* ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ
* ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಿಷಭ್ ಪಂತ್ ಭಾರತ ತಂಡದಲ್ಲಿ ಸ್ಥಾನ ಪಡೆಯೋದು ಡೌಟ್
* ಅಪಘಾತದ ಬಳಿಕ ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಪಂತ್
ಬೆಂಗಳೂರು(ಜು.11) ರಿಷಭ್ ಪಂತ್, ಟೀಂ ಇಂಡಿಯಾದ ಈ ಯಂಗ್ ಡೈನಾಮಿಕ್ ಪ್ಲೇಯರ್, ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ರಿಷಭ್ ಪಂತ್ ಬದುಕುಳಿದಿದ್ದೇ ಹೆಚ್ಚು. ಅಪಘಾತದ ನಂತರ ಆಸ್ಪತ್ರೆಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದು , ಸದ್ಯ ಚೇತರಿಸಿಕೊಳ್ತಿದ್ದಾರೆ.
ಬೆಂಗಳೂರಿನ NCAನಲ್ಲಿ ಬೀಡು ಬಿಟ್ಟಿರೋ ಪಂತ್, ಹೈಸ್ಪೀಡ್ನಲ್ಲಿ ರಿಕವರಿ ಆಗ್ತಿದ್ದಾರೆ. ರಿಷಭ್ ಪಂತ್(Rishabh Pant) ರಿಕವರಿ ಕಂಡು NCA ಫಿಟ್ನೆಸ್ ಟ್ರೈನರ್ಸ್ ಶಾಕ್ ಆಗಿದ್ದಾರೆ. ಪಂತ್ ಆದಷ್ಟು ಬೇಗ ರೆಡಿಯಾದ್ರೆ, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಸಬೇಕನ್ನೋದು BCCI ಪ್ಲಾನ್ ಆಗಿತ್ತು. ಆದ್ರೆ, ಫುಲ್ ಫಿಟ್ ಆಗೋಕೆ ಇನ್ನು ಟೈಮ್ ಹಿಡಿಯಲಿದೆ. ಇದರಿಂದ ಏಕದಿನ ವಿಶ್ವಕಪ್ ಟೂರ್ನಿಯನ್ನೂ ಪಂತ್ ಮಿಸ್ ಮಾಡಿಕೊಳ್ಳಲಿದ್ದಾರೆ. ಹೀಗಾದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ.
ODI World Cup 2023: ಈಡನ್ ಗಾರ್ಡನ್ಸ್ ಪಂದ್ಯಗಳ ಟಿಕೆಟ್ ಬೆಲೆ ಪ್ರಕಟ..! IPL ಗಿಂತ ವಿಶ್ವಕಪ್ ಟಿಕೆಟ್ ಚೀಪ್
2024ರ T20 ವಿಶ್ವಕಪ್ ವೇಳೆಗೆ ಪಂತ್ ಫುಲ್ ಫಿಟ್..!
ಹೌದು, ಈ ವರ್ಷ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ(ICC ODI World Cup 2023) ರಿಷಭ್ ಪಂತ್ ಆಡಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಇದರಿಂದ ಟೀಂ ಇಂಡಿಯಾಗೆ ದೊಡ್ಡ ನಷ್ಟವಾಗಲಿದೆ. ಆದ್ರೆ, ವಿಶ್ವಕಪ್ ಮುಗಿದ ಬಳಿಕ ಪಂತ್ ಸಂಪೂರ್ಣ ಗುಣಮುಖರಾಗಲಿದ್ದಾರೆ. ಮುಂದಿನ ವರ್ಷ ನಡೆಯುವ T20 ವಿಶ್ವಕಪ್ ವೇಳೆಗೆ ಪಂತ್ ಮತ್ತೆ ಬ್ಯಾಟ್ ಹಿಡಿದು ಫೀಲ್ಡ್ಗಿಳಿಯಲಿದ್ದಾರೆ ಎನ್ನಲಾಗಿದೆ. ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಡೈರೆಕ್ಟರ್ ಶ್ಯಾಮ್ ಶರ್ಮಾ ಪ್ರಕಾರ, ಪಂತ್, ಏಕದಿನ ವಿಶ್ವಕಪ್ ಬಳಿಕ ಭಾರತ ತಂಡ ಕೂಡಿಕೊಳ್ಳಬಹುದು ಎಂದಿದ್ದಾರೆ.
