
ಲಕ್ನೋ (ಏ.3): ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡದ ವಿರುದ್ಧ 12 ರನ್‌ಗಳ ಸೋಲು ಕಂಡಿದೆ. ಪಂದ್ಯ ಮುಗಿಯಲು ಇನ್ನೇನು 7 ಎಸೆತಗಳು ಬಾಕಿ ಇರುವಂತೆ ಕ್ರೀಸ್‌ನಲ್ಲಿದ್ದ ತಿಲಕ್ ವರ್ಮರನ್ನು ರಿಟೈರ್ಡ್ ಔಟ್ ಮಾಡಿಸಿ ಮಿಚೆಲ್ ಸ್ಯಾಂಟ್ನರ್‌ರನ್ನು ಮೈದಾನಕ್ಕೆ ಇಳಿಸಿದ ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜ್‌ಮೆಂಟ್‌ನ ನಡೆ ಭಾರೀ ಟೀಕೆಗೆ ಕಾರಣವಾಗಿದೆ.
204 ರನ್‌ನ ಚೇಸಿಂಗ್‌ನ ವೇಳೆ ತಿಲಕ್ ವರ್ಮ್ ಇಂಪ್ಯಾಕ್ಟ್ ಸಬ್ ಆಗಿ ಮೈದಾನಕ್ಕೆ ಇಳಿದಿದ್ದರು. ಆದರೆ, 23 ಎಸೆತಗಳಲ್ಲಿ ಕೇವಲ 25 ರನ್ ಬಾರಿಸಿದ್ದು ತಂಡದ ಸಿಟ್ಟಿಗೆ ಕಾರಣವಾಗಿತ್ತು. ಇದರಿಂದಾಗಿ ಚೇಸ್ ಮುಗಿಯಲು ಇನ್ನು 7 ಎಸೆತಗಳು ಬಾಕಿ ಇರುವಾಗ ತಿಲಕ್ ವರ್ಮರನ್ನು ರಿಟೈರ್ಡ್ ಹರ್ಟ್ ಮಾಡಿಸಿ ಮಿಚೆಲ್ ಸ್ಯಾಂಟ್ನರ್‌ರನ್ನು ಮೈದಾನಕ್ಕೆ ಇಳಿಸಲಾಗಿತ್ತು. ಆ ಮೂಲಕ ಐಪಿಎಲ್‌ನಲ್ಲಿ ರಿಟೈರ್ಡ್ ಹರ್ಟ್ ಆಗಿ ಹೊರಹೋದ ನಾಲ್ಕನೇ ಆಟಗಾರ ಎನಿಸಿಕೊಂಡರು.
ಹಾಗಂತ ತಿಲಕ್‌ಗೆ ಯಾವುದೇ ಇಂಜುರಿ ಕೂಡ ಆಗಿರಲಿಲ್ಲ. ಅವರ ನಿಧಾನಗತಿಯ ಬ್ಯಾಟಿಂಗ್ ಕಾರಣಕ್ಕಾಗಿ ಮುಂಬೈ ಈ ನಿರ್ಧಾರ ಮಾಡಿತ್ತು. ಆದರೆ, ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವರಿಗೆ ಈ ನಿರ್ಧಾರ ಇಷ್ಟವಾಗಿಲ್ಲ. ತಿಲಕ್ ವರ್ಮರನ್ನು ರಿಟೈರ್ಡ್ ಹರ್ಟ್ ಮಾಡುವ ನಿರ್ಧಾರ ಮಾಡಿದಾಗ ಸೂರ್ಯಕುಮಾರ್ ಯಾದವ್ ಬೇಸರ ತೋಡಿಕೊಂಡಿದ್ದು ಟಿವಿ ಕ್ಯಾಮೆರಾದಲ್ಲಿಯೇ ದಾಖಲಾಗಿತ್ತು. ಒಬ್ಬ ಆಟಗಾರನಾಗಿ ಇದು ತಿಲಕ್ ವರ್ಮ ಅವರ ಆತ್ಮವಿಶ್ವಾಸದ ಮೇಲೆ ಬೀಳುವ ದೊಡ್ಡ ಪೆಟ್ಟು ಎಂದರೂ ತಪ್ಪಾಗಲಾರದು.
