ರಿಂಕು ಸಿಂಗ್ IPLನಲ್ಲೇ ತಮ್ಮ ತಾಕತ್ನನ ಪ್ರದರ್ಶಿಸಿದ್ರು. KKR ಪರ ಆಡೋ ರಿಂಕು, ಡೆತ್ ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಧೂಳೆಬ್ಬಿಸಿದ್ರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ರು.
ಬೆಂಗಳೂರು(ನ.25): ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಸಿಕ್ಸ್ ಸಿಡಿಸಿ, ತಂಡಕ್ಕೆ ಗೆಲುವನ್ನಷ್ಟೇ ತಂದಕೊಡಲಿಲ್ಲ. ಅದರ ಜೊತೆಗೆ ತಂಡದ ಹಲವು ವರ್ಷಗಳ ಕೊರತೆಯನ್ನ ನೀಗಿಸುವ ಭರವಸೆ ಮೂಡಿಸಿದ್ದಾನೆ. ಅಷ್ಟಕ್ಕೂ ಆ ಕೊರತೆ ಏನು..? ರಿಂಕು ಮೂಡಿಸಿದ ಭರವಸೆಯಾದ್ರೂ ಏನು ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಟೀಂ ಇಂಡಿಯಾಗೆ ಸಿಕ್ಕ ನಯಾ ಫಿನಿಶರ್..!
undefined
ಯೆಸ್, ಕೆಲ ವರ್ಷಗಳಿಂದ ಟೀಂ ಇಂಡಿಯಾಗೆ ಬ್ಯಾಟಿಂಗ್‌ನಲ್ಲಿ ಪರ್ಫೆಕ್ಟ್ ಫಿನಿಶರ್ ಕೊರತೆ ಕಾಡ್ತಿತ್ತು. T20ಯಲ್ಲಿ ಈ ಹಿಂದೆ ಹಾರ್ದಿಕ್ ಪಾಂಡ್ಯ ಫಿನಿಶರ್ ರೋಲ್ ನಿಭಾಯಿಸ್ತಿದ್ರು. ಆದ್ರೆ, ಹಾರ್ದಿಕ್ ಪದೇ ಪದೇ ಇಂಜುರಿಗೊಳಗಾಗಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಅಲ್ಲದೇ, ತಂಡದಲ್ಲಿದ್ರೂ ಹೆಚ್ಚಾಗಿ ಟಾಪ್ ಆರ್ಡರ್ನಲ್ಲಿ ಪಾಂಡ್ಯ ಬ್ಯಾಟ್ ಬೀಸ್ತಿದ್ದಾರೆ. ಇದರಿಂದ ಡೆತ್ ಓವರ್ಗಳಲ್ಲಿ ಪವರ್ಫುಲ್ ಹಿಟ್ಟಿಂಗ್ ಮೂಲಕ ಅಬ್ಬರಿಸೋ ಫಿನಿಶರ್ ತಂಡಕ್ಕೆ ಬೇಕಾಗಿತ್ತು. ಆದ್ರೀಗ, ರಿಂಕು ಹೊಸ ಫಿನಿಶರ್ ಆಗೋ ಭರವಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ T20 ಪಂದ್ಯದಲ್ಲೇ ರಿಂಕು ಇದನ್ನು ಸಾಬೀತುಪಡಿಸಿದ್ದಾರೆ.
'ತಲೆ ಮೇಲೆ ಇಟ್ಟು ಕೊಳ್ಳಬೇಕಾದ ವಿಶ್ವಕಪ್ ಟ್ರೋಫಿ ಮಿಚೆಲ್ ಕಾಲ ಕೆಳಗಿದ್ದಿದ್ದು ನೋಡಿ ನೋವಾಯಿತು': ಶಮಿ
ಟೀಂ ಇಂಡಿಯಾಗೆ ಗೆಲ್ಲಲು ಕೊನೆಯ ಓವರ್ನಲ್ಲಿ 6 ಬಾಲ್ಗಳಲ್ಲಿ 7 ರನ್ ಬೇಕಾಗಿತ್ತು. ಕೈಯಲ್ಲಿನ್ನು 5 ವಿಕೆಟ್ ಇದ್ವು. ಆದ್ರೆ, ಪಟಪಟನೇ ಮೂರು ವಿಕೆಟ್‌ಗಳು ಉದುರಿದ್ವು. ಇದ್ರಿಂದ ಕೊನೆಯ ಬಾಲ್ನಲ್ಲಿ ಕೇವಲ 1 ರನ್ ಬೇಕಾಯ್ತು. ಈ ಹಂತದಲ್ಲಿ ರಿಂಕು ಸಿಂಗ್, ಶಾನ್ ಅಬಾಟ್ ಎಸೆತದಲ್ಲಿ ಅದ್ಭುತ ಸಿಕ್ಸ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ರು. ಆ ಮೂಲಕ ತಾವೊಬ್ಬ ಬೆಸ್ಟ್ ಫಿನಿಶರ್ ಅನ್ನೋದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ರು. 6ನೇ ಕ್ರಮಾಂಕದಲ್ಲಿ ಕ್ರೀಸ್ಗಿಳದಿದ್ದ ರಿಂಕು 14 ಎಸೆತಗಳಲ್ಲಿ 4 ಫೋರ್ ಸಹಿತ 22 ರನ್ ಬಾರಿಸಿದ್ರು.
