ, ಸಾಯಿ ಸುದರ್ಶನ್, ಯಶ್ ರಾಥೋಡ್, ಮುಖೇಶ್ ಕುಮಾರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್).
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.