ಲಂಡನ್‌ನಲ್ಲಿ ವಿರಾಟ್- ಅನುಷ್ಕಾ ಜೋಡಿ ಮೋಜು ಮಸ್ತಿ; ಕಾಫಿ ವಾಕ್‌ ವಿಡಿಯೋ ವೈರಲ್!

Published : Jul 11, 2023, 12:30 PM IST
 ಲಂಡನ್‌ನಲ್ಲಿ ವಿರಾಟ್- ಅನುಷ್ಕಾ ಜೋಡಿ ಮೋಜು ಮಸ್ತಿ; ಕಾಫಿ ವಾಕ್‌ ವಿಡಿಯೋ ವೈರಲ್!

ಸಾರಾಂಶ

ಪತ್ನಿ ಅನುಷ್ಕಾ ಶರ್ಮಾ ಜತೆಗೆ ಲಂಡನ್ ಬೀದಿಯಲ್ಲಿ ವಿರಾಟ್ ಕೊಹ್ಲಿ ಓಡಾಟ ಲಂಡನ್ ಬೀದಿಗಳಲ್ಲಿ ವಿರುಷ್ಕಾ ಜೋಡಿ ಬಿಂದಾಸ್ ಸುತ್ತಾಟ; ಸಾಥ್‌ ಕೊಟ್ಟ ಮಗಳು ವಾಮಿಕಾ ಲಂಡನ್ ಬೀದಿಗಳಲ್ಲಿ ಅನುಷ್ಕಾ ಫೋಟೋ ತೆಗೆಯೋದ್ರಲ್ಲಿ ಬ್ಯುಸಿ ಆದ್ರು ಕೊಹ್ಲಿ!

ಲಂಡನ್‌(ಜು.11): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಜಗತ್ತಿನ ಪ್ರಖ್ಯಾತ ಸೆಲಿಬ್ರಿಟಿ ಜೋಡಿ ಎನಿಸಿಕೊಂಡಿದೆ. ಈ ಜೋಡಿಯನ್ನು ವಿರುಷ್ಕಾ ಜೋಡಿ ಎಂದೇ ಸಾಮಾನ್ಯವಾಗಿ ಕರೆಯಲಾಗುತ್ತದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಕ್ತಾಯದ ಬಳಿಕ ಬರೋಬ್ಬರಿ ಒಂದು ತಿಂಗಳು ಬಿಡುವು ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ, ತಮ್ಮ ಪತ್ನಿಯ ಜತೆ ಲಂಡನ್‌ಗೆ ರಜಾ ದಿನ ಎಂಜಾಯ್‌ ಮಾಡಲು ತೆರೆಳಿದ್ದರು. ಇದೀಗ ಅನುಷ್ಕಾ ಶರ್ಮಾ, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಪತ್ನಿಯ ವಿಡಿಯೋ ಸೆರೆ ಹಿಡಿಯುವುದರಲ್ಲಿ ವಿರಾಟ್ ಕೊಹ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಈ ವಿಡಿಯೋ ಜತೆ ಅನುಷ್ಕಾ ಶರ್ಮಾ, ಮೇಜರ್ ಮಿಸ್ಸಿಂಗ್, ಲಂಡನ್ ಸಿಟಿ & ಮತ್ತು ಕಾಫಿ ನಡಿಗೆ. ಕೊನೆಯ ಬಾರಿ ಕುಡಿದ ಆ ಕಾಫಿ ಬಹಳ ಕಾಲ ನೆನಪಿನಲ್ಲಿರಲಿದೆ ಎಂದು ಬರೆದುಕೊಂಡಿದ್ದಾರೆ. 

