ಲಖನೌ ರನ್ ಮಳೆಯಲ್ಲಿ ಕೊಚ್ಚಿಹೋದ ಮುಂಬೈ ಇಂಡಿಯನ್ಸ್! ಪಾಂಡ್ಯ ಪಡೆಗೆ ಟೂರ್ನಿಯಲ್ಲಿ 3ನೇ ಸೋಲು

Published : Apr 05, 2025, 06:24 AM ISTUpdated : Apr 05, 2025, 06:49 AM IST
ಲಖನೌ ರನ್ ಮಳೆಯಲ್ಲಿ ಕೊಚ್ಚಿಹೋದ ಮುಂಬೈ ಇಂಡಿಯನ್ಸ್! ಪಾಂಡ್ಯ ಪಡೆಗೆ ಟೂರ್ನಿಯಲ್ಲಿ 3ನೇ ಸೋಲು

ಸಾರಾಂಶ

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 12 ರನ್‌ಗಳಿಂದ ಸೋತಿದೆ. ಲಖನೌ 203 ರನ್ ಗಳಿಸಿದರೆ, ಮುಂಬೈ 191 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ 63 ರನ್ ಗಳಿಸಿದರು. ಮಿಚೆಲ್ ಮಾರ್ಷ್ 60 ರನ್ ಗಳಿಸಿ ಮಿಂಚಿದರು. ಹಾರ್ದಿಕ್ ಪಾಂಡ್ಯ ಐದು ವಿಕೆಟ್ ಪಡೆದರು. ದಿಗ್ವೇಶ್ ನೋಟ್‌ಬುಕ್ ಸೆಲೆಬ್ರೇಷನ್ ಮಾಡಿದರು.

ಲಖನೌ: ರನ್‌ ಹೊಳೆ ಹರಿದ ಶುಕ್ರವಾರದ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 12 ರನ್‌ ವೀರೋಚಿತ ಸೋಲನುಭವಿಸಿದೆ. ಬೌಲಿಂಗ್‌ ಬಳಿಕ ಬ್ಯಾಟಿಂಗ್‌ನಲ್ಲೂ ಫೇಲಾದ ಮುಂಬೈ ಟೂರ್ನಿಯಲ್ಲಿ 3ನೇ ಸೋಲುಂಡಿತು. ರಿಷಭ್‌ ಪಂತ್‌ ನಾಯಕತ್ವದ ಲಖನೌ 4 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಲಖನೌ 8 ವಿಕೆಟ್‌ಗೆ 203 ರನ್‌ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ಮುಂಬೈ 5 ವಿಕೆಟ್‌ಗೆ 191 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕರಾದ ವಿಲ್‌ ಜ್ಯಾಕ್ಸ್‌(5 ರನ್‌) ಹಾಗೂ ರಿಕೆಲ್ಟನ್(10) ವಿಫಲರಾದರು. ಆದರೆ ನಮನ್‌ ಧೀರ್‌ 24 ಎಸೆತಕ್ಕೆ 46 ರನ್‌ ಸಿಡಿಸಿದರು. ಮತ್ತೊಂದೆಡೆ ಸ್ಫೋಟಕ ಆಟವಾಡಿದ ಸೂರ್ಯಕುಮಾರ್ 43 ಎಸೆತಕ್ಕೆ 63 ರನ್‌ ಬಾರಿಸಿದರು. ಆದರೆ 17ನೇ ಓವರ್‌ನಲ್ಲಿ ಸೂರ್ಯ ಔಟಾಗುವುದರೊಂದಿಗೆ ತಂಡ ಸೋಲಿನ ಸುಳಿಗೆ ಸಿಲುಕಿತು. 

ಧೋನಿ ನಾಯಕತ್ವ ಕಣ್ತುಂಬಿಕೊಳ್ಳಲು ರೆಡಿಯಾಗಿ, 2 ವರ್ಷ ಬಳಿಕ ಸಿಎಸ್‌ಕೆ ಕ್ಯಾಪ್ಟೆನ್ಸಿ

ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ(28 ರನ್‌), ತಿಲಕ್‌ ವರ್ಮಾ(25 ರನ್)ಗೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. 2 ಓವರ್‌ಗೆ 29 ರನ್‌ ಬೇಕಿದ್ದಾಗ 19ನೇ ಓವರ್‌ನಲ್ಲಿ ಕೇವಲ 7 ರನ್‌ ನೀಡಿದ ಶಾರ್ದೂಲ್‌ ಲಖನೌಗೆ ಗೆಲುವು ತಂದುಕೊಟ್ಟರು. ಕೊನೆ ಓವರಲ್ಲಿ 22 ರನ್‌ ಬೇಕಿದ್ದಾಗ ಆವೇಶ್ ಖಾನ್ ಕೇವಲ 9 ರನ್ ಬಿಟ್ಟುಕೊಟ್ಟರು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡವು 12 ರನ್ ಅಂತರದ ಸೋಲು ಅನುಭವಿಸಿತು.

