ಮೊದಲ ಟಿ20 ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಗಂಗೂಲಿ ನೀಡಿದ್ರು ಶಾಕ್!

By Web Desk  |  First Published Dec 6, 2019, 3:31 PM IST

ಹೈದರಾಬಾದ್‌ನಲ್ಲಿ ಆಯೋಜಿಸಿರುವ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಅಂತಿಮ ತಯಾರಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಗಂಗೂಲಿಗೆ ಶಾಕ್ ನೀಡಿದ್ದಾರೆ.


ಹೈದರಾಬಾದ್(ಡಿ.06): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕೆಲವೇ ಹೊತ್ತಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಹೈದರಾಬಾದ್ ಟಿ20 ಪಂದ್ಯ ಆರಂಭಗೊಳ್ಳಲಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ, ಮೊದಲ ಟಿ20 ಪಂದ್ಯಕ್ಕೆ ತಂಡದ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಪಂದ್ಯಕ್ಕೂ ಮುನ್ನ ಕೊಹ್ಲಿಗೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶಾಕ್ ನೀಡಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವ​ಕಪ್‌ಗೆ ಮೂವರು ವೇಗಿಗಳು ಫಿಕ್ಸ್, ಮತ್ತೊಬ್ಬ ಯಾರು..?

Tap to resize

Latest Videos

undefined

ಮೊದಲ ಟಿ20 ಪಂದ್ಯಕ್ಕೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ತಂಡದ ನಿರ್ಧಾರಗಳನ್ನು ಬಹಿರಂಗ ಪಡಿಸಿದ್ದರು. ಈ ವೇಳೆ ರಿಷಬ್ ಪಂತ್‍‌ಗೆ ಹೆಚ್ಚಿನ ಅವಕಾಶ ನೀಡೋ ಕುರಿತು ಮಾತನಾಡಿದ್ದಾರೆ. ಇಷ್ಟೇ ಅಲ್ಲ ಕಳಪೆ ಪ್ರದರ್ಶನ ನೀಡುತ್ತಿರುವ ಪಂತ್‌ಗೆ ಅಭಿಮಾನಿಗಳ ಬೆಂಬಲ ಬೇಕಿದೆ. ಧೋನಿ, ಧೋನಿ  ಎಂದು ಕೂಗಿ ಪಂತ್ ಅಣಕಿಸುವ ಬದಲು, ಪಂತ್‌ಗೆ ಸಪೂರ್ಟ್ ಮಾಡಿ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಹೇಳಿಕೆಗೆ ಗಂಗೂಲಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಟ್ರೋಲ್; ಗರಂ ಆದ ವಿರಾಟ್ ಕೊಹ್ಲಿ!.

ಪಂತ್ ಕಣಕ್ಕಿಳಿದಾದ ಧೋನಿ, ಧೋನಿ ಕೂಗುತ್ತಿದ್ದರೆ ಕೂಗಲಿ. ನಾನು ಕೊಹ್ಲಿಯ ಸ್ಥಾನದಲ್ಲಿದ್ದರೆ ಪಂತ್ ಅವಕಾಶ ನೀಡುತ್ತಿದೆ. ಆದರೆ ಅಭಿಮಾನಿಗಳು ಕೂಗು ನಿಲ್ಲಿಸಲು ಹೇಳಲ್ಲ. ಪಂತ್ ಇದೇ ಕೂಗು ಕೇಳಿಸಿಕೊಂಡು ಯಶಸ್ಸು ಕಾಣಲು ದಾರಿ ಹುಡುಕಬೇಕು. ಎಲ್ಲರೂ ಧೋನಿಯಾಗಲು ಸಾಧ್ಯವಿಲ್ಲ. ಪ್ರತಿ ದಿನ ಟೀಂ ಇಂಡಿಯಾಗೆ ಧೋನಿ ಸಿಗುವುದಿಲ್ಲ ಎಂದು ಗಂಗೂಲಿ, ಕೊಹ್ಲಿಗೆ ತಿರುಗೇಟು ನೀಡಿದ್ದಾರೆ. 

ಇದನ್ನೂ ಓದಿ: ಆಯ್ಕೆ ಸಮಿತಿ ಅಧಿಕಾರ ಅವಧಿ ವಿಸ್ತರಣೆ ಇಲ್ಲ; MSK ಟೀಂಗೆ ಗಂಗೂಲಿ ಶಾಕ್!

ಆಯ್ಕೆ ಸಮಿತಿಯಿಂದ ಹಿಡಿದು, ನಾಯಕ ವಿರಾಟ್ ಕೊಹ್ಲಿವರೆಗೂ ರಿಷಬ್ ಪಂತ್‌ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ಪಂತ್ ಕಳಪೆ ಪ್ರದರ್ಶನ ನೀಡುತ್ತಿದ್ದರೂ, ಮತ್ತೆ ಮತ್ತೆ ಅವಕಾಶ ನೀಡೋ ಮೂಲಕ ಇತರ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ಅವಕಾಶ ಕಿತ್ತಿಕೊಳ್ಳುತ್ತಿದ್ದಾರೆ.

click me!