ಈ ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಕ್ಯಾಸ್ಯೂಯಲ್ ಡೇನಿಮ್‌ ಡ್ರೆಸ್‌ ತೊಟ್ಟು ಬಿಂದಾಸ್ ಆಗಿ ಲಂಡನ್ ಬೀದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಕೈಯಲ್ಲಿ ಒಂದು ಕಪ್ ಕಾಫಿ ಹಿಡಿದುಕೊಂಡು ಅನುಷ್ಕಾ ಶರ್ಮಾ, ಟ್ರೈನ್ ಹಾಗೂ ರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡಿದ್ದಾರೆ. ಇನ್ನು ಪತಿ ವಿರಾಟ್ ಕೊಹ್ಲಿ, ಮಡದಿ ಅನುಷ್ಕಾ ಶರ್ಮಾ ಅವರ ಮುದ್ದಾದ ವಿಡಿಯೋ ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದ್ದರು. ಇನ್ನು ಇದೇ ವೇಳೆ ವಿರಾಟ್ ಕೊಹ್ಲಿ ಸ್ಟೋಲರ್‌ನಲ್ಲಿ ಮಗಳು ವಮಿಕಾಳನ್ನು ಕೂರಿಕೊಂಡು ಲಂಡನ್ ರಸ್ತೆಗಳಲ್ಲಿ ಓಡಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿರುಷ್ಕಾ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇನ್ನು ಅನುಷ್ಕಾ ಶರ್ಮಾ, ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ಒಬ್ಬ ಅಭಿಮಾನಿ, ಫೋಟೋಗ್ರಾಫರ್ ಮಿಸ್ ಮಾಡಿಕೊಳ್ಳುತ್ತಿಲ್ಲ ತಾನೆ? ಎಂದು ಪ್ರಶ್ನಿಸಿದ್ದಾನೆ. ಇನ್ನೊಬ್ಬ ಅಭಿಮಾನಿ ವಿರುಷ್ಕಾ ಮುದ್ದಾದ ಜೋಡಿ ಎಂದು ಕಾಮೆಂಟ್ ಮಾಡಿದ್ದಾನೆ. ಮತ್ತೋರ್ವ ಅಭಿಮಾನಿ, ಅತ್ಯಂತ ದುಬಾರಿ ಹಾಗೂ ಜನಪ್ರಿಯ ಫೋಟೋಗ್ರಾಫರ್ ಎಂದು ಕಾಮೆಂಟ್ ಮಾಡಿದ್ದಾರೆ.

ODI World Cup 2023: ಈಡನ್‌ ಗಾರ್ಡನ್ಸ್‌ ಪಂದ್ಯಗಳ ಟಿಕೆಟ್‌ ಬೆಲೆ ಪ್ರಕಟ..! IPL ಗಿಂತ ವಿಶ್ವಕಪ್ ಟಿಕೆಟ್ ಚೀಪ್

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಹಲವು ವರ್ಷಗಳ ಡೇಟಿಂಗ್‌ ಬಳಿಕ ಡಿಸೆಂಬರ್ 11, 2017ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಾದ ಬಳಿಕ ಈ ಜೋಡಿ ಜಗತ್ತಿನ ಅತ್ಯಂತ ಜನಪ್ರಿಯ ಹಾಗೂ ಮುದ್ದಾದ ಜೋಡಿ ಎನಿಸಿಕೊಂಡಿದೆ. ಇನ್ನು ಸುಂದರ ಜೋಡಿಯ ದಾಂಪತ್ಯ ಜೀವನಕ್ಕೆ ಜನವರಿ 11, 2021ರಲ್ಲಿ ವಾಮಿಕಾ ಎನ್ನುವ ಮುದ್ದಾದ ಮಗಳ ಆಗಮನವಾಯಿತು. ಸದ್ಯ ವಿರಾಟ್ ಕೊಹ್ಲಿ ಕಳೆದ ತಿಂಗಳು ಲಂಡನ್‌ನ ದಿ ಓವಲ್ ಮೈದಾನದಲ್ಲಿ ವೆಸ್ಟ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನಾಡಲು ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿದಿದ್ದರು. ಆ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು.

ಇದೀಗ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಜುಲೈ 12ರಿಂದ ಭಾರತ ತಂಡವು ವೆಸ್ಟ್ ಇಂಡೀಸ್ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ವಿರಾಟ್ ಕೊಹ್ಲಿ ಭಾರತ ಟೆಸ್ಟ್ ಹಾಗೂ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಟಾಪ್ 10 ಸೆಕ್ಸಿ ಕ್ರಿಕೆಟಿಗರಿವರು..!

ಇನ್ನು ಮತ್ತೊಂದೆಡೆ ಅನುಷ್ಕಾ ಶರ್ಮಾ, ಭಾರತದ ಮಾಜಿ ಮಹಿಳಾ ಕ್ರಿಕೆಟರ್ ಜೂಲನ್ ಗೋಸ್ವಾಮಿ ಜೀವನಾಧಾರಿತ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ನಟಿಸಿದ್ದು, ಸದ್ಯದಲ್ಲಿಯೇ ಎಕ್ಸ್‌ಕ್ಲೂಸಿವ್ ಆಗಿ ನೆಟ್‌ಫ್ಲಿಕ್ಸ್ ಫ್ಲಾಟ್‌ಫಾರ್ಮ್‌ನಲ್ಲಿ ಪ್ರವಾರವಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!