ಬಿಜೆಪಿ ಸಂಸದ , ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕ್ರಿಕೆಟಿಗನಾದ ಬಳಿಕ ರಾಜಕೀಯ ಮುಖಂಡನಾದ ಗಂಭೀರ್ ಇದೀಗ ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ತಂಡ ಖರೀದಿಸಲು ಗಂಭೀರ್ ಮುಂದಾಗಿದ್ದಾರೆ.
ನವದೆಹಲಿ(ಡಿ.06): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿದಾಯ ಹೇಳಿದ ಬೆನ್ನಲ್ಲೇ ರಾಜಕೀಯ ಪ್ರವೇಶಿಸಿ ಯಶಸ್ವಿಯಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಗೌತಮ್ ಗಂಭೀರ್ ಭರ್ಜರಿ ಗೆಲುವಿನೊಂದಿಗೆ ಸಂಸದನಾಗಿದ್ದಾರೆ. ಇದೀಗ ಗಂಭೀರ್ ಮತ್ತೊಂದು ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಐಪಿಎಲ್ ಫ್ರಾಂಚೈಸಿಯ ಸಹ ಮಾಲೀಕನಾಗಲು ಗಂಭೀರ್ ಮುಂದಾಗಿದ್ದಾರೆ.
ಇದನ್ನೂ ಓದಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗಂಭೀರ್ ಸ್ಟ್ಯಾಂಡ್ ಅನಾವರಣ!
undefined
ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 2 ಬಾರಿ ಪ್ರಶಸ್ತಿ ಗೆಲ್ಲಿಸಿಕೊಟ್ಟ ಗಂಭೀರ್, 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದರು. ಆದರೆ ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಬಿದ್ದ ಗಂಭೀರ್ ವಿದಾಯ ಹೇಳಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಮಾಲೀಕನಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಶೇಕಡಾ 10 ರಷ್ಟು ಪಾಲು ಖರೀದಿಸಲು ಗಂಭೀರ್ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸದಾ ಟೀಕಿಸುತ್ತಿದ್ದ ಕೊಹ್ಲಿಯನ್ನು ಹೊಗಳಿದ ಗಂಭೀರ್!
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ GMR ಗ್ರೂಪ್ ಶಕೇಡಾ 50 ಹಾಗೂ JSW ಗ್ರೂಪ್ ಶೇಕಡಾ 50 ಬಂಡವಾಳ ಹೊಡಿಕೆ ಮಾಡಿದೆ. GMR ಗ್ರೂಪ್‌ನಿಂದ JSW ಗ್ರೂಪ್ ಬರೋಬ್ಬರಿ 550 ಕೋಟಿ ರೂಪಾಯಿ ನೀಡಿ ಶೇಕಡಾ 50 ರಷ್ಟು ಪಾಲು ಖರೀದಿಸಿತ್ತು. ಇದೀಗ ಗಂಭೀರ್ GMR ಗ್ರೂಪ್‌ನಿಂದ ಶೇಕಾಡ 10 ರಷ್ಟು ಪಾಲು ಖರೀದಿಸಲು ಗಂಭೀರ್ ಮಾತುಕತೆ ನಡೆಸಿದ್ದಾರೆ. 100 ಕೋಟಿ ರೂಪಾಯಿ ನೀಡಿ ಶೇಕಡಾ 10 ರಷ್ಟು ಪಾಲು ಹೊಂದಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಯುವರಾಜ್‌ಗಾಗಿ ಜರ್ಸಿ ನ.12ಕ್ಕೆ ವಿದಾಯ ಹೇಳಿ; BCCIಗೆ ಗಂಭೀರ್ ನುಡಿ!
GMR ಗ್ರೂಪ್ ಜೊತೆ ಗಂಭೀರ್ ಮಾತುಕತೆ ಪೂರ್ಣಗೊಂಡಿದೆ. ಇದೀಗ ಐಪಿಎಲ್ ಗರ್ವನಿಂದ್ ಕೌನ್ಸಿಲ್‌ಗೆ ಮನವಿ ಸಲ್ಲಿಸಲಾಗಿದೆ. ಬಿಸಿಸಿಐ ಗ್ರೀನ್ ಸಿಗ್ನಿಲ್ ಸಿಕ್ಕದ ಬೆನ್ನಲ್ಲೇ ಗಂಭೀರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರಾಗಿ ಬಡ್ತಿ ಪಡೆಯಲಿದ್ದಾರೆ.