ರಿಷಭ್ ಪಂತ್ ನಿಂದ ಆರ್ಚರ್‌ವರೆಗೆ: ಈ ಸ್ಟಾರ್ ಕ್ರಿಕೆಟಿಗರು ಏಕದಿನ ವಿಶ್ವಕಪ್ ಆಡೋದು ಡೌಟ್..!
ರಿಷಭ್ ಪಂತ್ ಅದ್ಭುತ ಎನ್ನುವಂತೆ ವೇಗವಾಗಿ ಚೇತರಿಸಿಕೊಳ್ತಿದ್ದಾರೆ. ಆದ್ರೆ, ಈ ಹಂತದಲ್ಲಿ ಯಾವಾಗ ಕಮ್ಬ್ಯಾಕ್ ಮಾಡ್ತಾರೆ ಅಂತ ಹೇಳೋದು ಕಷ್ಟ. ಇನ್ನು 3 ತಿಂಗಳಾಗಬಹುದು ಅಥವಾ 6 ತಿಂಗಳಾಗಬಹುದು. ಪಂತ್ ಚೇತರಿಕೆ ಪ್ರಕ್ರಿಯೆ ನಿಧಾನವಾದಷ್ಟು ಒಳ್ಳೆಯದು. ಪಂತ್ ಯುವ ಆಟಗಾರನಾಗಿದ್ದಾನೆ. ಹಾಗಂತ, ಯಾವುದನ್ನೂ ಅವಸರದಲ್ಲಿ ಮಾಡಲು ಸಾಧ್ಯವಿಲ್ಲ ಅಂತ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸದ್ಯ ಅಪಘಾತದ ಬಳಿಕ ರಿಷಭ್ ಪಂತ್, ಭಾರತದಲ್ಲೇ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹೀಗೆ ಹಲವು ಪ್ರಮುಖ ಟೂರ್ನಿಗಳಿಂದ ಹೊರಗುಳಿದಿದ್ದರು. ಇನ್ನು ರಿಷಭ್ ಪಂತ್ ಅನುಸ್ಥಿತಿಯಲ್ಲಿ ಕೆ ಎಸ್ ಭರತ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲವಾಗಿದ್ದಾರೆ. ಹೀಗಾಗಿ ಭಾರತ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಜುಲೈ 12ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿಯಲ್ಲಿ ಕೆ ಎಸ್ ಭರತ್ ಬದಲಿಗೆ ಇಶಾನ್ ಕಿಶನ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಟೀಂ ಇಂಡಿಯಾಗೆ ಕಾಡ್ತಿದೆ ಪಂತ್ ಅಲಭ್ಯತೆ
ಯೆಸ್, ಟೀಂ ಇಂಡಿಯಾಗೆ ರಿಷಭ್ ಪಂತ್ ಅಲಭ್ಯತೆ ಇನ್ನಿಲ್ಲದಂತೆ ಕಾಡ್ತಿದೆ. ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಇದು ಸಾಬೀತಾಗಿದೆ. ಇನ್ನು ಈಗಾಗ್ಲೇ 2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಿದೆ. WTC ಟೂರ್ನಿಯಲ್ಲಿ ಟೀಂ ಇಂಡಿಯಾ ಈ ವರ್ಷದ ಕೊನೆಯಲ್ಲಿ ಸೌತ್ ಆಫ್ರಿಕಾ ಮತ್ತು ಮಂದಿನ ವರ್ಷ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗಳನ್ನ ಆಡಲಿದೆ. ಈ ಎರಡೂ ಮಹತ್ವದ ಸರಣಿಗಳಿಂದಲೂ ಪಂತ್ ಹೊರಗುಳಿಯಲಿದ್ದಾರೆ. ಅದೇನೆ ಇರಲಿ, ಪಂತ್ ಆದಷ್ಟು ಬೇಗ ಗುಣಮುಖರಾಗಿ, ತಂಡಕ್ಕೆ ಕಮ್ಬ್ಯಾಕ್ ಮಾಡಲಿ ಅನ್ನೋದೆ ಎಲ್ಲರ ಆಶಯವಾಗಿದೆ.