ಯೆಸ್, ರಿಂಕು ಸಿಂಗ್ IPLನಲ್ಲೇ ತಮ್ಮ ತಾಕತ್ತನ್ನು ಪ್ರದರ್ಶಿಸಿದ್ರು. KKR ಪರ ಆಡೋ ರಿಂಕು, ಡೆತ್ ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಧೂಳೆಬ್ಬಿಸಿದ್ರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ರು.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕುವಿನ ಎಕ್ಸ್ಟ್ರಾರ್ಡಿನರಿ ಬ್ಯಾಟಿಂಗ್‌ಗೆ ಫ್ಯಾನ್ಸ್ ಮತ್ತು ಮಾಜಿ ಕ್ರಿಕೆಟರರ್ಸ್ ಸ್ಟನ್ ಆಗಿದ್ರು. ಈ ಒಂದು ಇನ್ನಿಂಗ್ಸ್ ಸಾಕು ರಿಂಕು ಎಂತಹ ಗ್ರೇಟ್ ಬ್ಯಾಟ್ಸ್ಮನ್ ಅಂತ ಹೇಳೋದಕ್ಕೆ...! ಇದೊಂದೆ ಅಲ್ಲ, ಹಲವು ಪಂದ್ಯಗಳಲ್ಲಿ ರಿಂಕು ತಂಡದ ಗೆಲುವಿಗಾಗಿ ಒಂಟಿಯಾಗಿ ಹೋರಾಡಿದ್ರು.
ಲೆಜೆಂಡ್ ಕ್ರಿಕೆಟರ್ ಆದಮೇಲೆ ಕೊಹ್ಲಿ ಹೆಗಲೇರಿದೆಯಾ ಬ್ಯಾಡ್‌ಲಕ್?
ಈ ವರ್ಷದ IPLನಲ್ಲಿ ರಿಂಕು ಬರೋಬ್ಬರಿ 29 ಸಿಕ್ಸರ್ಗಳನ್ನ ಸಿಡಿಸಿದ್ದಾರೆ. ಅಷ್ಟೇ ಅಲ್ಲ, ಗರಿಷ್ಟ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಟಾಪ್-3ನಲ್ಲಿದ್ದಾರೆ. ಇದೇ ಕಾರಣಕ್ಕೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ರಿಂಕುಗೆ ಅವಕಾಶ ನೀಡಲಾಯ್ತು. ಆದ್ರೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಮಾತ್ರ ಅವಕಾಶ ಸಿಗಲಿಲ್ಲ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಿಕ್ಕ ಅವಕಾಶದಲ್ಲಿ ರಿಂಕು ಮಿಂಚಿದ್ರು. ಏಷ್ಯನ್ ಗೇಮ್ಸ್ನಲ್ಲೂ ಹೆಚ್ಚಿಗೆ ಬ್ಯಾಟಿಂಗ್ ಮಾಡೋ ಚಾನ್ಸ್ ಸಿಗಲಿಲ್ಲ. ಆದ್ರೆ, ಆಸ್ಟ್ರೇಲಿಯಾ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಮ್ಯಾಚ್ ಫಿನಿಶ್ ಮಾಡಿ ಹೀರೊ ಪಟ್ಟ ಅಲಂಕರಿಸಿದ್ರು.
ರಿಂಕು ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಆರ್ಭಟಿಸಿದ್ರೆ, ಮುಂದಿನ ವರ್ಷ ನಡೆಯೋ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಫಿಕ್ಸ್. ಇದ್ರಲ್ಲಿ ಯಾವುದೇ ಅನುಮಾನ ಬೇಡ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್