ಯಾವುದೇ ಮ್ಯಾಚ್‌ನಲ್ಲಿಯೂ ಮಿಚೆಲ್ ಸ್ಯಾಂಟ್ನರ್, ತಿಲಕ್ ವರ್ಮಗಿಂತ ಉತ್ತಮ ಸಿಕ್ಸ್ ಹಿಟ್ಟರ್ ಆಗೋಕೆ ಸಾಧ್ಯವೇ ಇಲ್ಲ. ಕ್ರೀಸ್‌ನಲ್ಲಿ ಎಷ್ಟೇ ಕಷ್ಟಪಡುತ್ತಿದ್ದರೂ, ಸೆಟ್ ಬ್ಯಾಟ್ಸ್‌ಮನ್ ಸಿಕ್ಸರ್ ಹೊಡೆಯುವ ಚಾನ್ಸ್ ಅಧಿಕವಾಗಿರುತ್ತದೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಿರ್ಧಾರಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ವೀರೇಂದ್ರ ಸೆಹ್ವಾಗ್ ಕೂಡ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಕೊನೆಯ 7 ಎಸೆತಗಳಲ್ಲಿ ತಿಲಕ್ ವರ್ಮಾಗಿಂತ ಸ್ಯಾಂಟ್ನರ್ ಉತ್ತಮ ಎಂದು ನೀವು ಭಾವಿಸಿದ್ದರೆ, ಹಾರ್ದಿಕ್ ಪಾಂಡ್ಯ ಕೊನೆಯ ಓವರ್‌ನಲ್ಲಿ ಅವರಿಗೆ ಸ್ಟ್ರೈಕ್ ನೀಡಲಿಲ್ಲ ಏಕೆ?' ಎಂದು ಪ್ರಶ್ನೆ ಮಾಡಿದ್ದಾರೆ. ಮಾಜಿ ಸ್ಪಿನ್ನರ್ ಹಾಗೂ ವಿಶ್ಲೇಷಕರಾಗಿರುವ ಮುರಳಿ ಕಾರ್ತಿಕ್ ಕೂಡ ಇದೇ ವಿಚಾರವನ್ನು ಪ್ರಶ್ನೆ ಮಾಡಿದ್ದಾರೆ. ಮಿಚೆಲ್ ಸ್ಯಾಂಟ್ನರ್ ಸಿಕ್ಸರ್ ಬಾರಿಸೋಕೆ ಬೆಸ್ಟ್ ಎಂದು ನಿಮಗೆ ಅನಿಸಿದ್ದರೆ, ಅವರಿಗೆ ಯಾಕೆ ಕೊನೆಯ ಓವರ್‌ನಲ್ಲಿ ಸ್ಟ್ರೈಕ್ ನೀಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಚೆಪಾಕ್‌ನಲ್ಲಿ ಟೀಂ ಇಂಡಿಯಾಗೆ ಗೆಲುವಿನ ತಿಲಕ! ಇಂಗ್ಲೆಂಡ್ ಎದುರು ಸತತ ಎರಡನೇ ಗೆಲುವು
ಐಪಿಎಲ್‌ನಲ್ಲಿ ಇದಕ್ಕೂ ಮುನ್ನ ಮೂರು ಬಾರಿ ಆಟಗಾರರು ರಿಟೈರ್ಡ್ ಹರ್ಟ್ ಆಗಿದ್ದರು. 2022ಲ್ಲಿ ಲಕ್ನೋ ವಿರುದ್ಧ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಆರ್.ಅಶ್ವಿನ್, 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಥರ್ವ ತೈಡೆ ಹಾಗೂ ಅದೇ ವರ್ಷ ಮುಂಬೈ ಇಂಡಿಯನ್ಸ್ ವಿರುದ್ಧ ಸಾಯಿ ಸುದರ್ಶ್ ರಿಟೈರ್ಡ್ ಹರ್ಟ್ ಆಗಿದ್ದರು.
ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಸ್ಪೋಟಕ ಸೆಂಚುರಿ: ಭಾರತದ ಮುಡಿಗೆ ಟಿ20 ಸರಣಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.