ಮಾರ್ಷ್‌, ಮಾರ್ಕ್‌ರಮ್‌ ಅಬ್ಬರ: 

ಲಖನೌಗೆ ಈ ಪಂದ್ಯದಲ್ಲೂ ಮಿಚೆಲ್‌ ಮಾರ್ಷ್ ಆಸರೆಯಾದರು. ಅವರ ಜೊತೆಗೆ ಏಡನ್‌ ಮಾರ್ಕ್‌ರಮ್‌ ಕೂಡಾ ಅಬ್ಬರಿಸಿದರು. ಪವರ್‌ಪ್ಲೇನಲ್ಲೇ ಅರ್ಧಶತಕ ಪೂರೈಸಿದ ಮಾರ್ಷ್‌, 31 ಎಸೆತಗಳಲ್ಲಿ 60 ರನ್‌ ಸಿಡಿಸಿದರು. ಮಾರ್ಕ್‌ರಮ್ 38 ಎಸೆತಕ್ಕೆ 53 ರನ್‌ ಬಾರಿಸಿದರು. ಆಯುಶ್‌ ಬದೋನಿ 30, ಡೇವಿಡ್‌ ಮಿಲ್ಲರ್‌ 27 ರನ್‌ ಕೊಡುಗೆ ನೀಡಿದರು. ರಿಷಭ್‌ ಪಂತ್‌(2) ಮತ್ತೆ ವೈಫಲ್ಯ ಅನುಭವಿಸಿದರು.

ನನ್ನ ಕೋಣೆಯಲ್ಲಿರುವ ಸುಂದರ ಯುವತಿ ನನ್ನ ಗರ್ಲ್‌ಫ್ರೆಂಡ್, ರಿಲೇಶನ್‌ಶಿಪ್ ಖಚಿತಪಡಿಸಿದ ಶಿಖರ್ ಧವನ್

ಸ್ಕೋರ್‌: ಲಖನೌ 8 ವಿಕೆಟ್‌ಗೆ 203 (ಮಾರ್ಷ್‌ 60, ಮಾರ್ಕ್‌ರಮ್‌ 53, ಹಾರ್ದಿಕ್‌ 5-36), ಮುಂಬೈ 5 ವಿಕೆಟ್‌ಗೆ 191 (ಸೂರ್ಯಕುಮಾರ್‌ 67, ನಮನ್‌ ಧೀರ್ 46, ದಿಗ್ವೇಶ್‌ 1-21)

01 ನಾಯಕ

ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಗೊಂಚಲು ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಹಾರ್ದಿಕ್ ಪಾಂಡ್ಯ ಪಾತ್ರರಾಗಿದ್ದಾರೆ.

01ನೇ ಬಾರಿ

ಹಾರ್ದಿಕ್‌ ಮೊದಲ ಬಾರಿ ಟಿ20 ಕ್ರಿಕೆಟ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದರು. 2023ರಲ್ಲಿ ನ್ಯೂಜಿಲೆಂಡ್‌ ವಿರುದ್ಧ 16 ರನ್‌ಗೆ 4 ವಿಕೆಟ್‌ ಪಡೆದಿದ್ದು ಈ ವರೆಗಿನ ಸಾಧನೆ.

ದಂಡ ಬಿದ್ದರೂ ಸೆಲೆಬ್ರೇಷನ್‌ ಬಿಡದ ದಿಗ್ವೇಶ್‌!

ಪಂಜಾಬ್‌ ವಿರುದ್ಧ ಪಂದ್ಯದಲ್ಲಿ ಪ್ರಿಯಾನ್ಶ್‌ ಆರ್ಯರನ್ನು ಔಟ್‌ ಮಾಡಿದ್ದ ಲಖನೌ ಸ್ಪಿನ್ನರ್‌ ದಿಗ್ವೇಶ್‌, ನೋಟ್‌ಬುಕ್‌ ಸಂಭ್ರಮಾಚರಣೆ ಮಾಡಿ ಭಾರೀ ದಂಡಕ್ಕೆ ಗುರಿಯಾಗಿದ್ದರು. ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಲಾಗಿತ್ತು. ಆದರೆ ಮುಂಬೈ ವಿರುದ್ಧ ಪಂದ್ಯದಲ್ಲೂ ದಿಗ್ವೇಶ್‌ ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!